twitter
    For Quick Alerts
    ALLOW NOTIFICATIONS  
    For Daily Alerts

    'ಬ್ರಹ್ಮಾಸ್ತ್ರ'ಕ್ಕೆ ರಾಷ್ಟ್ರೀಯ ಸಿನಿಮಾ ದಿನಾಚರಣೆ ವರದಾನ: ಶೇ.240ರಷ್ಟು ಗಳಿಕೆಯಲ್ಲಿ ಏರಿಕೆ?

    |

    ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಬಾಲಿವುಡ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ತೆರೆ ಕಂಡು 15 ದಿನ ಕಳೆದರೂ 'ಬ್ರಹ್ಮಾಸ್ತ್ರ' ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಾಣುತ್ತಿದೆ.

    ಮೊದಲೆರಡು ದಿನ ಉತ್ತಮ ಗಳಿಕೆ ಕಂಡ 'ಬ್ರಹ್ಮಾಸ್ತ್ರ' ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಬಾಕ್ಸ್‌ ಆಫೀಸ್‌ನಲ್ಲಿ ಮಾತ್ರ ಹೊಸ ಮೈಲಿಗಲ್ಲು ಸೃಷ್ಟಿಮಾಡಿದೆ. ವಿಶ್ವದಾದ್ಯಂತ ಒಟ್ಟು 5,000 ಸ್ಕ್ರೀನ್‌ಗಳಲ್ಲಿ ತೆರೆ ಕಂಡ ಬ್ರಹ್ಮಾಸ್ತ್ರ, ಬಾಕ್ಸ್‌ಆಫೀಸ್‌ನಲ್ಲಿ ಈವರೆಗೆ 380ಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಭಾರತದಲ್ಲಿ ಈವರೆಗೆ 241.53 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಿಡುಗಡೆಗೂ ಮುನ್ನ ರಣಬೀರ್‌ ಕಪೂರ್‌ ಹೇಳಿಕೆಯಿಂದ ಬಾಯ್ಕಟ್‌ ಬಿಸಿ ಅನುಭವಿಸಿದ್ದ ಚಿತ್ರತಂಡಕ್ಕೆ ಸದ್ಯದ ಬಾಕ್ಸ್‌ ಆಫೀಸ್‌ ಗಳಿಕೆ ನಿರಾಳ ತಂದಿದೆ.

    ನಿನ್ನೆ (ಸೆಪ್ಟೆಂಬರ್ 23)ರಂದು ದೇಶದಾದ್ಯಂತ ರಾಷ್ಟ್ರೀಯ ಸಿನಿಮಾ ದಿನಾಚರಣೆ ಆಚರಿಸಲಾಗಿದ್ದು, ಸಿನಿಮಾ ಪ್ರಿಯರಿಗೆ ಈ ದಿನದ ಅಂಗವಾಗಿ ವಿಶೇಷ ರಿಯಾಯಿತಿ ನೀಡಲಾಗಿತ್ತು. ರಾಷ್ಟ್ರೀಯ ಸಿನಿಮಾ ದಿನಾಚರಣೆ ಅಂಗವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನಿನ್ನೆ (ಸೆಪ್ಟೆಂಬರ್ 23) ಕೇವಲ 75 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ನೀಡಲಾಗಿತ್ತು. ಇದರಿಂದ ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಜನ ತುಂಬಿ ತುಳುಕಿದ್ದರು.

    Ranbir Kapoor Starrer Brahmastra Massive Jump At Box Office On National Cinema Day

    ನಿನ್ನೆ (ಸೆಪ್ಟೆಂಬರ್ 23) ಸ್ಯಾಂಡ್‌ವುಡ್‌ನ ಗುರು ಶಿಷ್ಯರು, ಬಾಲಿವುಡ್‌ನ 'ಚುಪ್‌' ಹಾಗೂ 'ಅವತಾರ್‌' ತ್ರಿಡಿ ಅವತರಣಿಕೆ ಸೇರಿದಂತೆ ಅನೇಕ ಸಿನಿಮಾ ಬಿಡುಗಡೆಗೊಂಡಿದ್ದವು. ಈ ಚಿತ್ರಗಳು ಹೌಸ್‌ ಫುಲ್‌ ಪ್ರದರ್ಶನ ಕಂಡರೂ ಸಹ, ರಾಷ್ಟ್ರೀಯ ಸಿನಿಮಾ ದಿನಾಚರಣೆ ರಿಯಾಯಿತಿಯಿಂದ ಬಾಕ್ಸ್‌ ಆಫೀಸ್‌ನಲ್ಲಿ ಹಿನ್ನೆಡೆ ಕಂಡಿವೆ. ಆದರೆ 'ಬ್ರಹ್ಮಾಸ್ತ್ರ' ಚಿತ್ರಕ್ಕೆ ಮಾತ್ರ ಈ ರಿಯಾಯಿತಿ ವರದಾನದಂತಾಗಿದೆ. ನಿನ್ನೆ (ಸೆಪ್ಟೆಂಬರ್ 23) ಬಹುತೇಕ ಮಲ್ಟಿಪ್ಲೆಕ್ಸ್‌ಗಳು ತುಂಬಿ ತುಳುಕಿದ್ದು, ಜನ ಹೆಚ್ಚಾಗಿ ಬ್ರಹ್ಮಾಸ್ತ್ರ ಚಿತ್ರವನ್ನೇ ಆಯ್ಕೆ ಮಾಡಿದ್ದಾರೆ. ಬಿಡುಗಡೆಯಾದ 15 ದಿನಕ್ಕೆ ಬ್ರಹ್ಮಾಸ್ತ್ರ ಚಿತ್ರ ಮೊದಲ ದಿನದಂತೆ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು, ಸುಮಾರು 15 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಮಾರಾಟವಾಗಿದೆ ಎನ್ನಲಾಗಿದೆ.

    ಕಳೆದೊಂದು ವಾರದಿಂದ ಇಳಿಕೆ ಕಂಡಿದ್ದ ಬ್ರಹ್ಮಾಸ್ತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ನಿನ್ನೆ ದಿಢೀರ್‌ ಏರಿಕೆ ಕಂಡಿದೆ. ಸಪ್ಟೆಂಬರ್‌ 22ರಂದು 3 ಕೋಟಿ ಗಳಿಸಿದ್ದ ಬ್ರಹ್ಮಾಸ್ತ್ರ ನಿನ್ನೆ ಒಂದೇ ದಿನಕ್ಕೆ ಸರಿಸುಮಾರು 11 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ 380 ಕೋಟಿ ರೂಪಾಯಿ ಗಳಿಕೆ ಮಾಡಿದೆ. 410 ಕೋಟಿ ಬಜೆಟ್‌ನಲ್ಲಿ ತಯಾರಾದ ಬ್ರಹ್ಮಾಸ್ತ್ರ ಚಿತ್ರ ಸದ್ಯ ಬಂಡವಾಳ ವಾಪಸ್‌ ಪಡೆಯುವತ್ತ ಧಾಪುಗಾಲಿಡುತ್ತಿದೆ.

    ಇನ್ನು 'ಬ್ರಹ್ಮಾಸ್ತ್ರ' ಚಿತ್ರವನ್ನು ಗೆಲ್ಲಿಸಲು ಚಿತ್ರತಂಡ ಶತ ಪ್ರಯತ್ನ ನಡೆಸಿತ್ತು, ಸುಮಾರು 1 ತಿಂಗಳ ಕಾಲ ಸಿನಿಮಾ ಪ್ರಚಾರ ನಡೆಸಿದ್ದ ಚಿತ್ರತಂಡ ದಕ್ಷಿಣ ಭಾರತದಲ್ಲೂ ಪ್ರಚಾರ ನಡೆಸಿತ್ತು. ಬಾಯ್ಕಾಟ್‌ ಬ್ರಹ್ಮಾಸ್ತ್ರ ನಡೆಯುತ್ತಿದ್ದ ವೇಳೆ ಖ್ಯಾತ ನಿರ್ದೇಶಕ ರಾಜಮೌಳಿ 'ಬ್ರಹ್ಮಾಸ್ತ್ರ' ಚಿತ್ರತಂಡದ ಜೊತೆ ಕೈ ಜೋಡಿಸಿದ್ದರು. ರಾಜಮೌಳಿ ಕೂಡ ಚಿತ್ರದ ಬಗ್ಗೆ ಭರ್ಜರಿ ಪ್ರಚಾರ ನಡೆಸಿದ್ದು, ದಕ್ಷಿಣ ಭಾರತದಲ್ಲಿ ಚಿತ್ರ ಗೆಲ್ಲಲು ರಾಜಮೌಳಿ ಮೋಡಿ ಕೂಡ ಕಾರಣವಾಗಿದೆ. ಸದ್ಯ 'ಬ್ರಹ್ಮಾಸ್ತ್ರ' ಚಿತ್ರತಂಡ ಗೆಲುವಿನ ನಗೆ ಬೀರಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಸಕ್ಸಸ್‌ ಪಾರ್ಟಿ ಕೂಡ ನಡೆಸಲಿದೆ.

    English summary
    Bollywood actor Ranbir Kapoor starrer Brahmastra sees massive 240% jump at box office on National Cinema Day, earns ₹10.8 crore on its third Friday.
    Saturday, September 24, 2022, 20:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X