»   » ರಣಬೀರ್ ಕಪೂರ್ ಡೇಟಿಂಗ್ ಬಗ್ಗೆ ಕೇಳಿಬಂದ ಹೊಸ ಸುದ್ದಿ ಇದು!

ರಣಬೀರ್ ಕಪೂರ್ ಡೇಟಿಂಗ್ ಬಗ್ಗೆ ಕೇಳಿಬಂದ ಹೊಸ ಸುದ್ದಿ ಇದು!

Posted By:
Subscribe to Filmibeat Kannada

ತಾರೆಯರ ಲವ್ ಡೇಟಿಂಗ್ ಮತ್ತು ರಿಲೇಶನ್‌ಶಿಪ್‌ ಕುರಿತ ರೂಮರ್ಸ್ ಸಿನಿ ಅಂಗಳದಲ್ಲಿ ಸಾಮಾನ್ಯ. ಇದೇ ವಿಷಯಕ್ಕೆ ಕುರಿತ ಲೇಟೆಸ್ಟ್ ಸುದ್ದಿ ಏನಂದ್ರೆ ಕತ್ರಿನಾ ಕೈಫ್ ಮಾಜಿ ಬಾಯ್‌ ಫ್ರೆಂಡ್ ರಣಬೀರ್ ಕಪೂರ್ ಕುರಿತ ಹೊಸ ಡೇಟಿಂಗ್ ರೂಮರ್ಸ್ ಒಂದು ಈಗ ಬಿಟೌನ್‌ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ರಣಬೀರ್ ಕಪೂರ್ ಡೇಟಿಂಗ್ ಯಾರ ಜೊತೆ ಎಂದು ರೂಮರ್ಸ್ ಹರಡಿದೆ, ಅದರ ಬಗ್ಗೆ ನಟ ಹೇಳಿದ್ದೇನು? ಎಂದು ತಿಳಿಯಲು ಮುಂದೆ ಓದಿರಿ..

ರಣಬೀರ್ ಡೇಟಿಂಗ್‌ ಹೊಸ ರೂಮರ್ಸ್

'ಬಾಲಿವುಡ್ ನಟ ರಣಬೀರ್ ಕಪೂರ್ ಈಗ ಪಾಕಿಸ್ತಾನಿ ಮೂಲದ ನಟಿ ಮಹಿರಾ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಅಬ್ರಾಡ್ ನಲ್ಲಿ ಒಟ್ಟಿಗೆ ಸುತ್ತಾಡಿದ್ದಾಗಿನಿಂದಲೂ ತುಂಬಾ ಕ್ಲೋಸ್ ಆಗಿದ್ದಾರೆ' ಎಂಬ ರೂಮರ್ಸ್ ಬಿಟೌನ್‌ ನಲ್ಲಿ ಹರಿದಾಡುತ್ತಿದೆ. ಈ ಸುದ್ದಿಯನ್ನು ಮುಂಬೈ ಮಿರರ್ ರಿವೀಲ್ ಮಾಡಿದೆ.

ರೂಮರ್ಸ್ ಬಗ್ಗೆ ರಣಬೀರ್‌ಗೆ ಪ್ರಶ್ನೆ

ಈ ಹೊಸ ಡೇಟಿಂಗ್ ಕುರಿತು ಇತ್ತೀಚೆಗಷ್ಟೆ 'ಎಐಬಿ' ರಣಬೀರ್ ಗೆ ಪ್ರಶ್ನೆ ಮಾಡಿದೆ. ಈ ವೇಳೆ ನಟ ನೀಡಿದ ಉತ್ತರ ಮಾತ್ರ ಕುತೂಹಲಕಾರಿಯಾಗಿತ್ತು.

ರಣಬೀರ್ ಉತ್ತರ

'ನಾನು ಈಗ ಸಿಂಗಲ್ ಮತ್ತು ಅದನ್ನೇ ಹೆಚ್ಚು ಪ್ರೀತಿಸುತ್ತೀನಿ. ಮೊದಲ ಬಾರಿ ಈ ರೀತಿ ಸಿಂಗಲ್ ಆಗಿರುವುದು ಅದ್ಭುತ ಅನುಭವ ನೀಡುತ್ತಿದೆ' ಎಂದು 'ಎಐಬಿ'ಯೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ಡೇಟಿಂಗ್ ಬಗ್ಗೆ ಕ್ಲಾರಿಟಿ ಕೊಡದ ರಣಬೀರ್

ಡೇಟಿಂಗ್ ಕುರಿತ ಪ್ರಶ್ನೆಗೆ ರಣಬೀರ್ ಪ್ರತಿಕ್ರಿಯಿಸಿದರೂ.. ಅವರ ಉತ್ತರದಲ್ಲಿ ಮಹಿರಾ ಖಾನ್ ರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ ಎಂಬದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಇತ್ತ ಲವ್ ಇದೆ ಎಂಬುದಕ್ಕೂ ಕ್ಲಾರಿಟಿ ಸಿಕ್ಕಿಲ್ಲ.

English summary
Bollywood Actor Ranbir Kapoor Denies That He’s Dating Pakistani Actress Mahira Khan!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada