For Quick Alerts
  ALLOW NOTIFICATIONS  
  For Daily Alerts

  ರಾಮಾಯಣ ಅಪ್‌ಡೇಟ್: ಮಹೇಶ್ ಬಾಬು ಔಟ್, ಮತ್ತೊಬ್ಬ ಸ್ಟಾರ್ ಎಂಟ್ರಿ?

  |

  'ಆದಿಪುರುಷ್' ಸಿನಿಮಾದಲ್ಲಿ ನಟ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೃತಿ ಸನೂನ್ ಸೀತೆಯಾಗಿ ಬಣ್ಣ ಹಚ್ಚಿದ್ದಾರೆ. ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ನಿರೀಕ್ಷೆಯ ಪ್ರಾಜೆಕ್ಟ್. ಓಂ ರಾವತ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ. ಅದಾಗಲೇ ರಾಮಾಯಣ ಕಥೆಯಾಧರಿಸಿ ಸಿನಿಮಾವೊಂದು ತಯಾರಾಗುತ್ತಿದೆ.

  ಈ ನಡುವೆ ಬಾಲಿವುಡ್‌ನಲ್ಲಿ ಮತ್ತೊಂದು ರಾಮಾಯಣಕ್ಕೆ ಸಿದ್ಧತೆ ನಡೆಯುತ್ತಿರುವುದು ಹೊಸ ಸಂಗತಿ ಏನು ಅಲ್ಲ. ಈಗಾಗಲೇ ನಿತೇಶ್ ತಿವಾರಿ ತಾನು ಸಹ ರಾಮಾಯಣ ಕಥೆ ಆಧರಿಸಿ ಸಿನಿಮಾ ಮಾಡ್ತೇನೆ ಎಂದು ಘೋಷಿಸಿ ಕಲಾವಿದರನ್ನು ಅಂತಿಮ ಮಾಡಿಕೊಂಡಿದ್ದರು.

  'ಕುರುಕ್ಷೇತ್ರ' ಬಂದು ಹೋಗುತ್ತಿದ್ದಂತೆ 'ರಾಮಾಯಣ' ಶುರು'ಕುರುಕ್ಷೇತ್ರ' ಬಂದು ಹೋಗುತ್ತಿದ್ದಂತೆ 'ರಾಮಾಯಣ' ಶುರು

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಶ್ರೀರಾಮನ ಪಾತ್ರದಲ್ಲಿ ನಟಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಈ ಸಂಬಂಧ ಪ್ರಿನ್ಸ್ ಜೊತೆ ನಿತೇಶ್ ತಿವಾರಿ ಮತ್ತು ತಂಡ ಒಂದು ಸುತ್ತಿನ ಮಾತುಕತೆ ಸಹ ಮಾಡಿತ್ತು. ಇದೀಗ, ಮಹೇಶ್ ಬಾಬು ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಮಹೇಶ್ ಬಾಬು ಜಾಗಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ಸ್ಟಾರ್ ನಟನ ಎಂಟ್ರಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಯಾರು ಆ ನಟ?

  ಶ್ರೀರಾಮ ಆಗ್ತಾರಾ ರಣ್ಬೀರ್ ಕಪೂರ್?

  ಶ್ರೀರಾಮ ಆಗ್ತಾರಾ ರಣ್ಬೀರ್ ಕಪೂರ್?

  ಮಹೇಶ್ ಬಾಬು ಈ ಚಿತ್ರದಲ್ಲಿ ನಟಿಸಲು ಸಮ್ಮತಿಸಿಲ್ಲ. ಹಾಗಾಗಿ, ಪ್ರಿನ್ಸ್ ಬದಲು ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ರಣ್ಬೀರ್ ಕಪೂರ್‌ಗೆ ಮಣೆ ಹಾಕಲಾಗಿದೆ ಎಂಬ ಸುದ್ದಿಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ರಣ್ಬೀರ್ ಕಪೂರ್ ಸಹ ಈ ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದು, ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿವೆ ಮೂಲಗಳು.

  ಹೃತಿಕ್ ರೋಷನ್ ರಾವಣ?

  ಹೃತಿಕ್ ರೋಷನ್ ರಾವಣ?

  ಬಾಲಿವುಡ್ ' ಗ್ರೀಕ್ ಗಾಡ್' ಎಂದು ಗುರುತಿಸಿಕೊಂಡಿರುವ ಹೃತಿಕ್ ರೋಷನ್ ಈ ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ. ರಾವಣನ ಪಾತ್ರಕ್ಕೆ ಹೃತಿಕ್ ಒಪ್ಪಿಗೆ ಸೂಚಿಸಿದ್ದು, ಚಿತ್ರತಂಡ ಉಳಿದ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿದೆ. 'ಆದಿಪುರುಷ್' ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನಾಗಿ ನಟಿಸುತ್ತಿದ್ದಾರೆ.

  ಮಹೇಶ್ ಬಾಬು ಆಸ್ತಿ ಮೌಲ್ಯ ಎಷ್ಟು? 'ಪ್ರಿನ್ಸ್' ಬಳಿಯಿರುವ ದುಬಾರಿ ಕಾರ್‌ಗಳು ಯಾವುದು?ಮಹೇಶ್ ಬಾಬು ಆಸ್ತಿ ಮೌಲ್ಯ ಎಷ್ಟು? 'ಪ್ರಿನ್ಸ್' ಬಳಿಯಿರುವ ದುಬಾರಿ ಕಾರ್‌ಗಳು ಯಾವುದು?

  ದೀಪಿಕಾ ಪಡುಕೋಣೆ ಸೀತೆ?

  ದೀಪಿಕಾ ಪಡುಕೋಣೆ ಸೀತೆ?

  'ಆದಿಪುರುಷ್' ಚಿತ್ರದಲ್ಲಿ ಸೀತೆ ಪಾತ್ರಕ್ಕಾಗಿ ಸೌತ್‌, ಬಾಲಿವುಡ್‌ ಇಂಡಸ್ಟ್ರಿಯ ಸ್ಟಾರ್ ನಟಿಯರ ಹೆಸರೆಲ್ಲಾ ಚರ್ಚೆಗೆ ಬಂದಿತ್ತು. ಅಂತಿಮವಾಗಿ ಕೃತಿ ಸನೂನ್‌ಗೆ ಅದೃಷ್ಟ ಒಲಿಯಿತು. ಇದೀಗ, ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಸೀತೆಯಾಗಿ ದೀಪಿಕಾ ಪಡುಕೋಣೆ ಅವರಿಗೆ ಆಫರ್ ಮಾಡಲಾಗಿದೆಯಂತೆ.

  700 ಕೋಟಿ ಬಜೆಟ್?

  700 ಕೋಟಿ ಬಜೆಟ್?

  ಮಧು ಮಂತೇನಾ, ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಜಂಟಿಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 700 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದೆ ಎಂಬ ವರದಿಯಿದೆ. ವಿಶ್ವದ ಸುಮಾರು 200 ಪ್ರಮುಖ ಕಲಾವಿದರನ್ನು ಈ ಚಿತ್ರಕ್ಕಾಗಿ ಕರೆತರುವ ಯೋಜನೆ ಇದೆಯಂತೆ. ಮುಂದಿನ ವರ್ಷದಲ್ಲಿ ಸಿನಿಮಾ ಆರಂಭಿಸಲು ಪ್ಲಾನ್ ಮಾಡಿದ್ದು, ಈ ವರ್ಷದ ದೀಪಾವಳಿ ಹಬ್ಬಕ್ಕೆ ಅಧೀಕೃತವಾಗಿ ಸಿನಿಮಾ ಘೋಷಿಸಬಹುದು.

  'ಸಲಾರ್' ಮುಗಿಸಿ 'ಆದಿಪುರುಷ್' ಆರಂಭಿಸಿದ ಪ್ರಭಾಸ್'ಸಲಾರ್' ಮುಗಿಸಿ 'ಆದಿಪುರುಷ್' ಆರಂಭಿಸಿದ ಪ್ರಭಾಸ್

  ರಾಜಮೌಳಿಗಾಗಿ ಪ್ರಿನ್ಸ್ ಈ ಚಿತ್ರ ಮಾಡಿಲ್ಲ

  ರಾಜಮೌಳಿಗಾಗಿ ಪ್ರಿನ್ಸ್ ಈ ಚಿತ್ರ ಮಾಡಿಲ್ಲ

  ಎಸ್‌ಎಸ್‌ ರಾಜಮೌಳಿ ಜೊತೆ ಮಹೇಶ್ ಬಾಬು ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದಾರೆ. ಆಫ್ರಿಕಾದ ಅರಣ್ಯದಲ್ಲಿ ಆ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ. ಆ ಪ್ರಾಜೆಕ್ಟ್‌ಗಾಗಿ ರಾಮಾಯಣ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟರು ಎನ್ನುವ ವಿಚಾರ ಬಯಲಾಗಿದೆ.

  English summary
  Mega Budget Ramayana: Bollywood actor Ranbir Kapoor in talks to play Lord Ram, Hrithik Roshan will play Ravana and Deepika Padukone Sita.
  Friday, August 20, 2021, 16:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X