'ಕೆಜಿಎಫ್ 2' ದಾಖಲೆ ಮುರಿಯಲು ರಣ್ಬೀರ್ 'ಶಂಶೇರಾ'ಗೂ ಸಾಧ್ಯವಾಗಲಿಲ್ಲ!
ರಣ್ಬೀರ್ ಕಪೂರ್ ನಟನೆಯ 'ಶಂಶೇರಾ' ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಟೀಸರ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇನ್ನು ಹೆಚ್ಚಿನ ಸಮಯ ರಣ್ಬೀರ್ ಕಪೂರ್‌ರನ್ನು ಸ್ಕ್ರೀನ್ ಮೇಲೆ ನೋಡಲು ಮಿಸ್ ಮಾಡಿಕೊಂಡ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದರು.
'ಶಂಶೇರಾ' ಸಿನಿಮಾ ರಿಲೀಸ್ ಆಗಿದೆ. ಆದರೆ ಮೊದಲ ದಿನ ಸಿನಿಮಾ ಮಿಶ್ರಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜೊತೆಗೆ ಸಿನಿಮಾದ ವಿಮರ್ಶೆ ಕೂಡ ಅಷ್ಟಕ್ಕಷ್ಟೇ, ಹಾಗಾಗಿ ಈ ಸಿನಿಮಾದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.
ಈಗ ಬಾಲಿವುಡ್‌ನ ಯಾವುದೇ ಸಿನಿಮಾ ಬಂದರೂ ಕೂಡ, ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಸೌತ್ ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಾಡಿದ ರೆಕಾರ್ಡ್ ಬ್ರೇಕ್ ಮಾಡಲು ಯಾವ ಸಿನಿಮಾ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಬಾಲಿವುಡ್ ಕಾಯುತ್ತಿದೆ.

'ಶಂಶೇರಾ'ಗೆ ಮಿಶ್ರ ಪ್ರತಿಕ್ರಿಯೆ!
ನಟ ರಣ್ಬೀರ್ ಕಪೂರ್ ಅಭಿನಯದ 'ಶಂಶೇರಾ' ಸಿನಿಮಾ ರಿಲೀಸ್ ಆಗಿದೆ. ರಿಲೀಸ್ ದಿನವೇ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಂಶೇರಾ ಚಿತ್ರದಲ್ಲಿ ರಣ್ಬೀರ್ ಕಪೂರ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ರಿಲೀಸ್ ಬಳಿಕ ನಿರೀಕ್ಷೆ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿಲ್ಲ. ಚಿತ್ರಕ್ಕೆ ಮಿಶ್ರ ಪ್ರಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಾಲಿವುಡ್ ನಿರೀಕ್ಷೆಗಳನ್ನು ಮೊದಲ ದಿನ ಮುಟ್ಟುವುದರಲ್ಲಿ ಹಿಂದೇಟು ಹಾಕಿದೆ. ಹೆಸರಾಂತ ವಿಮರ್ಶಕರು ಮತ್ತು ವಿಶ್ಲೇಷಕರು ಕೂಡ ಚಲನಚಿತ್ರಕ್ಕೆ ಕಡಿಮೆ ಅಂಕಗಳನ್ನು ಕೊಟ್ಟಿದ್ದಾರೆ.

'ಶಂಶೇರಾ' ರುಚಿಸಲಿಲ್ಲ ಎಂದವರೇ ಹೆಚ್ಚು!
'ಶಂಶೇರಾ' ಸಿನಿಮಾ ಅಷ್ಟಾಗಿ ರುಚಿಸಲಿಲ್ಲ ಎನ್ನುವ ಅಭಿಪ್ರಾಯಗಳೇ ಹೆಚ್ಚಾಗಿ ಹೊರಬರುತ್ತಿದೆ. ಸಿನಿಮಾದಲ್ಲಿ ನೋಡಲು ಹೊಸದೇನು ಇಲ್ಲಾ, ಕೇವಲ ನಟ ರಣಬೀರ್ ಕಪೂರ್ ಅಭಿನಯ ಮತ್ತು ಅವರ ಹೊಸ ಲುಕ್ ಮಾತ್ರ ಇಷ್ಟವಾಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಹಾಗೆ ಸಿನಿಮಾ ನೋಡಿದ ಹೆಸರಾಂತ ವಿಶ್ಲೇಷಕ ತರಣ್ ಆದರ್ಶ್ ಈ ಚಿತ್ರಕ್ಕೆ ಒಂದೂವರೆ ಅಂಕವನ್ನು ಕೊಟ್ಟು. "ಥಗ್ಸ್ ಆಫ್ ಹಿಂದುಸ್ತಾನ್ ಸಿನಿಮಾವನ್ನು ನೆನಪಿಸುತ್ತದೆ. ರಣ್ಬೀರ್ ಕಪೂರ್ ಅವರಂತಹ ದೊಡ್ಡ ಸ್ಟಾರ್ ಪವರ್ ಕೂಡ. ಮುಳುಗುತ್ತಿರುವ ಶಂಶೇರಾ ಹಡಗನ್ನು ತೇಲಿಸಲು ಸಾಧ್ಯವೇ ಇಲ್ಲ. ಇದೊಂದು ದೊಡ್ಡ ನಿರಾಸೆ" ಎಂದು ಬರೆದುಕೊಂಡಿದ್ದಾರೆ.

ಶಂಶೇರಾ ಮೊದಲ ದಿನದ ಗಳಿಕೆ!
ಈ ಚಿತ್ರಕ್ಕೆ 150 ಕೋಟಿ ರೂ. ಬಂಡವಾಳ ಹಾಕಲಾಗಿದೆಯಂತೆ. ಯಶ್ ರಾಜ್ ಸಿನಿಮಾ ನಿರ್ಮಾಣ ಮಾಡಿರುವ ಈ ಚಿತ್ರ ಅದ್ದೂರಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಕರಣ್ ಮಲ್ಹೋತ್ರಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ದಿನ ಸುಮಾರು 12 ಕೋಟಿ ತನಕ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಸಿನಿಮಾ ಹಾಕಿದ ಬಂಡವಾಳವನ್ನು ಹಿಂತಿರುಗಿಸುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಅತಿ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ತೆರೆಕಂಡಿದೆ. 4350 ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಹಾಗಾಗಿ ಗಳಿಕೆಯಲ್ಲಿ ಕೊಂಚ ಚೇತರಿಕೆ ಕಾಣುವ ಸಾಧ್ಯತೆಯೂ ಇದೆ

ಬಾಲಿವುಡ್ ನಿರೀಕ್ಷೆ ಉಳಿಸುತ್ತಾ!
ಇನ್ನು ಚಿತ್ರದ ಮೇಲೆ ಬಾಲಿವುಡ್ ದಟ್ಟವಾದ ನಿರೀಕ್ಷೆ ಇಟ್ಟುಕೊಂಡಿತ್ತು. ಬಾಲಿವುಡ್‌ನಲ್ಲಿ ಪದೇ ಪದೇ ಸೌತ್ ಸಿನಿಮಾಗಳ ಅಬ್ಬರ ಮಾಡುತ್ತಿವೆ. ಹಾಗಾಗಿ ಈ ಚಿತ್ರ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿ ಎನ್ನುವ ನಿರೀಕ್ಷೆ ಸಾಮಾನ್ಯವಾಗಿತ್ತು. ಆದರೆ ಮೊದಲನೇ ದಿನ 12 ಕೋಟಿ ತನಕ ಗಳಿಕೆ ಕಾಣಬಹುದು ಎನ್ನಲಾಗಿದೆ. ಇನ್ನು ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಯಾವ ರೀತಿಯ ದಾಖಲೆ ಬರೆಯುತ್ತೆ ಎನ್ನುವುದನ್ನ ನೋಡಬೇಕಿದೆ.


Click it and Unblock the Notifications











