ಪತ್ನಿಯ ಬಗ್ಗೆ ಕೆಟ್ಟ ಜೋಕ್ ಮಾಡಿ ಕ್ಷಮೆ ಕೇಳಿದ ರಣ್ಬೀರ್
ಪತ್ನಿ ಅಥವಾ ಗರ್ಲ್‌ಫ್ರೆಂಡ್ ಎಂದ ಮಾತ್ರಕ್ಕೆ ಆಕೆಗೆ ಏನು ಬೇಕಾದರೂ ಹೇಳಬಹುದು, ಅದರಲ್ಲೂ ತಮಾಷೆಯ ಹೆಸರಲ್ಲಿ ಏನು ಬೇಕಾದರೂ ಅಂದುಬಿಡಬಹುದು ಎಂಬುದು ಹಲವು ಪುರುಷರ ಅಭಿಪ್ರಾಯ. ರಣ್ಬೀರ್ ಕಪೂರ್ ಸಹ ಹೀಗೆಯೇ ಯೋಚಿಸಿ ಇದೀಗ ತಮ್ಮ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.
ಆಗಿದ್ದಿಷ್ಟು, ಆನ್‌ಲೈನ್ ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಒಟ್ಟಿಗೆ ಭಾಗವಹಿಸಿದ್ದರು. ನೀವೇಕೆ 'ಬ್ರಹ್ಮಾಸ್ತ್ರ' ಸಿನಿಮಾವನ್ನು ಅಗ್ರೆಸಿವ್ ಆಗಿ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
ಅದಕ್ಕೆ ಉತ್ತರಿಸಿದ ಆಲಿಯಾ ಭಟ್ ''ಹೌದು ನಾವು ಎಲ್ಲೆಡೆ ಹೋಗುತ್ತಿಲ್ಲ'' ಎಂದು ಹೇಳಿ 'ನಾಟ್ ಪೆಹ್ಲೋಯಿಂಗ್' (ಎಲ್ಲೆಡೆ ಆವರಿಸಿಕೊಳ್ಳುವುದು, ಅಗಲವಾಗಿರುವುದು, ದಪ್ಪ ಇರುವುದು ಎಂಬ ಅರ್ಥವೂ ಇದೆ) ಎಂಬ ಶಬ್ದ ಬಳಸಿದರು. 'ಪೆಹ್ಲೆಲ್ನಾ' ಶಬ್ದವನ್ನು ಇಂಗ್ಲೀಷ್ ಬಳಸಿ ಆಲಿಯಾ ಬಳಿಸಿದ್ದರು.

ಆಗ ಮಧ್ಯ ಪ್ರವೇಶಿಸಿದ ರಣ್ಬೀರ್ ಕಪೂರ್, ''ಕೆಲವರು ಇಲ್ಲಿ ಪೆಹ್ಲೋಡ್‌ಗಳಿದ್ದಾರೆ'' ಎಂದರು. ರಣ್ಬೀರ್‌ರ ಆ ಮಾತಿಗೆ ಆಲಿಯಾ ಗಾಬರಿಯಾದರು. ನಾನು ದಪ್ಪಗಾಗಿದ್ದೇನೆ ಎಂದು ರಣ್ಬೀರ್ ಹೇಳಿತ್ತಿದ್ದಾರೆಯೇ ಅಥವಾ ಕಾಲಗಿಸಿ ಕುಳಿತಿದ್ದೇನೆಂದು ಹೇಳುತ್ತಿದ್ದಾರೆಯೇ ಎಂದು ಗಾಬರಿಯಾಗಿ ತಮ್ಮನ್ನು ತಾವೇ ಒಮ್ಮೆ ನೋಡಿಕೊಂಡರು. ರಣ್ಬೀರ್ ಈ ಮಾತನ್ನು ತಮಾಷೆಯಾಗಿಯೇ ಹೇಳಿದ್ದರು. ಆದರೆ ಈ ಜೋಕ್ ಬಗ್ಗೆ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೇಳಿದ ರಣ್ಬೀರ್ ಸಿಂಗ್, ''ನಾನು ಆಲಿಯಾ ಬಗ್ಗೆ ಮಾಡಿದ ಕಮೆಂಟ್‌ಗೆ ಕ್ಷಮೆ ಕೇಳುತ್ತೇನೆ. ನಾನು ಹೇಳಿದ್ದು ಜೋಕ್ ಆಗಿತ್ತಾದರು ಅದು ಒಳ್ಳೆಯ ಜೋಕ್ ಆಗಿರಲಿಲ್ಲ. ನನಗೆ ಬಹಳ ಕೆಟ್ಟ ಹಾಸ್ಯಪ್ರಜ್ಞೆ ಇದೆ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ನನ್ನ ಕ್ಷಮೆ ಇರಲಿ'' ಎಂದಿದ್ದಾರೆ.
''ನಾನು ನನ್ನ ಪತ್ನಿಯನ್ನು ಬಹಳ ಪ್ರೀತಿಸುತ್ತೇನೆ. ನಾನು ಆಕೆಯ ಬಗ್ಗೆ ಜೋಕ್ ಒಂದನ್ನು ಹೇಳಿದೆ ಆದರೆ ಆ ಜೋಕ್ ಫನ್ನಿಯಾಗಿರಲಿಲ್ಲ ಬದಲಿಗೆ ಕೆಟ್ಟದಾಗಿತ್ತು. ನಾನು ಈ ಬಗ್ಗೆ ಆಲಿಯಾ ಬಳಿ ಸಹ ಮಾತನಾಡಿದೆ. ಅದರೆ ಆಕೆ ನಕ್ಕು ಸುಮ್ಮನಾದಳು. ಆ ಜೋಕ್ ಅನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನಾನು ಹೇಳಿದ ಜೋಕ್‌ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಬೇಷರತ್ ಕ್ಷಮೆ ಕೇಳುವೆ'' ಎಂದಿದ್ದಾರೆ.
ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ಒಟ್ಟಿಗೆ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ರಣ್ಬೀರ್, ಆಲಿಯಾ ಜೊತೆಗೆ ತೆಲುಗಿನ ನಾಗಾರ್ಜುನ, ಮೌನಿ ರಾಯ್ ವಿಶೇಷ ಪಾತ್ರದಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ. ಸಿನಿಮಾದ ಮೂರು ಹಾಡುಗಳು ಬಿಡುಗಡೆ ಆಗಿದ್ದು ಹಿಟ್ ಆಗಿವೆ.


Click it and Unblock the Notifications











