ವಿಶಾಖಪಟ್ಟಣದಲ್ಲಿ ರಣ್ಬೀರ್ ಜೊತೆ ರಾಜಮೌಳಿ: 'ಬ್ರಹ್ಮಾಸ್ತ್ರ'ದ ಭರ್ಜರಿ ಪ್ರಚಾರ!

ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿವೆ. ಈ ವರ್ಷ ಹಿಂದಿಯಲ್ಲಿ ಹೆಚ್ಚು ನಿರೀಕ್ಷೆಯ ಜೊತೆಗೆ ದೊಡ್ಡ ಮಟ್ಟದಲ್ಲಿ ಬರುತ್ತಿರುವ ಸಿನಿಮಾ 'ಬ್ರಹ್ಮಾಸ್ತ್ರ'. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲೂ ಕೂಡ ರಿಲೀಸ್ ಆಗಲಿದೆ.

'ಬ್ರಹ್ಮಾಸ್ತ್ರ' ಮೇಕಿಂಗ್, ಹಾಡು ಮತ್ತು ಟೀಸರ್ ಇದು ಹೊಸ ರೀತಿಯ ಸಿನಿಮಾ ಎನ್ನುವುದನ್ನು ಹೇಳಿದೆ. ಈ ಸಿನಿಮಾವನ್ನು ಇಡೀ ಚಿತ್ರರಂಗ ಎದುರು ನೋಡುತ್ತಾ ಇದೆ. ಸಿನಿಮಾದ ರಿಲೀಸ್ ದಿನಾಂಕ ಕೂಡ ನಿಗದಿ ಆಗಿದೆ. ಸದ್ಯ ಪ್ರಚಾರದ ಕೆಲಸವನ್ನು ಸಿನಿಮಾ ತಂಡ ಶುರು ಮಾಡಿದೆ.

'ಬ್ರಹ್ಮಾಸ್ತ್ರ' ರಿಲೀಸ್ ಆಗೋಕೆ ಇನ್ನು ನಾಲ್ಕು ತಿಂಗಳು ಸಮಯ ಇದೆ. ಆದರೆ ಅದಾಗಲೇ ಸಿನಿಮಾ ತಂಡ ಅಬ್ಬರದ ಪ್ರಚಾರ ಶುರು ಮಾಡಿ ಬಿಟ್ಟಿದೆ. ಸೌತ್ ಮೂಲಕ ಸಿನಿಮಾ ಪ್ರಚಾರ ಶುರುವಾಗಿದ್ದು, ನಿರ್ದೇಶಕ ರಾಜಮೌಳಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.

ವಿಶಾಖಪಟ್ಟಣದಲ್ಲಿ ರಣ್ಬೀರ್ ಕಪೂರ್!

'ಬ್ರಹ್ಮಾಸ್ತ್ರ' ಸಿನಿಮಾದ ಅಬ್ಬರದ ಪ್ರಚಾರ ಶುರುವಾಗಿದೆ. ಹಾಗಾಗಿ ನಟ ರಣ್ಬೀರ್ ಕಪೂರ್ ವಿಶಾಖ ಪಟ್ಟಣಂಗೆ ಬಂದಿಳಿದಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರಕ್ಕಾಗಿ ನಿರ್ದೇಶಕ ಅಯಾನ್ ಮುಖರ್ಜಿ ಮತ್ತು ರಣ್ಬೀರ್ ಕಪೂರ್ ವೈಜಾಗ್‌ಗೆ ಬಂದಿದ್ದಾರೆ. ಇವರನ್ನು ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಏರ್ಪೋರ್ಟ್ ಎಂಟ್ರಿಯಲ್ಲಿ ಹೂವಿನ ಅಭಿಶೇಕ ಮಾಡಿ ಸ್ವಾಗತ ಕೋರಲಾಗಿದೆ.

'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ರಾಜಮೌಳಿ ಭಾಗಿ!

ಬಾಲಿವುಡ್ ಮಂದಿಗೆ ರಾಜಮೌಳಿ ಚಿರಪರಿಚಿತ. ಹಾಗಾಗಿ 'ಬ್ರಹ್ಮಾಸ್ತ್ರ' ಟೀಮ್ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ರಾಜಮೌಳಿಯ ಮೊರೆ ಹೋಗಿದೆ. ವೈಜಾಗ್‌ಗೆ ಬಂದ 'ಬ್ರಹ್ಮಾಸ್ತ್ರ' ತಂಡದ ಜೊತೆಗೆ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ರಣ್ಬೀರ್ ಜೊತೆಗೆ ರಾಜಮೌಳಿಯನ್ನು ಕಂಡ ಅಭಿಮಾನಿಗಳು ಅವರ ಜೊತೆಗೆ ಫೊಟೋ ತೆಗೆದುಕೊಳ್ಳಲು ಮುತ್ತಿಕೊಂಡಿದ್ದಾರೆ. ಅಲ್ಲಿನ ಸಾಕಷ್ಟು ವಿಡಿಯೋ ಮತ್ತು ಫೊಟೋಗಳು ವೈರಲ್ ಲಿಸ್ಟ್ ಸೇರಿಕೊಂಡಿವೆ.

ಸೆಪ್ಟೆಂಬರ್ 9ಕ್ಕೆ 'ಬ್ರಹ್ಮಾಸ್ತ್ರ' ರಿಲೀಸ್!

'ಬ್ರಹ್ಮಾಸ್ತ್ರ' ಚಿತ್ರದ ರಿಲೀಸ್‌ಗೆ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಸೆಪ್ಟೆಂಬರ್ 9ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಅದರೆ ನಾಲ್ಕು ತಿಂಗಳು ಮೊದಲೆ ಸಿನಿಮಾ ತಂಡ ಪ್ರಚಾರ ಕಾರ್ಯ ಶುರು ಮಾಡಿ ಅಚ್ಚರಿ ಮೂಡಿಸಿದೆ. ಸದ್ಯ ತೆಲುಗಿನಲ್ಲಿ ಪ್ರಚಾರ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು, ಮಲಯಾಳಂನಲ್ಲೂ ಕೂಡ ಸಿನಿಮಾ ಪ್ರಚಾರ ಮುಂದುವರೆಯಲಿದೆ.

'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ಆಲಿಯಾ ಮಿಸ್ಸಿಂಗ್!

'ಬ್ರಹ್ಮಾಸ್ತ್ರ' ಪ್ರಚಾರದಲ್ಲಿ ನಟ ರಣ್ಬೀರ್ ಕಪೂರ್ ಮತ್ತು ಅಯಾನ್ ಮುಖರ್ಜಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಆಲಿಯಾ ಭಟ್ ಗೈರಾಗಿದ್ದಾರೆ. ಇದಕ್ಕೆ ಕಾರಣ ಆಲಿಯಾ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಅಲಿಯಾ ಭಟ್ ತಮ್ಮ ಹಾಲಿವುಡ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ವಿಶಾಖ ಪಟ್ಟಣದಲ್ಲಿ ರಣ್ಬೀರ್ ಕಪೂರ್ ಜೊತೆಗೆ ಕಾಣಿಸಿಕೊಂಡಿಲ್ಲ.

More from Filmibeat

English summary
Ranbir Kapoor In Visakhapatnam With SS Rajamouli For Brahmastra Promotion, Video Goes Viral, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X