Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಣ್ಬೀರ್ ಕಪೂರ್ ಸೈಕಲ್: ಬುಲೆಟ್ ಬೈಕ್‌ಗಿಂತಲೂ ದುಬಾರಿ!
ರಣ್ಬೀರ್ ಕಪೂರ್, ಬಾಲಿವುಡ್‌ನ ಸ್ಟೈಲಿಸ್ಟ್ ಹಾಗೂ ಅತ್ಯಂತ ದುಬಾರಿ ನಟರೂ ಹೌದು. ಇತ್ತೀಚೆಗಷ್ಟೆ ರಣ್ಬೀರ್ ಕಪೂರ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ನೂರಾರು ಕೋಟಿ ಹಣವನ್ನು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದೆ.
ಕಪೂರ್ ಖಾಂದಾನದ ರಣ್ಬೀರ್ ಕಪೂರ್ ಜೀವನ ಶೈಲಿ ಅತ್ಯಂತ ಐಶಾರಾಮಿ. ಐಶಾರಾಮಿ ಕಾರುಗಳು, ಮನೆ, ಪ್ರೈವೇಟ್ ಜೆಟ್ ಪ್ರಯಾಣಗಳು ರಣ್ಬೀರ್ ಕಪೂರ್‌ಗೆ ಸಾಮಾನ್ಯ.
ರಣ್ಬೀರ್ ಕಪೂರ್ ಬಳಿ ಹಲವು ಐಶಾರಾಮಿ, ಅತ್ಯಂತ ದುಬಾರಿ ಸ್ಪೋರ್ಟ್ಸ್ ಕಾರುಗಳಿವೆ. ರಣ್ಬೀರ್ ಕಪೂರ್‌ರ ಬೈಕ್‌ಗಳ ಕಲೆಕ್ಷನ್ ಸಹ ದೊಡ್ಡದಾಗಿಯೇ ಇದೆ. ಆದರೆ ರಣ್ಬೀರ್ ಕಪೂರ್ ಇತ್ತೀಚೆಗಷ್ಟೆ ತಮ್ಮ ಮನೆಯ ಬಳಿ ಸೈಕಲ್ ತುಳಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಸೈಕಲ್ ಸಹ ಸಾಮಾನ್ಯ ಬೆಲೆಯದ್ದಲ್ಲ. ರಣ್ಬೀರ್ ಕಪೂರ್ ಬಳಿ ಇರುವ ಸೈಕಲ್‌ನ ಬೆಲೆಗೆ ಹೊಸದೊಂದು ಬುಲೆಟ್ ಬೈಕನ್ನೇ ಖರೀದಿಸಬಹುದು!

ಹೊಸ ಮನೆ ಕಟ್ಟಿಸುತ್ತಿರುವ ರಣ್ಬೀರ್
ರಣ್ಬೀರ್ ಕಪೂರ್ ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಹೊಸದೊಂದು ಮನೆ ಕಟ್ಟಿಸುತ್ತಿದ್ದು ಆಗಾಗ್ಗೆ ಸೈಟ್ ವಿಸಿಟ್ ಮಾಡುತ್ತಿರುತ್ತಾರೆ. ಹೀಗೆ ಮೊನ್ನೆ ತಮ್ಮ ಇ-ಸೈಕಲ್‌ನಲ್ಲಿಯೇ ಸೈಟ್‌ಗೆ ರಣ್ಬೀರ್ ಕಪೂರ್ ಹೊಸ ಮನೆಯ ಬಳಿ ಬಂದಿದ್ದಾಗ ಫೋಟೊಗ್ರಾಫರ್‌ಗಳ ಕಣ್ಣಿಗೆ ಬಿದ್ದಿದ್ದಾರೆ. ಜೀನ್ಸ್, ಟಿ-ಶರ್ಟ್ ಹಾಗೂ ನೀಲಿ ಬಣ್ಣದ ಟೋಪಿ ತೊಟ್ಟು ಫಂಕಿ ಲುಕ್‌ನಲ್ಲಿ ಸೈಕಲ್ ಮೇಲೆ ಬಂದಿದ್ದ ರಣ್ಬೀರ್ ಕಪೂರ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದರು. ಆದರೆ ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆದಿದ್ದು ರಣ್ಬೀರ್ ಕಪೂರ್‌ರ ಇ-ಸೈಕಲ್.

ಯಾವ ಸಂಸ್ಥೆಯ ಸೈಕಲ್ ಅದು?
ರಣ್ಬೀರ್ ಚಲಾಯಿಸಿಕೊಂಡು ಬಂದಿದ್ದು ಕೋಪನ್‌ಹೆಗನ್ ಕಂಪೆನಿಯ 'ಮೇಟ್ ಎಕ್ಸ್' ಇ-ಬೈಕ್. ಕೆಂಪು ಬಣ್ಣದ ಈ ಎಲೆಕ್ರ್ಟಾನಿಕ್ ಸೈಕಲ್ ಬ್ಯಾಟರಿ ಜೊತೆ ಹಾಗೂ ಕಾಲ್ಚಲನೆ ಎರಡರ ಮುಖಾಂತರವೂ ಚಲಿಸುತ್ತದೆ. ಬೈಕ್ ರೀತಿ ದೊಡ್ಡ ಟಯರ್‌ಗಳನ್ನು ಹೊಂದಿರುವ ಈ ಇ-ಸೈಕಲ್ ಅನ್ನು ಮಡಚಿ ಇಡಬಹುದು ಸಹ. ಹವ್ಯಾಸಿ ಸೈಕಲಿಸ್ಟ್‌ಗಳು ಹೆಚ್ಚಾಗಿ ಈ ಸೈಕಲ್ ಅನ್ನು ಬಳಸುತ್ತಾರೆ. ಐಶಾರಾಮಿ ಜೀವನಶೈಲಿಯ ಜೊತೆಗೆ ಆರೋಗ್ಯದ ಕಾಳಜಿಯನ್ನೂ ಹೊಂದಿರುವ ರಣ್ಬೀರ್ ಇದೇ ಸೈಕಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇ-ಸೈಕಲ್‌ನ ಬೆಲೆ ಎಷ್ಟು?
ರಣ್ಬೀರ್ ಕಪೂರ್ ಚಲಾಯಿಸಿದ ಕೋಪನ್‌ಹೆಗನ್, 'ಮೇಟ್ ಎಕ್ಸ್' ಇ-ಸೈಕಲ್ ಅಥವಾ ಇ-ಬೈಕ್‌ನ ಬೆಲೆ ಬರೋಬ್ಬರಿ 1.45 ಲಕ್ಷ ರುಪಾಯಿ. ಈ ಬೆಲೆಗೆ ಭಾರತದಲ್ಲಿ ಹಲವು ಪೆಟ್ರೋಲ್ ಬೈಕ್‌ಗಳು ಬಂದು ಬಿಡುತ್ತವೆ. ಕೆಲವು ಮಾದರಿಯ ಬುಲೆಟ್ ಬೈಕ್‌ಗಳು ಸಹ 1.45 ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತವೆ. ಸಿನಿಮಾ ಒಂದಕ್ಕೆ ಕೋಟಿಗಟ್ಟಲೆ ಸಂಭಾವನೆ ಪಡೆವ ರಣ್ಬೀರ್ ಕಪೂರ್‌ಗೆ 1.45 ಲಕ್ಷ ಅತ್ಯಂತ ಕಡಿಮೆ ಮೊತ್ತವೇ ಬಿಡಿ.

ಪೋಷಕರಾಗಿರುವ ರಣ್ಬೀರ್-ಆಲಿಯಾ
ಅಂದಹಾಗೆ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇತ್ತೀಚೆಗಷ್ಟೆ ಪೋಷಕರಾಗಿದ್ದಾರೆ. ಆಲಿಯಾ ಭಟ್ ಇದೇ ತಿಂಗಳ ಆರಂಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಜೋಡಿ ಇದೇ ವರ್ಷ ಏಪ್ರಿಲ್ 14 ರಂದು ತಮ್ಮದೇ ಮನೆಯಲ್ಲಿ ವಿವಾಹವಾಗಿದ್ದರು. ಮನೆಯಲ್ಲೇ ಮದುವೆ ನಡೆದರು ಅದ್ಧೂರಿಯಾಗಿ ನಡೆದಿತ್ತು. ಬಾಲಿವುಡ್‌ನ ಹಲವು ಗಣ್ಯರು ಆಗಮಿಸಿದ್ದರು. ಸಿನಿಮಾಗಳ ವಿಷಯಕ್ಕೆ ಬರುವುದಾದರೆ ರಣ್ಬೀರ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಹಿಟ್ ಆಗಿದೆ. ಇದೀಗ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ 'ಅನಿಮಲ್' ಸಿನಿಮಾದಲ್ಲಿ ರಣ್ಬೀರ್ ನಟಿಸುತ್ತಿದ್ದಾರೆ. ಬಳಿಕ ಮತ್ತೆ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಲಿದ್ದಾರೆ.