ಅಯ್ಯೋ, 2000 ಕೋಟಿ ಬಜೆಟ್ 'ರಾಮಾಯಣ' ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಬೆಲೆ ಇಷ್ಟೇನಾ?

ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಮೊದಲ ಭಾಗ ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ ಕೊನೆ ವಾರ ಬಿಡುಗಡೆ ಆಗಲಿದೆ. ಸದ್ಯ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಶುರುವಾಗಿದೆ.

4000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ವಿದೇಶಗಳಲ್ಲಿ ದೊಡ್ಡದಾಗಿ 'ರಾಮಾಯಣ' ಸಿನಿಮಾ ಬಿಡುಗಡೆ ಪ್ರಯತ್ನಗಳು ನಡೀತಿದೆ. ಭಾರತದ ಕಾವ್ಯವನ್ನು ವಿದೇಶಿಗರಿಗೆ ತೋರಿಸಬೇಕು ಎನ್ನುವ ಉದ್ದೇಶದಿಂದ ಸಿನಿಮಾ ಮಾಡುತ್ತಿರುವುದಾಗಿ ಚಿತ್ರತಂಡ ಹೇಳ್ತಾ ಬರ್ತಿದೆ. ಅದಕ್ಕೆ ತಕ್ಕಂತೆ ಸಿನಿಮಾ ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್, ಮಾರ್ಕೆಟಿಂಗ್, ಪ್ರಮೋಷನ್ ಹಾಗೂ ರಿಲೀಸ್ ಪ್ಲ್ಯಾನ್ ನಡೀತಿದೆ. ಸದ್ಯ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ ಎನ್ನುವ ಚರ್ಚೆ ನಡೀತಿದೆ.

Ranbir Kapoor and Yash s Ramayana film Distribution rights reportedly sold for 250cr

ವರದಿಗಳ ಪ್ರಕಾರ ಭಾರತದಲ್ಲಿ 'ರಾಮಾಯಣ' ಮೊದಲ ಭಾಗದ ಡಿಸ್ಟ್ರಿಬ್ಯೂಷನ್ ರೈಟ್ಸ್ ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಪಾಲಾಗಿದೆ. ಕರಣ್ ಜೋಹರ್ ಒಡೆತನದ ಸಂಸ್ಥೆ ಚಿತ್ರದ ಹಕ್ಕುಗಳನ್ನು ಕೊಂಡುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 500 ಕೋಟಿ ರೂ.ಗೆ ಮಾತುಕತೆ ಆರಂಭವಾಯಿತು ಅಂತಿಮವಾಗಿ 250 ಕೋಟಿ ರೂ.ಗೆ ಡೀಲ್ ಕುದುರಿಸಲಾಗಿದೆ ಎಂದು ಹೇಳಲಾಗ್ತಿದೆ. ಇದನ್ನು ಕೇಳಿ ಸಿನಿರಸಿಕರು ಶಾಕ್ ಆಗಿದ್ದಾರೆ. ಅರೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಇಷ್ಟು ಕಮ್ಮಿ ಬೆಲೆಗೆ ಮಾರಾಟವಾಯ್ತಾ ಎಂದು ಹುಬ್ಬೇರಿಸಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ದೊಡ್ಡಮಟ್ಟದ ಸಿನಿಮಾ

ಎರಡು ಭಾಗ ಅಂದ್ರೆ ಒಂದು ಭಾಗಕ್ಕೆ 2000 ಕೋಟಿ ರೂ. ಬಜೆಟ್ ಅಂದುಕೊಂಡ್ರು 250 ಕೋಟಿ ರೂ.ಗೆ ರೈಟ್ಸ್ ಮಾರಾಟ ಕಮ್ಮಿ ಆಯ್ತು ಅಲ್ವಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿತರಕರಿಗೆ 30 ನಿಮಿಷಗಳ ಫುಟೇಜ್ ತೋರಿಸಿ ಡೀಲ್ ಕುದುರಿಸಿದ್ದಾರೆ ಎನ್ನಲಾಗ್ತಿದೆ. 'ರಾಮಾಯಣ' ಭಾರತದಲ್ಲಿ ಎಲ್ಲರಿಗೂ ಗೊತ್ತಿರುವ ಕಥೆ. ಈಗಾಗಲೇ ಸಿನಿಮಾ, ಧಾರಾವಾಹಿ, ನಾಟಕಗಳ ರೂಪದಲ್ಲಿ ಬಂದು ಹೋಗಿದೆ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ನಮಿತ್ ಮಲ್ಹೋತ್ರಾ. ಅದಕ್ಕೆ ಕನ್ನಡ ನಟ ಯಶ್ ಸಾಥ್ ಕೂಡ ಸಿಕ್ಕಿದೆ. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಪನಾಗಿ ಕೂಡ ರಾಕಿಂಗ್ ಸ್ಟಾರ್ ಕೈ ಜೋಡಿಸಿದ್ದಾರೆ.

ಹಾಲಿವುಡ್ ವೇದಿಕೆಗಳಲ್ಲಿ 'ರಾಮಾಯಣ'

ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಲುಕ್ ರಿವೀಲ್ ಆಗಿದೆ. ಮೊದಲ ಪ್ರೋಮೊ ಬಂದು ಗಮನ ಸೆಳೆದಿದೆ. ಮುಂದೆ ರಾವಣನಾಗಿ ಯಶ್ ಅಬ್ಬರದ ಟೀಸರ್ ರಿಲೀಸ್ ಪ್ರಯತ್ನ ನಡೀತಿದೆ. ಹಾಲಿವುಡ್ ವೇದಿಕೆಗಳಲ್ಲಿ ಸಿನಿಮಾ ಪ್ರಚಾರ ಮಾಡಲಾಗ್ತಿದೆ.

ಜುಲೈ 18ಕ್ಕೆ 'ರಾಮಾಯಣ' ಟ್ರೈಲರ್?

ದೇಶ ವಿದೇಶದ ಹಲವು ಭಾಷೆಗಳಲ್ಲಿ 'ರಾಮಾಯಣ' ಸಿನಿಮಾ ತೆರೆಗಪ್ಪಳಿಸಲಿದೆ. ಮುಖ್ಯವಾಗಿ ಹಾಲಿವುಡ್ ಮಾರ್ಕೆಟ್ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಭಾರತದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾತ್ರ 350 ಕೋಟಿ ರೂ.ಗೆ ಮಾರಾಟವಾಗಿರಬಹುದು. ಆದರೆ ಹಾಲಿವುಡ್ ರೈಟ್ಸ್ ದೊಡ್ಡಮಟ್ಟಕ್ಕೆ ಮಾರಾಟವಾಗಲಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಜುಲೈ 18ಕ್ಕೆ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.

ಯಶ್ ಲುಕ್

ರಾವಣನಾಗಿ ಯಶ್ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು AI ಇಮೇಜ್‌ಗಳು ವೈರಲ್ ಆಗ್ತಿದೆ. ಆದರೆ ಅಧಿಕೃತವಾಗಿ ಅವರ ಪಾತ್ರ ಪರಿಚಯಿಸುವ ಪೋಸ್ಟರ್, ಟೀಸರ್ ಬಂದಿಲ್ಲ. ಈ ಹಿಂದೆ ಬಂದಿರುವ ಎರಡು ಟೀಸರ್‌ಗಳಲ್ಲಿ ರಾವಣ ಯಶ್ ಮುಖ ರಿವೀಲ್ ಮಾಡಿರಲಿಲ್ಲ.

Read more about: ramayana yash ranbir kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X