For Quick Alerts
  ALLOW NOTIFICATIONS  
  For Daily Alerts

  ಬಾಯ್ಕಾಟ್​ ಬಿಸಿ ನಡುವೆ ಕೋಟಿ ಕೋಟಿ ಬಾಚಿದ ಬ್ರಹ್ಮಾಸ್ತ್ರ: 4ನೇ ದಿನವೂ ಭರ್ಜರಿ ಕಲೆಕ್ಷನ್!

  |

  ರಣ್ಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಬಾಯ್ಕಾಟ್​ ಬಿಸಿಯಿಂದ ಬೇಸರಗೊಂಡಿದ್ದ ಚಿತ್ರತಂಡಕ್ಕೆ ಸದ್ಯದ ಗಳಿಕೆ ಒಂದಿಷ್ಟು ಸಮಾಧಾನ ತಂದಿದೆ. ಪ್ಯಾನ್​ ಇಂಡಿಯಾ ಚಿತ್ರವಾಗಿ ತೆರೆಕಂಡ ಬ್ರಹ್ಮಾಸ್ತ್ರ ಚಿತ್ರ ನಾಲ್ಕನೇ ದಿನ 14 ರಿಂದ 15 ಕೋಟಿ ರೂಪಾಯಿ ಬಾಚಿಕೊಂಡಿದೆ. ಸಿನಿಮಾ ತೆರೆಕಂಡು ಮೊದಲ ಸೋಮವಾರ ಚಿತ್ರತಂಡದ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಮಾಡಿದೆ. ಸೋಮವಾರ ಹಿಂದಿ ಭಾಷಿಕ ಪ್ರದೇಶದಲ್ಲಿ ಸುಮಾರು 12 ಕೋಟಿ ಕಲೆಕ್ಷನ್​ ಮಾಡಿರುವ ಬ್ರಹ್ಮಾಸ್ತ್ರ ಚಿತ್ರ, ಇತರ ಭಾಷೆಗಳಲ್ಲಿ 2 ಕೋಟಿಗೂ ಅಧಿಕ ಗಳಿಸಿದೆ.

  ಬಾಯ್ಕಾಟ್​ ಬ್ರಹ್ಮಾಸ್ತ್ರ ಅಭಿಯಾನದಿಂದ ಅಸಮಾಧಾನಗೊಂಡಿದ್ದ ಚಿತ್ರತಂಡಕ್ಕೆ ರಿಲೀಫ್​ ಸಿಕ್ಕಿದ್ದು, ಚಿತ್ರ ತೆರೆ ಕಂಡ ದಿನ ಸಪ್ಟೆಂಬರ್​ 9ರಿಂದ ಮೊದಲ ವೀಕೆಂಡ್​ ಅಂದರೆ ಮೂರು ದಿನಗಳಲ್ಲಿ 225 ಕೋಟಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ. ಮೊದಲ ದಿನ 75 ಕೋಟಿ ಗಳಿಸಿದ್ದ ಚಿತ್ರ, ಶನಿವಾರ 85 ಕೋಟಿ ಹಾಗೂ ಭಾನುವಾರ 65 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ಮೂರು ದಿನದ ಕಲೆಕ್ಷನ್ ಹೋಲಿಸಿದರೆ ಸೋಮವಾರದ ಕಲೆಕ್ಷನ್ ತುಸು ಕಡಿಮೆ ಆಗಿದೆಯಾದರೂ, ಸಿನಿಮಾದ ಒಟ್ಟಾರೆ ಕಲೆಕ್ಷನ್ ಏರುಗತಿಯಲ್ಲಿಯೇ ಸಾಗಿದೆ.

  ಬ್ರಹ್ಮಾಸ್ತ್ರ ಚಿತ್ರ ರಿಲೀಸ್​ಗೂ ಮುನ್ನ ಭಾರೀ ವಿವಾದದಕ್ಕೆ ಕಾರಣವಾಗಿತ್ತು. ಚಿತ್ರದ ನಾಯಕ ರಣ್ಬೀರ್​ ಕಪೂರ್​ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಸಿನಿ ಪ್ರಿಯರು, ಬಾಯ್ಕಾಟ್​ ಬ್ರಹ್ಮಾಸ್ತ್ರ ಅಭಿಯಾನ ಆರಂಭಿಸಿದ್ದರು. ಇದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡ್​ ಕೂಡ ಆಗಿತ್ತು. ಈ ಅಭಿಯಾನ ಚಿತ್ರದ ಮೇಲೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಚಿತ್ರ ದಾಖಲೆಯ ಗಳಿಕೆ ಪಡೆದಿದೆ. ಇನ್ನು ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಹಿಂದಿ ಅಷ್ಟೇ ಅಲ್ಲದೇ ಕನ್ನಡ, ಮಲಯಾಳಂ, ತೆಲುಗು, ತಮಿಳಿನಲ್ಲೂ ತೆರೆಕಂಡಿದ್ದು, ದಕ್ಷಿಣ ಭಾರತದಲ್ಲೂ ಬ್ರಹ್ಮಾಸ್ತ್ರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

  ಇನ್ನು ಬ್ರಹ್ಮಾಸ್ತ್ರ ಚಿತ್ರ ಇನ್ನೇನು ತೆರೆಕಾಣಬೇಕು ಆಗ ಬಾಯ್ಕಾಟ್​ ಅಭಿಯಾನ ಆರಂಭವಾದ ಕಾರಣ ಸಿನಿಮಾ ಸೋಲು ಕಾಣುವ ಭಯದಲ್ಲಿ ಚಿತ್ರತಂಡ ಸುಮಾರು ಒಂದು ತಿಂಗಳುಗಳ ಕಾಲ ಪ್ರಚಾರ ನಡೆಸಿದ್ದರು. ದಕ್ಷಿಣ ಭಾರತದ ಮೇಲೂ ಚಿತ್ರತಂಡ ಹೆಚ್ಚಿನ ಗಮನ ಹರಿಸಿದ್ದು, ನಿರ್ದೇಶಕ ರಾಜ್​ಮೌಳಿ ಕೂಡ ಚಿತ್ರತಂಡಕ್ಕೆ ಸಾಥ್​ ನೀಡಿದ್ದರು. ಬ್ರಹ್ಮಾಸ್ತ್ರ ಚಿತ್ರತಂಡ ಜೊತೆ ಜೊತೆಗೆ ರಾಜ್​ಮೌಳಿ ಕೂಡ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಸುದ್ದಿಗೋಷ್ಠಿಗಳನ್ನು ನಡೆಸಿ ಸಿನಿಪ್ರಿಯರ ಗಮನ ಸೆಳೆದಿದ್ದರು. ಒಟ್ಟಾರೆ ನಿರಂತರ ಪ್ರಚಾರ ನಡೆಸಿ ಬ್ರಹ್ಮಾಸ್ತ್ರ ಚಿತ್ರತಂಡ ಕೊನೆಗೂ ಬಾಯ್ಕಾಟ್​ಗೆ ಟಕ್ಕರ್​ ನೀಡಿ ಬಾಕ್ಸ್​ ಆಫೀಸ್​ನಲ್ಲಿ 225ಕ್ಕೂ ಅಧಿಕ ಕೋಟಿ ಹಣ ಬಾಚಿಕೊಂಡಿದೆ.

  English summary
  Rababir Kapoor starrer Brahmastra Box Office estimated day 4 collection.
  Wednesday, September 14, 2022, 10:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X