ಹಾನಿಕಾರಕ ನಿಕೋಟಿನ್ ವ್ಯಸನಿ ಆಗಿರುವ ರಣ್ಬೀರ್ ಕಪೂರ್.!
Recommended Video

ಬಾಲಿವುಡ್ ನಟ ರಣ್ಬೀರ್ ಕಪೂರ್ 'ಸಂಜು' ಚಿತ್ರದಲ್ಲಿ 'ಖಳನಾಯಕ್' ಸಂಜಯ್ ದತ್ ಆಗಿ ಅಭಿನಯಿಸಿರುವುದು ನಿಮಗೆಲ್ಲ ಗೊತ್ತೇ ಇದೆ. 'ಸಂಜು' ಚಿತ್ರದಲ್ಲಿ ಥೇಟ್ ಸಂಜಯ್ ದತ್ ರಂತೆಯೇ ಕಾಣುವ ರಣ್ಬೀರ್, 'ಶೋಕಿಲಾಲ'ನಾಗಿ, 'ಮಾದಕ ದ್ರವ್ಯ ವ್ಯಸನಿ'ಯಾಗಿ, 'ಖೈದಿ'ಯಾಗಿ... ಸಂಜಯ್ ದತ್ ಆತ್ಮಕಥೆಗೆ ಜೀವ ತುಂಬಿದ್ದಾರೆ.
'ಸಂಜು' ಚಿತ್ರ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸದ್ಯ ಪ್ರಚಾರ ಕಾರ್ಯಕ್ರಮಗಳಲ್ಲಿ ರಣ್ಬೀರ್ ಕಪೂರ್ ಬಿಜಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ 'ಸಂಜು' ಚಿತ್ರದ ಬಗ್ಗೆ ಮಾತನಾಡಲು ಹೋಗಿ, ತಮ್ಮ ಜೀವನದ ಕಹಿ ಸತ್ಯವೊಂದನ್ನೂ ರಣ್ಬೀರ್ ಕಪೂರ್ ಬಾಯ್ಬಿಟ್ಟಿದ್ದಾರೆ.
ನಟ ಸಂಜಯ್ ದತ್ ರಂತೆಯೇ ರಣ್ಬೀರ್ ಕಪೂರ್ ಕೂಡ ನಿಕೋಟಿನ್ ಗೆ ಅಡಿಕ್ಟ್ ಆಗಿದ್ದರಂತೆ. ಹದಿನೈದು ವರ್ಷ ವಯಸ್ಸಾಗಿದ್ದಾಗಲೇ, ನಿಕೋಟನ್ ಗೆ ದಾಸರಾಗಿದ್ದರಂತೆ ನಟ ರಣ್ಬೀರ್ ಕಪೂರ್. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ನಿಕೋಟಿನ್ ಅಡಿಕ್ಟ್
''ನಾಲ್ಕು ತಿಂಗಳ ಕಾಲ ನಾನು ಧೂಮಪಾನ ಮಾಡಿರಲಿಲ್ಲ. ಆದ್ರೆ, ಕಳೆದ ತಿಂಗಳು ನನ್ನ ಕೈಗೆ ಮತ್ತೆ ಸಿಗರೇಟ್ ಬಂತು. ಒಂದೆರಡು ದಿನ ಸ್ಮೋಕ್ ಮಾಡಿದೆ ಅಷ್ಟೇ. ಧೂಮಪಾನದ ಬಗ್ಗೆ ನನಗೆ ಹೆದರಿಕೆ ಶುರುವಾಗಿದೆ. ಯಾಕಂದ್ರೆ, ನಾನು 15 ವರ್ಷದವನಾಗಿದ್ದಾಗಿನಿಂದಲೂ ನಿಕೋಟಿನ್ ಗೆ ಅಡಿಕ್ಟ್ ಆಗಿರುವೆ. ಇದು ಅತ್ಯಂತ ಕೆಟ್ಟ ಚಟ'' ಎಂದು ಸಂದರ್ಶನವೊಂದರಲ್ಲಿ ನಟ ರಣ್ಬೀರ್ ಕಪೂರ್ ಹೇಳಿದ್ದಾರೆ.

ಕಿವಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ
''ಧೂಮಪಾನ ಬಿಟ್ಟುಬಿಡಲು ನನ್ನಿಂದ ಸಾಧ್ಯ ಆಗುತ್ತಿಲ್ಲ. ಅಂತಹ ದೃಢ ಮನಸ್ಸು ಮಾಡಲು ನನಗಾಗುತ್ತಿಲ್ಲ. ಇದಕ್ಕಾಗಿ ಎಷ್ಟೋ ಬಾರಿ ನಾನು ಆಸ್ಟ್ರಿಯಾಗೆ ಹೋಗಿ ಬಂದಿದ್ದೇನೆ. ಧೂಮಪಾನ ಬಿಡಿಸಲು ಆಸ್ಟ್ರಿಯಾದ ವೈದ್ಯರು ನನ್ನ ಕಿವಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಆದ್ರೆ, ಇದಾವುದೂ ನನ್ನಲ್ಲಿ ಕೆಲಸ ಮಾಡುತ್ತಿಲ್ಲ'' ಎಂದಿದ್ದಾರೆ ನಟ ರಣ್ಬೀರ್ ಕಪೂರ್.

ಸಂಜಯ್ ದತ್ ಕೂಡ ಡ್ರಗ್ ಅಡಿಕ್ಟ್
ರಣ್ಬೀರ್ ಕಪೂರ್ ಮಾತ್ರ ಅಲ್ಲ. ನಟ ಸಂಜಯ್ ದತ್ ಕೂಡ ಡ್ರಗ್ ಅಡಿಕ್ಟ್. ಸಂಜಯ್ ದತ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ರಣ್ಬೀರ್ ಕಪೂರ್ ಅಭಿನಯದ 'ಸಂಜು' ಟ್ರೈಲರ್ ನಲ್ಲಿ ಉತ್ತರ ನೀಡಲಾಗಿದೆ. ಒಮ್ಮೆ ತಂದೆ ಮೇಲೆ ಬೇಸರಗೊಂಡಿದ್ದಾಗ, ಮತ್ತೊಮ್ಮೆ ತಾಯಿ ಅನಾರೋಗ್ಯಕ್ಕೀಡಾದಾಗ ಡ್ರಗ್ಸ್ ಸೇವನೆ ಮಾಡಿದ್ದ ಸಂಜಯ್ ದತ್ ಕೊನೆಗೆ ಆ ನಶೆಯಲ್ಲೇ ಸಿಲುಕಿಕೊಂಡರು.

'ಸಂಜು' ಬಿಡುಗಡೆ ಯಾವಾಗ.?
ಪರೇಶ್ ರಾವಲ್, ನರ್ಗಿಸ್ ದತ್, ಮನೀಶಾ ಕೊಯಿರಾಲಾ, ದಿಯಾ ಮಿರ್ಜಾ, ಅನುಷ್ಕಾ ಶರ್ಮಾ, ಸೋನಂ ಕಪೂರ್, ಕರೀಶ್ಮಾ ತನ್ನಾ, ಬೋಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗ ಇರುವ 'ಸಂಜು' ಜೂನ್ 29 ರಂದು ಬಿಡುಗಡೆ ಆಗಲಿದೆ.


Click it and Unblock the Notifications











