'ರಾಮಾಯಣ'ದ ವ್ರತ ಮುರಿದ್ರಾ ರಣ್‌ಬೀರ್? ಮಾಂಸಾಹಾರದ ಮುಂದೆ ಕುಂತ ವೀಡಿಯೋ ವೈರಲ್
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ನಿರ್ಧಾರವೊಂದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿರುವ ರಣಬೀರ್ ಮಾಂಸಾಹಾರ ಬಿಟ್ಟಿದ್ದಾರೆ ಎನ್ನಲಾಗಿತ್ತು.
ಪವಿತ್ರ ಪಾತ್ರಕ್ಕಾಗಿ ಅವರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದಿದ್ದರು. ಮದ್ಯ ಮತ್ತು ಮಾಂಸಾಹಾರದಿಂದ ದೂರ ಇರುವುದಾಗಿ ಅವರು ಹೇಳಿದ್ದರು. ಈ ಹೇಳಿಕೆಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈಗ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಈಗ ನೆಟ್‌ಫ್ಲಿಕ್ಸ್ ಶೋ ಪ್ರೋಮೊ ಬಿಡುಗಡೆಯಾಗಿದೆ. 'ಡೈನಿಂಗ್ ವಿತ್ ಕಪೂರ್ಸ್' ಎಂಬ ಈ ಕಾರ್ಯಕ್ರಮದಲ್ಲಿ ಇಡೀ ಕಪೂರ್ ಕುಟುಂಬ ಭಾಗವಹಿಸಿದೆ. ಅದಕ್ಕೆ ಸಂಬಂಧಿಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಚಿತ್ರದಲ್ಲಿ ರಣಬೀರ್ ನಾನ್-ವೆಜ್ ಆಹಾರದ ಮುಂದೆ ಕುಳಿತಿರುವುದು ಕಂಡುಬಂದಿದೆ.

ಸಸ್ಯಾಹಾರಿಯಾಗಿರುವುದಾಗಿ ಹೇಳಿದ್ದ ರಣಬೀರ್ ಈ ಶೋನಲ್ಲಿ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಶೋನ ಥೀಮ್ ಕುಟುಂಬದ ಸದಸ್ಯರು ಜೊತೆಯಾಗಿ ಕುಳಿತು ಊಟ ಮಾಡುತ್ತಾ ಮಾತನಾಡವುದು. ಟೇಬಲ್ ಮೇಲೆ ಬಗೆಬಗೆಯ ಖಾದ್ಯಗಳು ರಾರಾಜಿಸಿವೆ. ಆದರೆ ಆ ಖಾದ್ಯಗಳಲ್ಲಿ ಬಹುತೇಕ ನಾನ್-ವೆಜ್ ಐಟಂಗಳಿವೆ.
ಸಸ್ಯಾಹಾರಿ ತಿನಿಸುಗಳು ಅಲ್ಲಿ ಕಾಣಿಸಲಿಲ್ಲ. ರಣಬೀರ್ ಕಪೂರ್ ನಾನ್-ವೆಜ್ ಸೇವನೆ ಮಾಡುತ್ತಿರುವುದು ನೇರವಾಗಿ ಕ್ಯಾಮರಾದಲ್ಲಿ ದಾಖಲಾಗಿಲ್ಲ. ಆದರೆ ಅವರು ಮಾಂಸಾಹಾರದ ಪ್ಲೇಟ್‌ಗಳ ಮುಂದೆ ಕುಳಿತಿರುವುದು ದೊಡ್ಡ ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಅವರ ಹಿಂದಿನ ಹೇಳಿಕೆಗೆ ವಿರುದ್ಧವಾಗಿದೆ.
ಮಾಂಸಾಹಾರ ತ್ಯಜಿಸಿದ ಬಳಿಕ ರಣಬೀರ್ ಮತ್ತೆ ಅದನ್ನು ತಿಂದಿದ್ದಾರೆಯೇ? ಎಂಬ ಅನುಮಾನ ಮೂಡಿದೆ. ಈ ಫೋಟೋವನ್ನು ನೋಡಿ ಹಲವು ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನಟನ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ದೊಡ್ಡ ವಿವಾದ ಈಗ ಬಾಲಿವುಡ್ ಅಂಗಳದಲ್ಲಿ ಮನೆ ಮಾಡಿದೆ.
'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಪ್ರಭು ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಒಂದು ಮಹತ್ವದ ಪಾತ್ರವಾಗಿದೆ. ಈ ಪಾತ್ರವನ್ನು ನಟಿಸಲು ರಣಬೀರ್ ವಿಶೇಷ ವ್ರತಗಳನ್ನು ತೆಗೆದುಕೊಂಡಿದ್ದರು. ರಾಮನ ಪಾತ್ರದ ಘನತೆ ಉಳಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದರು.
ರಣಬೀರ್ ರಾಮನ ಪಾತ್ರ ಮಾಡುವುದನ್ನು ಮೊದಲಿನಿಂದಲೂ ಒಂದು ವರ್ಗದ ಜನರಿಗೆ ಇಷ್ಟವಿರಲಿಲ್ಲ. ಈಗ ಸಿಕ್ಕಿರುವ ಈ ಫೋಟೋ ಅವರಿಗೆ ಒಳ್ಳೆಯ ಅಸ್ತ್ರವಾಗಿದೆ. "ರಾಮನ ಪಾತ್ರ ಮಾಡುತ್ತಿರುವವರು ಹೀಗೆ ಮಾಡುತ್ತಾರೆಯೇ?" ಎಂದು ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಅವರ ತಂಡ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೌನದಿಂದಲೇ ವಿವಾದವನ್ನು ಮುಂದುವರಿಸಲು ಅವಕಾಶ ನೀಡಿದಂತಾಗಿದೆ.
ವಿವಾದಗಳು ಏನೇ ಇರಲಿ ನಟ ರಣಬೀರ್ ಕಪೂರ್ ತಮ್ಮ ಸಿನಿಮಾಗಳಲ್ಲಿ ಸಖತ್ ಬಿಝಿ ಆಗಿದ್ದಾರೆ. ಅವರು ಸದ್ಯ 'ರಾಮಾಯಣ' ಪಾರ್ಟ್-1 ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರದ ಮೇಲೆ ದೇಶಾದ್ಯಂತ ಅಪಾರ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದ ಭಾಗ ಕೂಡ ಆಗಿದ್ದಾರೆ. 'ಲವ್ & ವಾರ್' ಎಂಬ ಚಿತ್ರದಲ್ಲಿ ರಣಬೀರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರವೂ ದೊಡ್ಡ ಮಟ್ಟದ ಗಮನ ಸೆಳೆಯುವ ನಿರೀಕ್ಷೆ ಇದೆ.
'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲನೇ ಭಾಗ 2026ರ ದೀಪಾವಳಿಗೆ ತೆರೆಗೆ ಬರಬಹುದು. ಇನ್ನು 'ರಾಮಾಯಣ 2' ಸಿನಿಮಾ 2027ರ ದೀಪಾವಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ. ರಣಬೀರ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸ್ಪಷ್ಟನೆ ನೀಡುವರೇ ಎಂಬುದನ್ನು ಕಾದು ನೋಡಬೇಕು. ಮಾಂಸಾಹಾರದ ವಿಷಯ ಈಗ ದೊಡ್ಡ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಹೊಸ ವಿವಾದವು ಚಿತ್ರದ ಮೇಲೂ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆ ಈಗ ಮೂಡಿದೆ. ಈ ಹಿಂದೆ ತಾವೂ ಗೋಮಾಂಸ ಸೇವನೆ ಮಾಡಿರುವುದಾಗಿ ರಣ್‌ಬೀರ್ ಹೇಳಿದ್ದರು.


Click it and Unblock the Notifications











