ಮುಂಬೈನಲ್ಲಿ ನಿರ್ಮಾಣವಾಗುತ್ತಿದೆ ಅಲಿಯಾ ಮತ್ತು ರಣಬೀರ್ ಕನಸಿನ ಮನೆ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಜೋಡಿ ಹಕ್ಕಿಗಳು ಎಂದೇ ಗುರುತಿಸಿಕೊಂಡಿರುವ ಅಲಿಯಾ ಭಟ್ ಮತ್ತು ರಣಬೀರ್ ತಮ್ಮ ಕನಸಿನ ಮನೆ ನಿರ್ಮಾಣ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರುವ ತಯಾರಿಯಲ್ಲಿರುವ ಈ ಜೋಡಿ ಇದೀಗ ಹೊಸ ಮನೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂಬೈನ ಬಾಂದ್ರದಲ್ಲಿರುವ ರಣಬೀರ್ ಕಪೂರ್ ಅವರ ಹೊಸ ಮನೆ ವಿನ್ಯಾಸ ಕಾರ್ಯ ನಡೆಯುತ್ತಿದೆ.

ಹೊಸ ಮನೆಯನ್ನು ನೋಡಲು ಅಲಿಯಾ ಭಟ್ ಭಾವಿ ಪತಿ ರಣಬೀರ್ ಪೂರ್ ಮತ್ತು ರಣಬೀರ್ ತಾಯಿ ನೀತು ಕಪೂರ್ ಜೊತೆ ಆಗಮಿಸಿದ್ದರು. ಮೂವರು ಮನೆ ವೀಕ್ಷಿಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಇತ್ತೀಚಿಗಷ್ಟೆ ಈ ಜೋಡಿ ಜೋಧ್ಪುರದಿಂದ ಟ್ರಿಪ್ ಮುಗಿಸಿ ವಾಪಸ್ ಆಗಿದ್ದಾರೆ. ರಣಬೀರ್ ಕಪೂರ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಭಾವಿ ಪತಿಯ ಹಟ್ಟುಹಬ್ಬವನ್ನು ಆಲಿಯಾ ಜೋಧ್ಪುರದಲ್ಲಿ ಆಚರಿಸಿದ್ದಾರೆ. ಇಬ್ಬರು ಜೋಧ್ಪುರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜೋಧ್ಪುರದಿಂದ ವಾಪಸ್ ಆಗುತ್ತಿದ್ದಂತೆ ಅಲಿಯಾ ರಣಬೀರ್-ಅಲಿಯಾ ಹೊಸ ಮನೆ ನಿರ್ಮಾಣದ ಕಡೆ ಗಮನ ಹರಿಸಿದ್ದಾರೆ. ಇದು ರಣಬೀರ್ ಅವರ ಕನಸಿನ ಮನೆ ಎಂದು ಹೇಳಲಾಗುತ್ತಿದೆ. ಈ ಮನೆ ಕಪೂರ್ ಕುಟುಂಬಕ್ಕೆ ತುಂಬನೆ ವಿಶೇಷ ಎಂದು ಹೇಳಲಾಗುತ್ತಿದೆ. ಈ ಮನೆ ನಿರ್ಮಾಣದ ಬಗ್ಗೆ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಕೂಡ ವಿಶೇಷ ಗಮನ ಹರಿಸಿದ್ದರು. ರಿಷಿ ಕಪೂರ್ ಸಾಯುವ ಮೊದಲು ಆಗಾಗ ಹೊಸ ಮನೆಗೆ ಭೇಟಿ ನೀಡಿ, ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರಂತೆ.

Ranbir Kapoor and Alia Bhatt visit their new house construction

ಅಲಿಯಾ ಮತ್ತು ರಣಬೀರ್ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ವರ್ಷದ ಡಿಸೆಂಬರ್ ನಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರು ಹಸೆಮಣೆ ಏರುವುದು ಪಕ್ಕ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಲವ್ ಬರ್ಡ್ಸ್ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಅಲಿಯಾ ಮತ್ತು ರಣಬೀರ್ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ಬಾಲಿವುಡ್‌ನ ಬಹುಬೇಡಿಕೆಯ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಲಿಯಾ ಸದ್ಯ ಆರ್ ಆರ್ ಆರ್ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಸಿನಿಮಾ ಜೊತೆಗೆ ಬಾಲಿವುಡ್‌ನ ಗಂಗೂಬಾಯಿ ಸಿನಿಮಾ ಕೂಡ ತೆರೆಗೆ ಬರುತ್ತಿದೆ.

ಇನ್ನು ರಣಬೀರ್ ಕಪೂರ್ ಸಹ ಮೂರ್ನಾಲ್ಕು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಬ್ರಹ್ಮಾಸ್ತ್ರ, ಶಂಶೇರಾ ಹಾಗೂ ಇನ್ನು ಹೆಸರಿಡದ ಸಿನಿಮಾ ರಣಬೀರ್ ಬಳಿ ಇದೆ. ರಣಬೀರ್ ಕಪೂರ್ ಸಂಜು ಸಿನಿಮಾ ಬಳಿಕ ಮತ್ತೆ ತೆರೆ ಮೇಲೆ ಬಂದಿಲ್ಲ. ಹಾಗಾಗಿ ರಣಬೀರ್ ಮುಂದಿನ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Bollywood Actor Ranbir Kapoor and Alia Bhatt visit their new house construction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X