For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್‌ಗಳಲ್ಲಿ ಬಿಗ್‌ ಹಿಟ್‌: 'ಬ್ರಹ್ಮಾಸ್ತ್ರ' ಓಟಿಟಿ ರಿಲೀಸ್‌ ಯಾವಾಗ..?

  |

  ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ಚಿತ್ರಮಂದಿರಗಳಲ್ಲಿ ತನ್ನ ಓಟ ಮುಂದುವರಿಸಿದೆ. ಸಪ್ಟೆಂಬರ್‌ ೯ರಂದು ತೆರೆ ಕಂಡ ಬ್ರಹ್ಮಾಸ್ತ್ರ ಚಿತ್ರ ಬಾಲಿವುಡ್‌ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 'ಬ್ರಹ್ಮಾಸ್ತ್ರ' ಬಾಲಿವುಡ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಹಳೆಯ ದಾಖಲೆಗಳನ್ನು ಹಿಂದಿಕ್ಕೆ ಹೊಸ ಮೈಲುಗಲ್ಲುಗಳನ್ನು ಸೃಷ್ಟಿಸಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಬ್ರಹ್ಮಾಸ್ತ್ರ ಚಿತ್ರ ವಿಶ್ವದಾದ್ಯಂತ ಸುಮಾರು ೪೦೦ ಕೋಟಿಗೂ ಅಧಿಕ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ.

  ಬಿಡುಗಡೆಗೂ ಮುನ್ನ ವಿವಾದಕ್ಕೆ ಸಿಲುಕಿದ್ದ 'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ ಒಟ್ಟು ಬರೋಬ್ಬರಿ 5,000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿತ್ತು. ಹಿಂದಿ, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ 'ಬ್ರಹ್ಮಾಸ್ತ್ರ' ಬಿಡುಗಡೆಗೊಂಡಿತ್ತು. ಚಿತ್ರ ತೆರೆಕಂಡು 20 ದಿನಗಳು ಕಳೆಯುತ್ತಿದ್ದು, ಇಂದಿಗೂ ಕೆಲ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ 'ಬ್ರಹ್ಮಾಸ್ತ್ರ' ಚಿತ್ರದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ.

  ಆಲಿಯಾ ಜೊತೆ ಹಾಸಿಗೆ ಹಂಚಿಕೊಳ್ಳುವುದು ಕಷ್ಟ: ರಣಬೀರ್‌ಗೆ ಇಂದೆಥಾ ಸಂಕಷ್ಟ..?ಆಲಿಯಾ ಜೊತೆ ಹಾಸಿಗೆ ಹಂಚಿಕೊಳ್ಳುವುದು ಕಷ್ಟ: ರಣಬೀರ್‌ಗೆ ಇಂದೆಥಾ ಸಂಕಷ್ಟ..?

  ಇತ್ತಿಚಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗಿಂತಲೂ ಓಟಿಟಿಗಳತ್ತ ಮುಖ ಮಾಡಿದ್ದು, ಇತ್ತೀಚಿಗೆ ತೆರೆ ಕಂಡ ಚಿತ್ರಗಳನ್ನು ಓಟಿಟಿಗಳಲ್ಲೇ ವೀಕ್ಷಿಸಲು ಇಚ್ಚೀಸುತ್ತಾರೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣದ ಚಿತ್ರಗಳು ಓಟಿಟಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತದೆ. ಇದೀಗ ಬ್ರಹ್ಮಾಸ್ತ್ರ ಚಿತ್ರದ ಓಟಿಟಿ ಬಿಡುಗಡೆ ಬಗ್ಗೆಗೂ ಪ್ರೇಕ್ಷಕರು ಕಾತುರರಾಗಿದ್ದಾರೆ.

  ಥಿಯೇಟರ್‌ಗಳಲ್ಲಿ ಯಶಸ್ಸು ಕಂಡಿರುವ 'ಬ್ರಹ್ಮಾಸ್ತ್ರ' ಚಿತ್ರ ಓಟಿಟಿಯಲ್ಲಿ ಯಾವಾಗ ಬಿಡುಗಡೆಯಲಾಗಿದೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಹೀಗಾಗಿ ಚಿತ್ರತಂಡ ಬ್ರಹ್ಮಾಸ್ತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ಅಕ್ಟೋಬರ್‌ ತಿಂಗಳ ಎರಡನೇ ವಾರದಲ್ಲಿ ಚಿತ್ರ ಓಟಿಟಿಯಲ್ಲಿ ತೆರೆ ಕಾಣಲಿದೆ ಎಂದು ವರದಿಯಾಗಿದೆ.

  'ಬ್ರಹ್ಮಾಸ್ತ್ರ 2'ನಲ್ಲಿ ಹೃತಿಕ್ ರೋಷನ್ ನಟಿಸೋದು ನಿಜವೇ? ಹ್ಯಾಂಡ್ಸಮ್ ಹಂಕ್ ಕೊಟ್ಟ ಸುಳಿವೇನು?'ಬ್ರಹ್ಮಾಸ್ತ್ರ 2'ನಲ್ಲಿ ಹೃತಿಕ್ ರೋಷನ್ ನಟಿಸೋದು ನಿಜವೇ? ಹ್ಯಾಂಡ್ಸಮ್ ಹಂಕ್ ಕೊಟ್ಟ ಸುಳಿವೇನು?

  ಸದ್ಯ ಪೊನ್ನಿಯನ್‌ ಸೆಲ್ವನ್‌ ಹಾಗೂ ವಿಕ್ರಮ್‌ ವೇದ ಹೊರತು ಪಡಿಸಿ ಬಾಲಿವುಡ್‌ನಲ್ಲಿ ಬಿಗ್‌ ಬಜೆಟ್‌ ಚಿತ್ರಗಳ ನಡುವೆ ಪೈಪೋಟಿ ಇಲ್ಲದ ಕಾರಣ ಇನ್ನೂ ಎರಡು ವಾರಗಳ ಕಾಲ ಚಿತ್ರಮಂದಿರಗಳಲ್ಲಿ 'ಬ್ರಹ್ಮಾಸ್ತ್ರ' ಪ್ರದರ್ಶನಗೊಳ್ಳಲಿ ಎನ್ನುವುದು ಚಿತ್ರತಂಡದ ನಿರ್ಧಾರವಾಗಿದೆ. ಬಿಡುಗಡೆಯಾಗಿ ಇಪ್ಪತ್ತು ದಿನಗಳು ಕಳೆದರೂ ಚಿತ್ರಮಂದಿರಗಳಲ್ಲಿ ಬ್ರಹ್ಮಾಸ್ತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ನಿನ್ನೆ ಕೂಡ ಚಿತ್ರ 1.75 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು 257.71 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಈ ವಾರ ಹಾಗೂ ಮುಂದಿನ ವಾರ ಹೆಚ್ಚಿನ ರಜೆಗಳಿದ್ದು, ಜನ ಚಿತ್ರಮಂದಿರಗಳ ಕಡೆ ಮುಖ ಮಾಡುವ ನಿರೀಕ್ಷೆಯಿದೆ. ಹೀಗಾಗಿ 'ಬ್ರಹ್ಮಾಸ್ತ್ರ' ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆಯಿದೆ.

  'ಬ್ರಹ್ಮಾಸ್ತ್ರ' ಚಿತ್ರವನ್ನು ಗೆಲ್ಲಿಸಲು ಚಿತ್ರತಂಡ ಸುಮಾರು 1 ತಿಂಗಳ ಕಾಲ ಸಿನಿಮಾ ಪ್ರಚಾರ ನಡೆಸಿತ್ತು. ಖ್ಯಾತ ನಿರ್ದೇಶಕ ರಾಜಮೌಳಿ ಕೂಡ 'ಬ್ರಹ್ಮಾಸ್ತ್ರ' ಚಿತ್ರಕ್ಕೆ ಸಾಥ್‌ ನೀಡಿದ್ದು, ಚಿತ್ರದ ಬಗ್ಗೆ ಭರ್ಜರಿ ಪ್ರಚಾರ ನಡೆಸಿದ್ದರು. 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಹಾಗೂ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಂಡಿದ್ದು, ಮೌನಿ ರಾಯ್ ವಿಲನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನು ರಿಯಲ್‌ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಅವರನ್ನು ಮೊದಲ ಬಾರಿಗೆ ತೆರೆ ಮೇಲೆ ಜೋಡಿ ನೋಡಿರುವ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Bollywood actor Ranbir Kapoor Starrer Brahmastra Movie Ott Release In October Second Week,
  Thursday, September 29, 2022, 12:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X