ನೌಕರರ ಗಲಾಟೆ, ರಣ್ಬೀರ್-ಶ್ರದ್ಧಾ ಸಿನಿಮಾ ಚಿತ್ರೀರಕರಣಕ್ಕೆ ಅಡಚಣೆ

ನಟ ರಣ್ಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಸಿನಿಮಾ ಮತ್ತೊಮ್ಮೆ ನಿಂತಿದೆ. ಸಿನಿಮಾಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ.

ರಣ್ಬೀರ್ ಹಾಗೂ ಶ್ರದ್ಧಾ ಅವರ ಸಿನಿಮಾದ ಹಾಡೊಂದರ ಚಿತ್ರೀಕರಣ ಮುಂಬೈನ ಸೆಟ್‌ ಒಂದರಲ್ಲಿ ನಡೆಯುತ್ತಿತ್ತು. ಹಾಡು ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಮುತ್ತಿಗೆ ಹಾಕಿದ ಸುಮಾರು 350 ನೌಕರರು ಪ್ರತಿಭಟನೆ ನಡೆಸಿ ಚಿತ್ರೀಕರಣ ನಿಲ್ಲಿಸಿದ್ದಾರೆ.

ರಣ್ಬೀರ್-ಶ್ರದ್ಧಾರ ಈ ಸಿನಿಮಾದ ಚಿತ್ರೀಕರಣ ಕಳೆದ ವರ್ಷದಿಂದಲೂ ನಡೆಯುತ್ತಿದ್ದು, ಈ ಹಿಂದೆ ಅಕ್ಟೋಬರ್‌ನಲ್ಲಿ ಸಹ ಚಿತ್ರೀಕರಣ ನಡೆದಿತ್ತು. ಆಗ ಚಿತ್ರೀಕರಣದಲ್ಲಿ ಕೆಲಸ ಮಾಡಿದ್ದ ನೌಕರರಿಗೆ ಸಂಬಳ ನೀಡದೆ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಮತ್ತೆ ಚಿತ್ರೀಕರಣವನ್ನು ಪ್ರಾರಂಭಿಸಿದ್ದು ಹೊಸ ನೌಕರರನ್ನು ತೆಗೆದುಕೊಳ್ಳಲಾಗಿದೆ. ಅದೇ ಕಾರಣಕ್ಕೆ ಈ ಹಿಂದೆ ಕೆಲಸ ಮಾಡಿದ್ದ ನೌಕರರು ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆ ಸಿನಿಮಾಕ್ಕೆ ಕೆಲಸ ಮಾಡಿದ್ದ ನೌಕರರಿಗೆ 1.22 ಕೋಟಿ ರುಪಾಯಿ ಉಳಿಸಿಕೊಂಡಿದ್ದಾರೆ ನಿರ್ಮಾಪಕರು. ಬಾಕಿ ಹಣ ನೀಡುವವ ವರೆಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲವೆಂದು ನೌಕರರು ಪಟ್ಟು ಹಿಡಿದಿದ್ದಾರೆ.

Ranbir Kapoor And Shradha Kapoor Movie Stopped Again

ಘಟನೆಯು ಮುಂಬೈನ ಅರೆಯ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಆರಂಭದಲ್ಲಿ ಗಲಾಟೆ ಮಾಡಿದ ಕೆಲವು ನೌಕರರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನೌಕರರ ಯೂನಿಯನ್ ಸದಸ್ಯರು ಪೊಲೀಸ್ ಠಾಣೆ ಮುಂದೆ ಹಾಜರಾಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಸೆಟ್‌ಗೂ ಮುತ್ತಿಗೆ ಹಾಕಿದ್ದಾರೆ.

ಆದರೆ ಸೆಟ್‌ಗೆ ಮುತ್ತಿನ ಹಾಕಿದ ನೌಕರರನ್ನು ಸಹ ಪೊಲೀಸರು ವ್ಯಾನ್ ಬಳಸಿ ಕೊಂಡೊಯ್ದಿದ್ದಾರೆ. ಅದಾದ ಬಳಿಕ ಚಿತ್ರೀಕರಣ ಮುಂದುವರೆಸಲಾಗಿದೆ.

ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಲವ್ ಫಿಲಮ್ಸ್‌ ಹೇಳಿರುವಂತೆ, ನೌಕರರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ತಾವು ಏಜೆನ್ಸಿಗೆ ಹಣ ನೀಡಿದ್ದೇವೆ ಆದರೆ ಅವರು ನೌಕರರಿಗೆ ಹಣ ನೀಡಿಲ್ಲ ಎಂದಿದೆ. ನಿರ್ಮಾಣ ಸಂಸ್ಥೆಯು ಎಫ್‌ವೈಸಿಇಗೆ ಪತ್ರ ಬರೆದಿದ್ದು, ಪ್ರೊಡಕ್ಷನ್ ಡಿಸೈನರ್‌ಗಳಾದ ದೀಪಂಕರ್ ದಾಸ್ ಗುಪ್ತಾಗೆ ಪೂರ್ಣ ಹಣ ನೀಡಿರುವುದಾಗಿ ಹೇಳಿದೆ. ಅಲ್ಲದೆ, ನೌಕರರಿಗೆ ಹಣ ತಲುಪದೇ ಇರುವುದಕ್ಕೆ ತಾವು ಜವಾಬ್ದಾರರಲ್ಲ'' ಎಂದು ಸಹ ಹೇಳಿದೆ.

'ನಾವು ಹಣ ನೀಡದೇ ಇದ್ದಿದ್ದರೆ, ಧೈರ್ಯವಾಗಿ ಚಿತ್ರೀಕರಣ ಮಾಡಲು ಆಗುತ್ತಿತ್ತೆ? ನಾವು ಎಲ್ಲ ಬಾಕಿ ಹಣವನ್ನು ನೀಡಿದ್ದೇವೆ'' ಎಂದಿದೆ ಲವ್ ಫಿಲಮ್ಸ್.

More from Filmibeat

English summary
Ranbir Kapoor and Shradha Kapoor's new movie stopped again. Some workers did protest in the movie set for not doing payment to them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X