Animal Trailer: ವೈಲೆನ್ಸ್... ವೈಲೆನ್ಸ್...ವೈಲೆನ್ಸ್: ಅಪ್ಪನ ಮೇಲಿನ ಪ್ರೀತಿಗೆ 'ದೊಡ್ಡಪ್ಪ'ನನ್ನು ಹಿಡಿದು ಬಂದ ಮಗ!

ಬಹುನಿರೀಕ್ಷಿತ 'ಅನಿಮಲ್' ಚಿತ್ರದ ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಸಿದೆ. ರಣ್‌ಬೀರ್ ಕಪೂರ್ ಆರ್ಭಟಕ್ಕೆ ಸಿನಿರಸಿಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ತಂದೆ- ಮಗನ ಬಾಂಧವ್ಯದ ಕಥೆಯನ್ನು ಬಹಳ ಹಿಂಸಾತ್ಮಕವಾಗಿ ಕಟ್ಟಿಕೊಟ್ಟಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ಮತ್ತೊಂದು ಹಿಟ್ ಕೊಡುವ ಸುಳಿವು ಸಿಕ್ತಿದೆ.

ರಣ್‌ಬೀರ್‌ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಟಾಕ್‌ ಆಫ್‌ ದ ಟೌನ್ ಆಗಿದೆ. ಹೆಚ್ಚು ರೊಮ್ಯಾಂಟಿಕ್ ಹೀರೋ ಆಗಿ ಬಾಲಿವುಡ್‌ನಲ್ಲಿ ಕಮಾಲ್ ಮಾಡಿದ್ದ ರಣ್‌ಬೀರ್ ಈ ಬಾರಿ ಸಿಕ್ಕಾಪಟ್ಟೆ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರೆಡ್ಡಿ ಹಾಗೂ ಕಬೀರ್ ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ 'ಅನಿಮಲ್' ಚಿತ್ರದ ಸೂತ್ರಧಾರಿ. ಚಿತ್ರದಲ್ಲಿ ರಣ್‌ಬೀರ್ ತಂದೆ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ.

Ranbir Kapoor, Rashmika Mandanna Starrer Animal Trailer Released

ತಂದೆ ಮಗನ ಸೆಂಟಿಮೆಂಟ್‌ನ ಅಂಡರ್‌ವರ್ಲ್ಡ್ ಕ್ರೈಂ ಬ್ಯಾಕ್‌ಡ್ರಾಪ್‌ನಲ್ಲಿ ತೆರೆಗೆ ತರಲಾಗುತ್ತಿದೆ. ಮೂರೂವರೆ ನಿಮಿಷದ ಟ್ರೇಲರ್ 'ಅನಿಮಲ್' ಸಿನಿಮಾ ಹೇಗಿರುತ್ತೆ ಅನ್ನೋದರ ಸುಳಿವು ಕೊಡುತ್ತಿದೆ. ತಂದೆ ಮೇಲೆ ಅಪಾರ ಪ್ರೀತಿ ಇರುವ ಮಗ, ತಂದೆ ಗದರಿದರೂ, ದ್ವೇಷಿಸಿದರೂ ತಂದೆಗಾಗಿ ಏನು ಬೇಕಾದರೂ ಮಾಡುವಷ್ಟು ಪ್ರೀತಿಸುವ ಮಗ. ಅಂತಹ ತಂದೆ ಮೇಲೆ ದಾಳಿ ನಡೆದರೆ ಮಗ ಸುಮ್ಮನಿರುತ್ತಾನಾ? ಆತ ಮೃಗದಂತೆ ತಿರುಗಿ ಬಿದ್ದರೆ ಏನಾಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಹೇಳುವಂತೆ ಕಾಣುತ್ತಿದೆ.

ಬಲ್‌ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್ ಹಾಗೂ ಆತನ ಮಗ ಅರ್ಜುನ್ ಸಿಂಗ್ ಆಗಿ ರಣ್‌ಬೀರ್ ನಟಿಸಿದ್ದಾರೆ. ಬಹಳ ನಿಷ್ಟುರ, ಕಟ್ಟುನಿಟ್ಟಿನ ತಂದೆಯ ಪೋಷಣೆಯಲ್ಲಿ ಬೆಳೆದ ಮಗ ಮುಂದೆ ಪಾತಕ ಲೋಕಕ್ಕೆ ಇಳಿಯುತ್ತಾನೆ. ಆದರೂ ತಂದೆಯ ಮೇಲಿನ ಅತಿಯಾದ ಮಮಕಾರದಿಂದ ಮಗ ನಿರ್ದಯಿ ಸೈಕೋಪಾತ್ ಆಗಿಬಿಡುವ ಎಳೆ ಚಿತ್ರದಲ್ಲಿದೆ. ಟ್ರೈಲರ್ ಪ್ರತಿಫ್ರೇಮ್ ಕುತೂಹಲ ಮೂಡಿಸುತ್ತದೆ. ರಣ್‌ಬೀರ್ ಮಾತ್ರವಲ್ಲ ಕೆಲ ಸನ್ನಿವೇಶಗಳಲ್ಲಿ ರಶ್ಮಿಕಾ ಕೂಡ ವೈಲೆಂಟ್ ಆಗಿದ್ದಾರೆ. ಇನ್ನು ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಡಬ್ಬಿಂಗ್ ಗುಣಮಟ್ಟವೂ ಚೆನ್ನಾಗಿದೆ.

Ranbir Kapoor, Rashmika Mandanna Starrer Animal Trailer Released

ಬಾಬಿ ಡಿಯೋಲ್ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಣ್‌ಬೀರ್- ಬಾಬಿ ಫೈಟ್ ಕಿಕ್ ಕೊಡುವಂತಿದೆ. ಇನ್ನು ಸೈಕೋ ಪಾತ್‌ ರೀತಿ ಮನಬಂದಂತೆ ರಣ್‌ಬೀರ್ ಎದುರಾಳಿಗಳನ್ನು ಕೊಲ್ಲುವುದು ಬಹಳ ಕ್ರೂರವಾಗಿದೆ. ಆತನ ಇನ್‌ಟೆನ್ಸ್ ಪರ್ಫಾರ್ಮನ್ಸ್ ಚಿತ್ರದಲ್ಲಿ ಹೈಲೆಟ್ ಆಗುವಂತೆ ಕಾಣುತ್ತಿದೆ. ಇದೇ ಕಾರಣಕ್ಕೂ ಏನೋ ಸೆನ್ಸಾರ್ ಮಂಡಳಿ ತಂದೆ ಮಗನ ಬಾಂಧವ್ಯದ ಕತೆಗೆ 'A' ಸರ್ಟಿಫಿಕೇಟ್ ಕೊಡುವಂತಾಗಿದೆ.

ಬಹಳ ಅದ್ಧೂರಿಯಾಗಿ 'ಅನಿಮಲ್' ಸಿನಿಮಾ ನಿರ್ಮಾಣವಾಗಿದೆ. ಟೀ-ಸೀರಿಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ 1 ಸ್ಟುಡಿಯೋ ಸಂಸ್ಥೆಗಳು ಬಂಡವಾಳ ಹೂಡಿವೆ. ಚಿತ್ರದ ರನ್‌ಟೈಮ್ ಬರೋಬ್ಬರಿ 3 ಗಂಟೆ 21 ನಿಮಿಷ ಎಂದು ಚಿತ್ರತಂಡವೇ ಘೋಷಿಸಿದೆ. ಇಷ್ಟು ದೊಡ್ಡ ಸಿನಿಮಾವನ್ನು ಪ್ರೇಕ್ಷಕರು ತಾಳ್ಮೆಯಿಂದ ನೋಡುತ್ತಾರಾ ಎನ್ನುವ ಚರ್ಚೆ ಕೂಡ ನಡೀತಿದೆ. ಟ್ರೈಲರ್ ನೋಡಿದ ಮೇಲೆ ಕಂಡಿತ ಚಿತ್ರ ಗೆಲ್ಲುತ್ತೆ ಎನ್ನುವ ಮಾತುಗಳು ಶುರುವಾಗಿದೆ.

ಶಕ್ತಿ ಕಪೂರ್, ಪ್ರೇಮ್ ಚೋಪ್ರಾ, ರವಿ ಗುಪ್ತಾ ಸೇರಿದಂತೆ ದೊಡ್ಡ ತಾರಾಗಣ 'ಅನಿಮಲ್' ಬಳಗದಲ್ಲಿದೆ. ಏಳೆಂಟು ಜನ ಸಂಗೀತ ನಿರ್ದೇಶಕರು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಹರ್ಷವರ್ಧನ್, ರಾಮೇಶ್ವರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಟ್ರೈಲರ್ ಬಿಜಿಎಂ, ವಿಷ್ಯುವಲ್ಸ್, ರಣ್‌ಬೀರ್, ರಶ್ಮಿಕಾ, ಅನಿಲ್ ಕಪೂರ್ ಪರ್ಫಾರ್ಮನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 'KGF'-2 ಚಿತ್ರದಲ್ಲಿ ಯಶ್ 'ದೊಡ್ಡಮ್ಮ' ಎಂದು ದೊಡ್ಡ ಗನ್ ಹಿಡಿದು ಅಬ್ಬರಿಸಿದ್ದರು. 'ಅನಿಮಲ್' ಚಿತ್ರದ ಸನ್ನಿವೇಶವೊಂದರಲ್ಲಿ ರಣ್‌ಬೀರ್ ಅದಕ್ಕಿಂತ ದೊಡ್ಡ ಗನ್ ಹಿಡಿದು ವಿಧ್ವಂಸ ಸೃಷ್ಟಿಸಿದ್ದಾರೆ. ಮೊದಲಿಗೆ ಪರಿಣಿತಿ ಚೋಪ್ರಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಆ ಅವಕಾಶ ರಶ್ಮಿಕಾ ಪಾಲಾಗಿತ್ತು.

More from Filmibeat

English summary
Sandeep Reddy Vanga directional Animal film Trailer Out now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X