For Quick Alerts
  ALLOW NOTIFICATIONS  
  For Daily Alerts

  ಬ್ಲಾಕ್ ಬಸ್ಟರ್ ಆಯ್ತು 'ಸಂಜು' ಸಿನಿಮಾ: ರಣ್ಬೀರ್ ಗೆ ಹೊಡೆಯಿತು ಜಾಕ್ ಪಾಟ್.!

  By Harshitha
  |

  ಬಹುಶಃ ರಣ್ಬೀರ್ ಕಪೂರ್ ಗೆ ಒಂದು ಲೈಫ್ ಸಿಗುವುದಕ್ಕೆ, ಸಂಜಯ್ ದತ್ ಲೈಫ್ ಬೇಕಾಯಿತು ಅಂತ ಕಾಣುತ್ತೆ.

  ಬಾಲಿವುಡ್ ನಟ ಸಂಜಯ್ ದತ್ ಜೀವನಚರಿತ್ರೆ ಆಧಾರಿತ ಸಿನಿಮಾ 'ಸಂಜು' ಬ್ಲಾಕ್ ಬಸ್ಟರ್ ಆಗಿದೆ. 'ಸಂಜು' ಆಗಿ ರಣ್ಬೀರ್ ಕಪೂರ್ ನೀಡಿರುವ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ 'ಸಂಜು' ಸೂಪರ್ ಸಕ್ಸಸ್ ಆಗುತ್ತಿರುವಾಗಲೇ, ರಣ್ಬೀರ್ ಕಪೂರ್ ಬೇಡಿಕೆ ದುಪ್ಪಟಾಗಿದೆ.

  ಈಗಾಗಲೇ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ರಣ್ಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಈ ನಡುವೆ ರಾಜಕುಮಾರ್ ಹಿರಾನಿ ಜೊತೆಗೆ ರಣ್ಬೀರ್ ಮತ್ತೊಂದು ಸಿನಿಮಾ ಮಾಡುವ ಸಾಧ್ಯತೆ ಇದೆ.

  ಹೀಗಿರುವಾಗಲೇ, ವೃತ್ತಿ ಜೀವನದಲ್ಲಿ ರಣ್ಬೀರ್ ಕಪೂರ್ ಗೆ ಜಾಕ್ ಪಾಟ್ ಹೊಡೆಯುವ ಕಾಲ ಹತ್ತಿರ ಬಂದಿದೆ. ಅದ್ಹೇಗೆ ಅಂತೀರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ರಣ್ಬೀರ್ ಕಪೂರ್ 'ಫೀ' ಜಾಸ್ತಿ ಆಗಿದೆ.!

  ರಣ್ಬೀರ್ ಕಪೂರ್ 'ಫೀ' ಜಾಸ್ತಿ ಆಗಿದೆ.!

  'ಸಂಜು' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ, ರಣ್ಬೀರ್ ಕಪೂರ್ ತಮ್ಮ 'ಎಂಡೋರ್ಸ್ಮೆಂಟ್ ಫೀ' ಹೈಕ್ ಮಾಡಿದ್ದಾರೆ. ಯಾವುದೇ ಬ್ರ್ಯಾಂಡ್ ಗಳನ್ನ ಪ್ರಮೋಟ್ ಮಾಡಬೇಕು ಅಂದ್ರೆ ಇನ್ಮುಂದೆ ರಣ್ಬೀರ್ ಕಪೂರ್ ಕೇಳಿದಷ್ಟನ್ನು ಕಂಪನಿಯವರು ಕೊಡಬೇಕು.

  'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!

  ಒಂದು ದಿನಕ್ಕೆ ಆರು ಕೋಟಿ.!

  ಒಂದು ದಿನಕ್ಕೆ ಆರು ಕೋಟಿ.!

  ಬ್ರ್ಯಾಂಡ್ ಎಂಡೋರ್ಸ್ಮೆಂಟ್/ಕಮರ್ಶಿಯಲ್ ಗಳಲ್ಲಿ ಭಾಗವಹಿಸಲು ಹಿಂದೆ 3 ರಿಂದ 3.5 ಕೋಟಿ ರೂಪಾಯಿಯನ್ನ ರಣ್ಬೀರ್ ಕಪೂರ್ ಚಾರ್ಜ್ ಮಾಡುತ್ತಿದ್ದರು. ಆದ್ರೀಗ, ಒಂದು ದಿನಕ್ಕೆ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಾಗಿ ರಣ್ಬೀರ್ ಕಪೂರ್ ಆರು ಕೋಟಿ ರೂಪಾಯಿ ಕೇಳಿದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.

  'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!

  ಯಾವುದಕ್ಕೆ ಬ್ರ್ಯಾಂಡ್ ಅಂಬಾಸಿಡರ್.?

  ಯಾವುದಕ್ಕೆ ಬ್ರ್ಯಾಂಡ್ ಅಂಬಾಸಿಡರ್.?

  ಏಷಿಯನ್ ಪೇಂಟ್ಸ್, ಪೆಪ್ಸಿ, ಪ್ಯಾನಸಾನಿಕ್, ರೆನೋ, ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಪ್ರಮೋಷನ್ ನಲ್ಲಿ ರಣ್ಬೀರ್ ಕಪೂರ್ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈಗ ರಣ್ಬೀರ್ ಡಿಮ್ಯಾಂಡ್ ಡಬಲ್ ಆಗಿರುವ ಕಾರಣ ಇನ್ನಷ್ಟು ಕಂಪನಿಗಳು ರಣ್ಬೀರ್ ಮುಂದೆ ಕ್ಯೂ ನಿಲ್ಲುವ ಸಾಧ್ಯತೆ ಹೆಚ್ಚಿದೆ.

  ದೊಡ್ಡ ತಿರುವು ಕೊಟ್ಟಿದ್ದು 'ಸಂಜು'

  ದೊಡ್ಡ ತಿರುವು ಕೊಟ್ಟಿದ್ದು 'ಸಂಜು'

  ನಾಯಕನಾಗಿ ರಣ್ಬೀರ್ ಕಪೂರ್ ಬೆಳ್ಳಿತೆರೆ ಮೇಲೆ ಮಿನುಗಲು ಆರಂಭಿಸಿ ಹನ್ನೊಂದು ವರ್ಷಗಳು ಉರುಳಿವೆ. ಈ ಹನ್ನೊಂದು ವರ್ಷಗಳಲ್ಲಿ ರಣ್ಬೀರ್ ಕಪೂರ್ ಗೆ ಬಿಗ್ ಬ್ರೇಕ್ ಕೊಟ್ಟಿರುವ ಸಿನಿಮಾ 'ಸಂಜು'. ಈ ಸಿನಿಮಾದಲ್ಲಿ ರಣ್ಬೀರ್ ಕಪೂರ್ 'ಸಂಜಯ್ ದತ್' ಆಗಿ ಅಭಿನಯಿಸಿದ ಮೇಲೆ ಅವರಿಗೆ ಜಾಕ್ ಪಾಟ್ ಹೊಡೆದ ಹಾಗೆ ಆಗಿದೆ.

  English summary
  Bollywood Actor Ranbir Kapoor doubles his endorsement fee after 'Sanju' success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X