''ಪ್ರಧಾನಿ ನರೇಂದ್ರ ಮೋದಿ ಅವರದ್ದು ಆಯಸ್ಕಾಂತದಂಥ ವ್ಯಕ್ತಿತ್ವ'' - ರಣಬೀರ್ ಕಪೂರ್...!
ಕಪೂರ್ ಖಾನ್ದಾನ್ ನ ಕುಡಿಯಾದರೂ ಬಾಲಿವುಡ್‌ನಲ್ಲಿ ತಮ್ಮದೇ ಸ್ಥಾನ-ಮಾನವನ್ನೂ ಹೊಂದಿರುವವರು ರಣಬೀರ್ ಕಪೂರ್. ಚಿತ್ರದಿಂದ ಚಿತ್ರಕ್ಕೆ ಅಭಿನಯದಿಂದ ಮಾಗಿದ ರಣಬೀರ್ ಕಪೂರ್ ತಮ್ಮನ್ನು ತಾವು ಪ್ರಯೋಗಾತ್ಮಕ ಚಿತ್ರಗಳಿಗೆ ಕೂಡ ಒಡ್ಡಿಕೊಳ್ಳುತ್ತಾನೇ ಬಂದಿದ್ದಾರೆ.
ಇಂಥಾ ರಣಬೀರ್ ಕಪೂರ್ ಸದ್ಯಕ್ಕೆ ಯಶ್ ನಿರ್ಮಾಣದಲ್ಲಿ ಮೂಡಿ ಬರಲಿರುವ 'ರಾಮಾಯಣ' ಚಿತ್ರದಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪಾತ್ರಕ್ಕೆ ಜೀವ ತುಂಬಲು ದೇಹ ದಂಡಿಸುತ್ತಿದ್ಧಾರೆ. ತಮ್ಮ ಬ್ಯುಸಿ ಟೈಮ್ ಟೇಬಲ್ ನಡುವೆ ಬಿಡುವು ಮಾಡಿಕೊಂಡು ಜೆರೋದಾ ಸಂಸ್ಥಾಪಕ, ಕನ್ನಡಿಗ ನಿಖಿಲ್ ಕಾಮತ್ ಅವರಿಗೆ ಸಂದರ್ಶನ ನೀಡಿದ್ದಾರೆ. ತಮ್ಮ ಬದುಕಿನ ಹಲವಾರು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ಧಾರೆ. ಇದೇ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೂ ಬಾಯ್ತುಂಬ ಹೊಗಳಿದ್ದಾರೆ ರಣಬೀರ್ ಕಪೂರ್.

ಹೌದು, ವ್ಯೆಯಕ್ತಿಕ ಬದುಕು, ಸಿನಿಮಾಗಳ ಕುರಿತು ಮಾತುಕಥೆಯ ನಡುವೆ, ರಣಬೀರ್ ಕಪೂರ್ ಅವರಿಗೆ ನಿಖಿಲ್ ಕಾಮತ್ ರಾಜಕೀಯದ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಮಾಡಿದ್ಧಾರೆ. ಇದಕ್ಕೆ ನಾನು ರಾಜಕೀಯದ ಕುರಿತು ಹೆಚ್ಚು ಯೋಚನೆ ಮಾಡುವುದಿಲ್ಲ ಎಂದಿರುವ ರಣಬೀರ್ ಕಪೂರ್, ಆದರೆ, 4-5 ವರ್ಷಗಳ ಹಿಂದೆ ನನ್ನನ್ನೂ ಒಳಗೊಂಡಂತೆ ಬಾಲಿವುಡ್‌ನ ಹಲವಾರು ನಟರು, ನಿರ್ದೇಶಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹೋಗಿದ್ದೆವು. ಆಗ ನನಗೆ ಅವರ ''ಆಯಸ್ಕಾಂತದಂತಹ ವ್ಯಕ್ತಿತ್ವದ ಅರಿವಾಯಿತು" ಎಂದು ಹೇಳಿದ್ದಾರೆ .
ನಮ್ಮ ಜೊತೆಯೇ ಅವರು ಕುಳಿತರು. ಹಲವು ವಿಚಾರಗಳ ಬಗ್ಗೆ ಅವತ್ತು ಅವರು ಮಾತನಾಡಿದರು. ಇಷ್ಟೇ ಅಲ್ಲ ಪ್ರತಿಯೊಬ್ಬರ ಜೊತೆ ಮಾತನಾಡಿ, ಅವರ ವ್ಯೆಯಕ್ತಿಕ ವಿಚಾರಗಳನ್ನೂ ಕೇಳಿ ತಿಳಿದುಕೊಂಡರು ಎಂದಿರುವ ರಣಬೀರ್ ಕಪೂರ್, ವಿಕ್ಕಿ ಕೌಶಲ್, ಕರಣ್ ಜೋಹರ್ ಸೇರಿ ಹಲವರ ಕುರಿತು ಕೂಡ ಮೋದಿ ಅವರು ಮುಕ್ತವಾಗಿ ಅವತ್ತು ಮಾತನಾಡಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ ರಣಬೀರ್ ಕಪೂರ್.

ಇನ್ನೂ.. ಆಗ ನನ್ನ ತಂದೆಯು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆಯೂ ಮೋದಿ ಅವರು ಕೇಳಿದ್ದರು ಎಂದಿರುವ ರಣಬೀರ್ ಕಪೂರ್, ಅವರಿಗೆ ಶ್ರಮ ಹಾಕುವ ಅಗತ್ಯ ಇರಲ್ಲ. ಆದರೂ ಅವರು ಶ್ರಮ ವಹಿಸುತ್ತಾರೆ. ನಿತ್ಯ ನಿರಂತರ ಪ್ರಯತ್ನವನ್ನೂ ಮಾಡುತ್ತಾರೆ. ಶಾರುಖ್ ಖಾನ್ ಸೇರಿ ಹೀಗೆ ಹಲವಾರು ಸಾಧಕರಿದ್ದಾರೆ, ಅವರಲ್ಲಿ ಮಾತ್ರ ಈ ತರಹದ ಶ್ರಮ ಹಾಕಲು ಸಾಧ್ಯ ಎಂದಿದ್ದಾರೆ. ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹೀಗೆ ಮಾತನಾಡಿದ ನಂತರ ನರೇಂದ್ರ ಮೋದಿ ಅವರ ಜೊತೆ ಸಮಯ ಕಳೆದ ಅನುಭವವನ್ನೂ ನೀವು ಹಂಚಿಕೊಳ್ಳಿ ಎಂದು ನಿಖಿಲ್ ಕಾಮತ್ ಅವರನ್ನು ರಣಬೀರ್ ಕೇಳಿದ್ಧಾರೆ. ಇದಕ್ಕೆ ಉತ್ತರ ನೀಡಿರುವ ನಿಖಿಲ್ ಕಾಮತ್ ನಾನು ನರೇಂದ್ರ ಮೋದಿ ಅವರ ಜತೆ ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಒಂದಲ್ಲ ಒಂದು ಕಾರ್ಯಕ್ರಮ, ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಅವರ ವಯಸ್ಸಿನಲ್ಲಿ, ಅವರಷ್ಟು ಶ್ರಮ ವಹಿಸುವುದು ನನಗೆ ಅಚ್ಚರಿಯಾಯಿತು. ಅವರು ಕೂಡ ನನಗೆ ಸ್ಫೂರ್ತಿ ಎಂದಿದ್ದಾರೆ ನಿಖಿಲ್ ಕಾಮತ್.
ಸದ್ಯ ನಿಖಿಲ್ ಕಾಮತ್ ಮತ್ತು ರಣಬೀರ್ ಕಪೂರ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಡೆಸಿದ ಮಾತುಕತೆಯ ತುಣುಕು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.


Click it and Unblock the Notifications











