ಆಲಿಯಾ ಭಟ್ ನನ್ನ ಮೊದಲ ಪತ್ನಿಯಲ್ಲ, ರಣ್‌ಬೀರ್ ಕಪೂರ್ ಶಾಕಿಂಗ್ ಹೇಳಿಕೆ...!
ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರದ್ದು ಲವ್ ಕಂ ಅರೆಂಜ್ ಮ್ಯಾರೇಜ್. ಹಲವು ವರ್ಷ ಪರಸ್ಪರ ಪ್ರೀತಿಸಿ 2022ರಲ್ಲಿ ಇಬ್ಬರು ಸಪ್ತಪದಿ ತುಳಿದರು. ಮನೆಯವರ ಸಮ್ಮುಖದಲ್ಲಿ ಮದುವೆಯಾದರು. ಇನ್ನು ರಣ್‌ಬೀರ್ ಬದುಕಿನಲ್ಲಿ ಆಲಿಯಾ ಬರುವವರೆಗೆ ಹಲವರು ಬಂದು ಹೋಗಿದ್ದರು. ಅನೇಕರ ಮೇಲೆ ರಣ್‌ಬೀರ್ ಗೆ ಪ್ರೇಮಾಂಕುರವಾಗಿತ್ತು.
ಆದರೆ ಸಂಬಂಧ ಮದುವೆಯವರೆಗೆ ಮುಂದುವರೆಯಲಿಲ್ಲ. ಬದಲಿಗೆ ಪ್ರೇಮದ ರೆಕ್ಕೆಗಳು ಕಳಚಿ ಬಿದ್ದವು. ಹೀಗಾಗಿಯೇ ಬಾಲಿವುಡ್‌ನಲ್ಲಿ ಅನೇಕರು ಪ್ಲೇ ಬಾಯ್ ಎಂಬ ಪಟ್ಟ ಕಟ್ಟಿದರು. ಮೋಸಗಾರ ಎಂದು ಕೂಗಿದರು. ಆದರೆ ಈಗ ರಣ್‌ಬೀರ್ ಕಪೂರ್ ಬದಲಾಗಿದ್ದಾರೆ. ಆಲಿಯಾ ಜೊತೆ ಮದುವೆಯ ನಂತರ ರಣ್‌ಬೀರ್ ಶ್ರೀರಾಮಚಂದ್ರನ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಸಾಲದಕ್ಕೆ ರಾಮಾಯಣ ಚಿತ್ರವನ್ನು ಕೂಡ ಮಾಡುತ್ತಿದ್ದಾರೆ.

ಇಂಥಾ ರಣ್ ಬೀರ್ ಕಪೂರ್ ಗೆ ಆಲಿಯಾ ಭಟ್ ಮೊದಲ ಪತ್ನಿಯಲ್ಲ ಬದಲಿಗೆ ಎರಡನೇ ಪತ್ನಿ ಎಂದರೆ ನೀವು ನಂಬ್ತೀರಾ. ನಂಬಲೇಬೇಕು ಯಾಕೆಂದರೆ ಇದೇ ಸತ್ಯ. ಖುದ್ದು ರಣ್ ಬೀರ್ ಕಪೂರ್ ಈ ಮಾತನ್ನು ಹೇಳಿದ್ದಾರೆ. ಆದರೆ ಖುದ್ದು ರಣ್ ಬೀರ್ ಕಪೂರ್ ಗೆ ಕೂಡ ತಮ್ಮ ಮೊದಲ ಪತ್ನಿ ಯಾರೆಂದು ಗೊತ್ತಿಲ್ಲ ಎನ್ನುವುದೇ ಅಚ್ಚರಿ ಮತ್ತು ವಿಶೇಷ.
ಹೌದು. ಈ ಕುರಿತು ಮಾಷಬಲ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಣ್‌ಬೀರ್ ಕಪೂರ್ ಅವು ನನ್ನ ವೃತ್ತಿ ಬದುಕಿನ ಆರಂಭದ ದಿನಗಳು. ಆ ದಿನಗಳಲ್ಲಿ ನಾನು ನನ್ನ ಪೋಷಕರ ಜೊತೆ ಮನೆಯಲ್ಲಿ ವಾಸ ಮಾಡುತ್ತಿದ್ದೇ, ಆಗ ಓರ್ವ ಮಹಿಳಾ ಅಭಿಮಾನಿ ದಿನನಿತ್ಯ ನನ್ನನ್ನೂ ಭೇಟಿಯಾಗಲು ಮನೆ ಹತ್ರ ಬರುತ್ತಿದ್ದರು ಎಂದು ಹೇಳಿದ್ದಾರೆ.
ಆದರೆ ಅವರು ಬಂದಾಗೆಲ್ಲ ನಾನು ಮನೆಯಲ್ಲಿ ಇರುತ್ತಿರಲಿಲ್ಲ, ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಮನೆಯೊಳಗೆ ಯಾರನ್ನು ಬಿಡುತ್ತಿರಲಿಲ್ಲ ಎಂದಿರುವ ರಣ್ಬೀರ್ ಕಪೂರ್ ಹೀಗೆ ಅದೊಂದು ದಿನ ಅವರು ಪುರೋಹಿತರ ಜೊತೆ ನಮ್ಮ ಮನೆಗೆ ಬಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಆ ದಿನ ಕೂಡ ನಾನು ಮನೆಯಲ್ಲಿ ಇರಲಿಲ್ಲ ಹೀಗಾಗಿ ಅವತ್ತು ಕೂಡ ಭದ್ರತಾ ಸಿಬ್ಬಂದಿ ಅವರನ್ನು ಮನೆಯೊಳಗೆ ಬಿಡಲಿಲ್ಲ ಎಂದಿರುವ ರಣ್‌ಬೀರ್ ಅವತ್ತು ಅವರು ನನ್ನ ಮನೆಯ ಮುಖ್ಯದ್ವಾರದ ಬಳಿಯೇ ಮದುವೆಯ ಶಾಸ್ತ್ರಗಳನ್ನು ಮುಗಿಸಿದ್ದರು ಆ ನಂತರ ನಮ್ಮ ಮನೆಯ ಗೇಟ್ ಬಳಿ ನನ್ನ ಫೋಟೊ ಇಟ್ಟು, ಗೇಟ್‌ಗೆ ಕುಂಕುಮ ಹಚ್ಚಿ, ಹಾರವನ್ನು ಹಾಕಿ, ಹೂಗಳನ್ನು ಇಟ್ಟು ಹೋಗಿದ್ದರು ಎಂದು ಹೇಳಿದ್ದಾರೆ.
ಮನೆಗೆ ಮರಳಿ ಬಂದಾಗ ಸೆಕ್ಯೂರಿಟಿ ನಡೆದ ವಿಚಾರವನ್ನು ನನಗೆ ಹೇಳಿದ ಎಂದಿರುವ ರಣ್‌ಬೀರ್ ನಾನು ಇದನ್ನು ಹುಚ್ಚು ಎಂದು ಹೇಳುವುದಿಲ್ಲ ಯಾಕೆಂದರೆ ಅದು ಅಭಿಮಾನಕ್ಕೆ ಅಪಮಾನ ಮಾಡಿದಂತಾಗುತ್ತೆ ಎಂದು ಹೇಳಿದ್ದಾರೆ. ನನ್ನ ಮೊದಲ ಪತ್ನಿ ಯಾರೆಂದು ನನಗೂ ಗೊತ್ತಿಲ್ಲ, ನಾನು ಕುತೂಹಲದಿಂದ ಅವರಿಗೋಸ್ಕರ ಕಾಯುತ್ತಿದ್ದೇನೆ ಮುಂದೊಂದು ದಿನ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಖಂಡಿತವಾಗಿ ಭೇಟಿಯಾಗುತ್ತೇನೆ ಎಂದು ಕೂಡ ರಣ್‌ಬೀರ್ ಕಪೂರ್ ಹೇಳಿದ್ದಾರೆ.
ರಣ್‌ಬೀರ್ ಕಪೂರ್ ಅವರ ಈ ಮೊದಲ ಮದುವೆಯ ಕುರಿತ ಮಾತನ್ನು ಕೇಳಿ ಬಾಲಿವುಡ್‌ನಲ್ಲಿ ಅನೇಕರು ಸದ್ಯ ನಗಾಡುತ್ತಿದ್ದಾರೆ. ತಮಾಷೆಯಾಗಿ ಕಾಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರಣ್‌ಬೀರ್ ಕಪೂರ್ ಅವರ ಈ ಮಾತುಗಳನ್ನು ಕೇಳಿಸಿಕೊಂಡು ಮನೆಯ ಗೇಟ್‌ಗೆ ಕುಂಕುಮ ಹಚ್ಚಿ ಹೋದ ಆ ಚೆಲುವೆ ಮರಳಿ ಬಂದು ರಣ್‌ಬೀರ್ ಮನೆಯ ಬಾಗಿಲ ಮುಂದೆ ಬಂದು ನಿಲ್ತಾರಾ ಎನ್ನುವ ಚಿಂತೆ ಕೂಡ ಈಗ ಅಭಿಮಾನಿಗಳನ್ನು ಕಾಡುತ್ತಿದೆ. ಆ ಚೆಲುವೆ ದುತ್ತನೆ ಪ್ರತ್ಯಕ್ಷವಾಗ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











