twitter
    For Quick Alerts
    ALLOW NOTIFICATIONS  
    For Daily Alerts

    'ಬ್ರಹ್ಮಾಸ್ತ್ರ' ಬಜೆಟ್ ಎಷ್ಟು ಕೋಟಿ? ಸ್ಪಷ್ಟನೆ ಕೊಟ್ಟ ರಣ್‌ಬೀರ್ ಕಪೂರ್

    |

    'ಬ್ರಹ್ಮಾಸ್ತ್ರ' ಸಿನಿಮಾದ ಯಶಸ್ಸಿನ ಸುತ್ತ ಚರ್ಚೆಗಳು ಏರ್ಪಟ್ಟಿವೆ. 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 360 ಕೋಟಿಗೂ ಹೆಚ್ಚು ಹಣವನ್ನು ವಿಶ್ವದಾದ್ಯಂತ ಗಳಿಸಿದೆ ಎನ್ನಲಾಗುತ್ತಿದೆ. ಆದರೆ ಈ ಕಲೆಕ್ಷನ್ ಲೆಕ್ಕಾಚಾರದ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ 360 ಕೋಟಿ ಗಳಿಸಿದ್ದರೂ ಸಹ ಸಿನಿಮಾ ಫ್ಲಾಪ್ ಆಗಿದೆ, ಸಿನಿಮಾಕ್ಕೆ 500 ಕೋಟಿ ಬಜೆಟ್ ಹಾಕಲಾಗಿದ್ದು, ಹಾಕಿರುವ ಬಂಡವಾಳವನ್ನು ಸಿನಿಮಾ ಇನ್ನೂ ಗಳಿಸಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಆಲಿಯಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್‌: 'ಬ್ರಹ್ಮಾಸ್ತ್ರ' ನಟಿಗೆ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ' ಆಲಿಯಾ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್‌: 'ಬ್ರಹ್ಮಾಸ್ತ್ರ' ನಟಿಗೆ 'ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ'

    ವಿಕಿಪೀಡಿಯಾ ಮಾಹಿತಿ ಪ್ರಕಾರ ಸಹ 'ಬ್ರಹ್ಮಾಸ್ತ್ರ' ಸಿನಿಮಾಕ್ಕೆ ಪ್ರಚಾರವೆಲ್ಲ ಸೇರಿ 600 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಹಾಗಿದ್ದಲ್ಲಿ ಸಿನಿಮಾ 360 ಕೋಟಿ ಗಳಿಸಿದ್ದರೂ ಸಹ ಫ್ಲಾಪ್ ಎಂದೇ ಹೇಳಬೇಕಾಗುತ್ತದೆ. ಆದರೆ ಸಿನಿಮಾದ ನಾಯಕ ರಣ್‌ಬೀರ್ ಕಪೂರ್ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಿನಿಮಾದ ಬಜೆಟ್ ಬಗ್ಗೆ ಇದ್ದ ಅನುಮಾನಗಳನ್ನು ಹೋಗಲಾಡಿಸಿದ್ದಾರೆ.

    ಬಜೆಟ್‌ ಬಗ್ಗೆ ರಣ್‌ಬೀರ್ ಸ್ಪಷ್ಟನೆ

    ಬಜೆಟ್‌ ಬಗ್ಗೆ ರಣ್‌ಬೀರ್ ಸ್ಪಷ್ಟನೆ

    '650 ಕೋಟಿ ಬಜೆಟ್ ಕೇವಲ 'ಬ್ರಹ್ಮಾಸ್ತ್ರ' ಒಂದು ಸಿನಿಮಾದ್ದಲ್ಲ. ಅದು ಇಡೀ 'ಅಸ್ತ್ರಾವರ್ಸ್' ಸಿನಿಮಾದ ಬಜೆಟ್, 'ಬ್ರಹ್ಮಾಸ್ತ್ರ' ಸಿನಿಮಾಕ್ಕೆ ಅಷ್ಟೋಂದು ಬಜೆಟ್ ಹಾಕಲಾಗಿಲ್ಲ. ಅಲ್ಲದೆ 'ಬ್ರಹ್ಮಾಸ್ತ್ರ' ಸಿನಿಮಾ ಹಾಗೂ ಸಿನಿಮಾ ಸರಣಿಯ ಬಜೆಟ್ ವಿಂಗಡನೆ ಇತರೆ ಸಿನಿಮಾಗಳ ರೀತಿಯದ್ದಲ್ಲ. ಇದರ ಬಜೆಟ್ ವಿಂಗಡನೆ ಬೇರೆಯದ್ದೇ ರೀತಿಯದ್ದಾಗಿದೆ'' ಎಂದಿದ್ದಾರೆ ರಣ್‌ಬೀರ್ ಕಪೂರ್.

    ಬೇರೆಯದ್ದೇ ರೀತಿಯ ಲೆಕ್ಕಾಚಾರ

    ಬೇರೆಯದ್ದೇ ರೀತಿಯ ಲೆಕ್ಕಾಚಾರ

    'ಬ್ರಹ್ಮಾಸ್ತ್ರ' ಸಿನಿಮಾದ ಬಜೆಟ್ ಎಷ್ಟೆಂಬುದನ್ನು ಹೇಳದ ರಣ್‌ಬೀರ್ ಕಪೂರ್, ''ಬ್ರಹ್ಮಾಸ್ತ್ರ' ಹಾಗೂ 'ಅಸ್ತ್ರಾವರ್ಸ್' ಸಿನಿಮಾ ಸರಣಿಯ ಬಜೆಟ್‌ ವಿಂಗಡನೆ ಬೇರೆ ರೀತಿಯದ್ದಾಗಿದೆ. ಈ ಸಿನಿಮಾ ವಿಎಫ್‌ಎಕ್ಸ್‌ ಮೇಲೆ ಹೆಚ್ಚು ನಿರ್ಭರವಾಗಿರುವ ಕಾರಣ ಇದಕ್ಕೆ ಬೇರೆಯದ್ದೇ ರೀತಿಯ ಬಜೆಟ್ ಬೇಕು, ಲೆಕ್ಕಾಚಾರ ಬೇಕು, ಅಲ್ಲದೆ ನಿರ್ಮಾಪಕರು ಸಿನಿಮಾಕ್ಕೆ ಸಂಬಂಧಿಸಿದ ಡಿಸೈನ್‌ಗಳು, ಕೆಲವು ಗ್ರಾಫಿಕ್ಸ್‌ಗಳು, ಚಿತ್ರಗಳು, ಆಕಾರಗಳ ಖರೀದಿ ಹಾಗೂ ನಿರ್ಮಾಣ ಮಾಡಿಕೊಂಡಿದ್ದಾರೆ. ಅದನ್ನು ಸಿನಿಮಾದ ಮುಂದಿನ ಭಾಗಗಳಲ್ಲಿಯೂ ಬಳಸಲಿದ್ದೇವೆ'' ಎಂದಿದ್ದಾರೆ ರಣ್‌ಬೀರ್ ಕಪೂರ್.

    ಎರಡು ಸಿನಿಮಾ ಒಟ್ಟಿಗೆ ಚಿತ್ರೀಕರಣ

    ಎರಡು ಸಿನಿಮಾ ಒಟ್ಟಿಗೆ ಚಿತ್ರೀಕರಣ

    'ಬ್ರಹ್ಮಾಸ್ತ್ರ' ಸಿನಿಮಾವನ್ನು ಹಲವು ರೀತಿಯಲ್ಲಿ ಮುಂದುವರೆಸಬಹುದಾಗಿದೆ. ಹಲವು ಸಾಧ್ಯತೆಗಳು ನಮ್ಮ ಮುಂದೆ ಇವೆ. ಮುಂದಿನ ಬಾರಿ 'ಬ್ರಹ್ಮಾಸ್ತ್ರ 2' ಹಾಗೂ 'ಬ್ರಹ್ಮಾಸ್ತ್ರ 3' ಸಿನಿಮಾವನ್ನು ಒಟ್ಟಿಗೆ ನಿರ್ಮಾಣ ಮಾಡಲಿದ್ದೇವೆ. ಇದರಿಂದ ನಮಗೆ ಸಮಯದ ಉಳಿತಾಯವಾಗಲಿದೆ ಹಾಗೂ ಸಿನಿಮಾವನ್ನು ಸರಿಯಾದ ಸಮಯಕ್ಕೆ ಪ್ರೇಕ್ಷಕರಿಗೆ ತಲುಪಿಸುವುದು ಇದರಿಂದ ಸಾಧ್ಯವಾಗಲಿದೆ'' ಎಂದಿದ್ದಾರೆ.

    ಕಲೆಕ್ಷನ್ ಬಗ್ಗೆ ಕಂಗನಾ ಅನುಮಾನ

    ಕಲೆಕ್ಷನ್ ಬಗ್ಗೆ ಕಂಗನಾ ಅನುಮಾನ

    'ಬ್ರಹ್ಮಾಸ್ತ್ರ' ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ನಟಿ ಕಂಗನಾ ರನೌತ್ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾ ತಂಡವು ಕಲೆಕ್ಷನ್ ಬಗ್ಗೆ ಸುಳ್ಳು ಹೇಳುತ್ತಿದೆ. ಆ ಸಿನಿಮಾ ಫ್ಲಾಪ್ ಆಗಿದೆ ಎಂದು ನಟಿ ಕಂಗನಾ ಹೇಳಿದ್ದಾರೆ. ಆದರೆ ಚಿತ್ರತಂಡದ ಮಾಹಿತಿಯಂತೆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಸಿನಿಮಾ ವ್ಯವಹಾರ ವಿಶ್ಲೇಷಕರ ಪ್ರಕಾರ ಈ ಸಿನಿಮಾವು 330 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. 'ಬ್ರಹ್ಮಾಸ್ತ್ರ' ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಣ್‌ಬೀರ್ ಜೊತೆ ಆಲಿಯಾ ನಾಯಕಿಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ತೆಲುಗು ನಟ ನಾಗಾರ್ಜುನ, ವಿಲನ್ ಆಗಿ ಮೌನಿ ರಾಯ್ ಹಾಗೂ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ.

    English summary
    Actor Ranbir Kapoor gave clarification about Brahmastra movie budget. He said 650 crore rs budget for the whole Astraverse not only for now released Brahmastra movie.
    Wednesday, September 21, 2022, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X