ಮದುವೆ ಬಳಿಕ ಮಾಜಿ ಪ್ರೇಮಿಯ ಜೊತೆ ದೀಪಿಕಾ ಸಿನಿಮಾ.!

ಒಂದು ಕಾಲದ ಬಾಲಿವುಡ್ ನ ಲವ್ ಬರ್ಡ್ಸ್ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಮತ್ತೆ ಒಂದಾಗುತ್ತಿದ್ದಾರೆ. ಇದು ರಿಯಲ್ ಆಗಿ ಅಲ್ಲ ರೀಲ್ ಮೇಲೆ. ಇಬ್ಬರ ಪ್ರೀತಿ ಬ್ರೇಕ್ ಅಪ್ ಆದ ನಂತರ ರಣಬೀರ್ ಮತ್ತು ದೀಪಿಕಾ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ನಾಲ್ಕು ವರ್ಷದ ನಂತರ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

ಬಾಲಿವುಡ್ ನ ಹಿಟ್ ಜೋಡಿ ಎನಿಸಿಕೊಂಡಿರುವ ರಣಬೀರ್ ಮತ್ತು ದೀಪಿಕಾ ನಾಲ್ಕನೆ ಬಾರಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. 'ಬಚನಾ ಏ ಹಸೀನೋ', 'ಯೇ ಜವಾನಿ ಹೇ ದಿವಾನಿ' ಮತ್ತು 'ತಮಾಷ' ಚಿತ್ರದ ನಂತರ ಈ ಜೋಡಿ ಒಟ್ಟಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಇತ್ತೀಚಿಗಷ್ಟೆ ರಣಬೀರ್ ಮತ್ತು ದೀಪಿಕಾ ಫ್ಯಾಷನ್ ಶೋ ಒಂದರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಮನ ಸೆಳೆದಿದ್ದರು. ಈಗ ಸಿನಿಮಾ ಮೂಲಕ ಈ ಹಿಟ್ ಜೋಡಿಯನ್ನು ಒಟ್ಟಿಗೆ ಕರೆತರುತ್ತಿದ್ದಾರೆ ನಿರ್ದೇಶಕ ಲವ್ ರಂಜನ್. ಇನ್ನೂ ಹೆಸರಿಡದ ಪಕ್ಕಾ ಆಕ್ಷನ್-ಥ್ರಿಲ್ಲಿಂಗ್ ಚಿತ್ರದಲ್ಲಿ ಇಬ್ಬರು ಒಂದಾಗುತ್ತಿದ್ದಾರೆ.

Ranbir Kapoor and Deepika Padukone to reunite for Luv Ranjan movie

ವಿಶೇಷ ಅಂದ್ರೆ ಈ ಚಿತ್ರದಲ್ಲಿ ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಸದ್ಯ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ದೀಪಿಕಾ ಕೂಡ 'ಚಪಾಕ್' ಸಿನಿಮಾದ ಮೂಲಕ ಚಾಲೆಂಜಿಂಗ್ ಪಾತ್ರದೊಂದಿಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಗಳ ಬಳಿಕ ರಣಬೀರ್ ಮತ್ತು ದೀಪಿಕಾ ಸಿನಿಮಾ ಸೆಟ್ಟೇರುವ ಸಾದ್ಯತೆ ಇದೆ.

ರಣ್ವೀರ್ ಸಿಂಗ್ ಜೊತೆ ಹಸಮಣೆ ಏರಿದ ನಂತರ ದೀಪಿಕಾ ಮಾಜಿ ಪ್ರಿಯತಮನ ಜೊತೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹೆಚ್ಚು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಅಷ್ಟೇ ನಿರೀಕ್ಷೆ ಹುಟ್ಟಿಸಿದೆ.

More from Filmibeat

English summary
Bollyowod actor Ranbir Kapoor and Deepika Padukone to reunite for director Luv Ranjan's next movie after tamasha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X