Alia Bhatt Marriage: ತನ್ನ ಮತ್ತು ಆಲಿಯಾ ಮದುವೆ ಬಗ್ಗೆ ಕೊನೆಗೂ ಉತ್ತರಿಸಿದ ನಟ ರಣ್‌ಬೀರ್ ಕಪೂರ್!

ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣ್‍ಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು. ಆರಂಭದಲ್ಲಿ ತಮ್ಮ ರಿಲೆಷನ್ ಶಿಪ್ ಬಗ್ಗೆ ಎಲ್ಲೂ ಬಾಯಿ ಬಿಡದ ಈ ಜೋಡಿ ನಂತರದ ದಿನಗಳಲ್ಲಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ಸದ್ಯ ರಣ್‍ಬೀರ್ ಹಾಗೂ ಆಲಿಯಾ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಆಲಿಯಾ ಭಟ್ ನನ್ನ ಹಾಗೂ ರಣ್‍ಬೀರ್ ಕಪೂರ್ ಮದುವೆ ಈ ವರ್ಷವೇ ಪಕ್ಕಾ ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿದೆ.

ಆಲಿಯಾರನ್ನು ರಣ್‍ಬೀರ್ ಬಹಳ ಇಷ್ಟಪಡುತ್ತಾರೆ. ಈ ಜೋಡಿಯಾ ಮದುವೆಗೆ ಎರಡು ಕುಟುಂಬಗಳು ಒಪ್ಪಿಕೊಂಡಿದೆ. ಸದ್ಯ ಇತ್ತೀಚೆಗಷ್ಟೇ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯವಾಡಿ' ಟ್ರೈಲರ್ ಬಿಡುಗಡೆಯಾಗಿದೆ. ಇದರ ಬೆನ್ನೆಲೆ ಅಭಿಮಾನಿಗಳು ಶೀಘ್ರವೇ ರಣ್‍ಬೀರ್ ಹಾಗೂ ಆಲಿಯಾ ಮದುವೆಯನ್ನು ನಾವು ನಿರೀಕ್ಷಿಸಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್​ ನಡುವಿನ ಪ್ರೇಮ್​ ಕಹಾನಿ ಈಗ ಗುಟ್ಟಾಗಿ ಉಳಿದಿಲ್ಲ.

Ranbir Kapoor reacts about wedding with Alia Bhatt

ಇದೀಗ ಮದುವೆ ಬಗ್ಗೆ ಸ್ವತಃ ರಣ್‌ಬೀರ್ ಕಪೂರ್ ಮಾತನಾಡಿದ್ದಾರೆ. ಮಾಧ್ಯಮದವರು ಮದುವೆ ಬಗ್ಗೆ ಕೇಳಿದಕ್ಕೆ ರಣ್‌ಬೀರ್ ಕಪೂರ್ ಗರಂ ಆಗಿದ್ದಾರೆ. ಮಾದ್ಯಮದವರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ " ನನ್ನ ಮದುವೆ ಯಾವಾಗ ಅಂತ ಮಾದ್ಯಮದರಿಗೆ ಹೇಳಲು ನನಗೆ ಹುಚ್ಚು ನಾಯಿ ಕಡಿದಿದ್ಯಾ?" ಎಂದು ಪ್ರಶ್ನಿಸಿದ್ದಾರೆ. ಹೀಗೆ ಮಾಧ್ಯಮದವರ ಮೇಲೆ ಎಗರಾಡಿದ ರಣ್‌ಬೀರ್ ಕಪೂರ್ ನಂತರ ಕೆಲ ಸಮಯದ ಬಳಿಕ ಮತ್ತೆ ಬಂದು" ಮದುವೆ ಆಗುತ್ತೇವೆ. ಆದಷ್ಟು ಬೇಗ ಆಗುತ್ತೇವೆ. ಆಗ ನಿಮಗೆ ತಿಳಿಯಲಿದೆ" ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.

Ranbir Kapoor reacts about wedding with Alia Bhatt

ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಈ ವರ್ಷವೇ ಆಗಲಿದೆ ಎಂಬ ಗುಸು ಗುಸು ನಡುವೆ ರಣ್ಬೀರ್ ಕಪೂರ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗ ಮದುವೆ ಆಗಲಿದ್ದೇವೆ ಎಂದು ತಿಳಿಸಿರೋದು ಫ್ಯಾನ್ಸ್‌ಗೆ ಖುಷಿ ನೀಡಿದೆ. ತಮ್ಮಿಬ್ಬರ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿಯೇ ಮಾತನಾಡಿಕೊಂಡಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳು ಸಾರಿ ಸಾರಿ ಹೇಳುತ್ತಿದೆ. ಅಷ್ಟೇ ಅಲ್ಲದೇ, ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮಾತನಾಡಿದ್ದಾರೆ ಕೂಡ. ಇನ್ನು ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಮದುವೆ ಲೊಕೇಶನ್​ ಕೂಡ ಫೈನಲ್​ ಆಗಿದೆ ಎಂಬಿತ್ಯಾದಿ ಸುದ್ದಿ ಸಹ ಈ ಹಿಂದೆ ಹರಿದಾಡಿತ್ತು.

More from Filmibeat

English summary
Ranbir Kapoor Ranbir Kapoor reacts about wedding in media.Here is his reaction details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X