ಕಾರೊಳಗೆ ಬಂದು ಕುಂತ್ಕೊಂಡು ಬಿಡು ; ರಣ್‌ಬೀರ್ ಕಪೂರ್ ಕೆಂಡ ಕಾರಿದ್ದೇಕೆ..?

ಸೌತ್ ಫಿಲ್ಮ್ ಇಂಡಸ್ಟ್ರೀಯಲ್ಲಿ ಖಾಸಗಿತನಕ್ಕೆ ಇನ್ನೂ ಧಕ್ಕೆ ಉಂಟಾಗಿಲ್ಲ. ಸಿನಿಮಾದಾಚೆ ಇಲ್ಲಿನವರು ತಮ್ಮ ಸಂಸಾರದ ಜೊತೆ ಕ್ಯಾಮರಾದಿಂದ ಅಂತರ ಕಾಪಾಡಿಕೊಂಡು ಅದೆಲ್ಲೋ ನೆಮ್ಮದಿಯಾಗಿ ಕಾಳ ಕಳೆಯುತ್ತಾರೆ. ಅವರಾಗಿಯೇ ಯಾವುದಾದರೂ ವಿಡಿಯೋ ಹಂಚಿಕೊಳ್ಳುವವರೆಗೆ ಅವರು ಎಲ್ಲಿದ್ದರು..? ಏನ್ಮಾಡ್ತಿದ್ದರು..? ಅನ್ನುವುದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಆದರೆ ಬಾಲಿವುಡ್ ಹಾಗಲ್ಲ. ಅಲ್ಲಿ ಕುಂತರೂ.. ನಿಂತರೂ.. ಸುದ್ದಿಯಾಗಬೇಕೆಂಬ ಹುಚ್ಚು ಅನೇಕರಲ್ಲಿದೆ. ಈ ಕಾರಣಕ್ಕೆ ತಮ್ಮ ಖಾಸಗಿ ಬದುಕಿನ ದಿನಚರಿಯನ್ನ ಏಜೆನ್ಸಿಗಳ ಕೈಗೆ ಕೊಟ್ಟು ಇಲ್ಲಿ ಅನೇಕರು ಕುಳಿತಿದ್ದಾರೆ. ಹೀಗೆ ಮಾಡುವುದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತೆ ಅನ್ನುವ ಕನಿಷ್ಠ ಪರಿಜ್ಞಾನವೂ ಇವರಿಗೆ ಇರುವುದಿಲ್ಲ. ಜ್ಞಾನೋದಯ ಆಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ. ಕಿರಿ ಕಿರಿಯಾಗಲು ಶುರುವಾಗುತ್ತೆ. ರಣ್‌ಬೀರ್ ಕಪೂರ್ ವಿಚಾರದಲ್ಲಿಯೂ ಇದೇ ಆಗಿದೆ.

ಹೌದು, ರಣ್ ಬೀರ್ ಮೊನ್ನೆಯಷ್ಟೇ 08 ಕೋಟಿ ಬೆಲೆ ಬಾಳುವ ಬೆಂಟ್ಲಿ ಕಾರನ್ನ ಖರೀದಿಸಿದ್ದಾರೆ. ಇನ್ನೂ ರಣ್‌ಬೀರ್ ಹಾಗೂ ಆಲಿಯಾ ಕನಸಿನ ಅರಮನೆ ಕೂಡ ಸಿದ್ಧವಾಗಿದೆ. ಇನ್ನೇನು ಕೆಲವೇ ದಿನ ಅದ್ದೂರಿ ಗೃಹ ಪ್ರವೇಶ ನೆರವೇರಲಿದೆ.

Ranbir Kapoor Gets Angry On Paparazzi As They Surrounded His New Bentley

ಹೀಗಾಗಿಯೇ.. ಗೃಹ ಪ್ರವೇಶಕ್ಕೂ ಮುನ್ನ, ಲಾಂಗ್ ಡ್ರೈವ್ ಹೋಗಲು ನಿರ್ಧರಿಸಿದ ರಣ್‌ಬೀರ್ ಹಾಗೂ ಆಲಿಯಾ ಮೊನ್ನೆಯಷ್ಟೇ ಮದುವೆಯಾದ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮನೆಗೆ ತೆರಳಲು ತಮ್ಮ ಹೊಚ್ಚ ಹೊಸ ಕಾರನ್ನ ರೋಡಿಗಿಳಿಸಿದ್ದಾರೆ. ಈಗಿರುವ ತಮ್ಮ ಮನೆಯ ಗೇಟ್ ವರೆಗೆ ಬಂದಿದ್ದಾರೆ. ಅಷ್ಟರಲ್ಲಿ ಗೇಟ್ ಬಳಿ ರಣ ಹದ್ದಿನಂತೆ ಕಾಯುತ್ತಿದ್ದ ಇರೋ ಬರೋರೆಲ್ಲ ತಮ್ಮ ತಮ್ಮ ಕ್ಯಾಮರಾ ಎತ್ತಿಕೊಂಡು, ರಣ್‌ಬೀರ್ ಕಪೂರ್ ಕಾರಿಗೆ ಮುತ್ತಿಗೆಯನ್ನ ಹಾಕಿದ್ದಾರೆ. ಬ್ಲ್ಯಾಕ್ ಡ್ರೆಸ್ ನಲ್ಲಿದ್ದ ರಣ್‌ಬೀರ್ ಹಾಗೂ ಕೆಂಪು ಉಡುಗೆಯಲ್ಲಿದ್ದ ಆಲಿಯಾ ಅವರ ಫೋಟೋಗಳನ್ನ ಒಂದಾದ ಮೇಲೊಂದರಂತೆ ಕ್ಲಿಕಿಸಿದ್ದಾರೆ.

ಕ್ಯಾಮರಾ ಫ್ಲ್ಯಾಶ್ ಲೈಟ್ ತಮ್ಮ ಮೇಲೆ ನಿರಂತರವಾಗಿ ಬಿದ್ದಿದ್ದಕ್ಕೋ ಅಥವಾ ತಮ್ಮ ಹೊಚ್ಚ ಹೊಸ 08 ಕೋಟಿಯ ಕಾರಿನ ಮೇಲೆ ಎಲ್ಲ ಮುಗಿ ಬಿದ್ದಿದ್ದಕ್ಕೋ ಗೊತ್ತಿಲ್ಲ. ರಣ್‌ಬೀರ್ ಕಪೂರ್ ಸಹನೆಯ ಕಟ್ಟೆ ಒಡೆದು ಹೋಗಿದೆ. ಹೀಗಾಗಿಯೇ ಅಲ್ಲಿ ಸೇರಿದ ಪಾಪರಾಜಿಗಳ ಮೇಲೆ ರಣ್ಭೀರ್ ಕೆಂಡವನ್ನ ಕಾರಿದ್ದಾರೆ.

ಇದು ಸಾಲದು ಅನ್ನುವಂತೆ ಒಬ್ಬ ಕ್ಯಾಮರಾ ಮ್ಯಾನ್ ಆಲಿಯಾ ಭಟ್ ಅವರ ಫೋಟೋ ತೆಗೆಯಲು ಹರ ಸಾಹಸ ಮಾಡುತ್ತಿದ್ದ. ಮೇಡಂ ಸ್ವಲ್ಪ ಮುಂದೆ ಬನ್ನಿ ಎಂದು ಹೇಳುತ್ತಿದ್ದ. ಇದನ್ನೂ ಗಮನಿಸಿರುವ ರಣ್ಬೀರ್ ಬಂದು ಒಳಗಡೆ ಕುಳಿತುಕೊಂಡು ಬಿಡು ಎಂದು ಆ ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

More from Filmibeat

English summary
In the video going viral on the internet, Bollywood Star Ranbir Kapoor was seen gesturing in frustration as the photographers swarmed around his new Bentley Continental GT V8 worth Rs 8 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X