2 ವರ್ಷಗಳ ನಂತರ ಮತ್ತೆ ಜೊತೆಯಾಗಲಿದ್ದಾರೆ ರಣಬೀರ್, ದೀಪಿಕಾ!
ಬಾಲಿವುಡ್ ನ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಸದಾ ಬಿ ಟೌನ್ ನ ಹಾಟ್ ನ್ಯೂಸ್. ಮೊನ್ನೆಯಷ್ಟೇ ರಣವೀರ್ ಸಿಂಗ್ ಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದ ದೀಪಿಕಾ ಈಗ ರಣಬೀರ್ ಜೊತೆ ಸುದ್ದಿಯಲ್ಲಿದ್ದಾರೆ.[ರಣವೀರ್ ಮತ್ತು ದೀಪಿಕಾ ದೂರವಾಗಲು ಬನ್ಸಾಲಿ'ಯೇ ಕಾರಣ..]
ಜಸ್ಟ್ ಕೆಲವೇ ವರ್ಷಗಳ ಹಿಂದಷ್ಟೇ ತೆರೆ ಮೇಲೆ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಕೆಮಿಸ್ಟ್ರಿ ನೋಡಿ ಜನರು ಮಾರ್ಡನ್ ಶಾರುಖ್ ಖಾನ್ ಮತ್ತು ಕಾಜೋಲ್ ಎಂದೇ ಹೋಲಿಸುತ್ತಿದ್ದರು. ಆದರೆ ಈ ಇಬ್ಬರು ಕಡೆಯದಾಗಿ ಕಾಣಿಸಿಕೊಂಡಿದ್ದು 2015 ರ 'ತಮಷಾ' ಸಿನಿಮಾದಲ್ಲಿ. ನಂತರ ಯಾವುದೇ ಚಿತ್ರದಲ್ಲೂ ಒಟ್ಟಾಗಿ ತೆರೆ ಹಂಚಿಕೊಳ್ಳದ ದೀಪಿಕಾ ಮತ್ತು ರಣಬೀರ್ ಇತ್ತೀಚಿನ ವರದಿಗಳ ಪ್ರಕಾರ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದಿದೆ.

ಹಾಗಂತ ಸಿನಿಮಾದಲ್ಲಿ ನಾಯಕ-ನಾಯಕಿ ಆಗಿ ಕಾಣಿಸಿಕೊಳ್ಳುತ್ತಿಲ್ಲ
ನಟ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಈಗ ಒಂದಾಗಿ ಕಾಣಿಸಿಕೊಳ್ಳಲಿರುವುದು ಯಾವುದೇ ಸಿನಿಮಾಗಾಗಿ ಅಲ್ಲವಂತೆ. ಬದಲಾಗಿ ಇಬ್ಬರೂ ಪ್ರಖ್ಯಾತ ಮೊಬೈಲ್ ಬ್ರ್ಯಾಂಡ್ ಒಂದರ ಜಾಹೀರಾತುಗಾಗಿ ಎಂದು ತಿಳಿದಿದೆ.

ಮೇ ತಿಂಗಳ ಒಳಗಾಗಿ ಚಿತ್ರೀಕರಣ
ಅಂದಹಾಗೆ ಫೋನ್ ಕಂಪನಿ ದೀಪಿಕಾ ಮತ್ತು ರಣಬೀರ್ ಇಬ್ಬರು ತಮ್ಮ ಮುಂದಿನ ಚಿತ್ರಗಳಲ್ಲಿ ತೊಡಗಿಕೊಳ್ಳುವ ಮುನ್ನ, ಮೇ ತಿಂಗಳ ಒಳಗಾಗಿ ಜಾಹೀರಾತು ಚಿತ್ರೀಕರಣ ಮಾಡಲಿದೆಯಂತೆ.

ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಸದ್ಯದಲ್ಲಿ ಈಗ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರೀಕರಣದಲ್ಲಿ ಬಿಜಿ ಆಗಿದ್ದಾರೆ.

ರಣಬೀರ್ ಕಪೂರ್
ರಣಬೀರ್ ಕಪೂರ್ ಸಹ ಅನುರಾಗ್ ಬಸು ನಿರ್ದೇಶನದ 'ಜಗ್ಗ ಜಾಸೂಸ್' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಗೆ ಕತ್ರಿನಾ ಕೈಫ್ ನಾಯಕಿ ಆಗಿ ಅಭಿನಯಿಸಿದ್ದಾರೆ.

ರಣಬೀರ್ ಮತ್ತು ದೀಪಿಕಾ ಜೊತೆಯಲ್ಲಿ ಕಾಣಿಸಿಕೊಂಡಿದ್ದು..
ತೆರೆ ಮೇಲೆ ಬಂದಾಗ ತಮ್ಮ ಕೆಮಿಸ್ಟ್ರಿಯಿಂದ ಮಾರ್ಡನ್ ಶಾರುಖ್ ಖಾನ್ ಮತ್ತು ಕಾಜೋಲ್ ರಂತೆ ಸಿನಿ ಪ್ರಿಯರಿಗೆ ಫೀಲ್ ನೀಡುವ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ, ಒಟ್ಟಾಗಿ ನಟಿಸಿದ ಕೊನೆಯ ಸಿನಿಮಾ 'ತಮಷಾ'.


Click it and Unblock the Notifications











