'ಜಗ್ಗಾ ಜಾಸೂಸ್' ನಿರ್ಮಾಣ ಮಾಡಿ ಜೇಬು ಖಾಲಿ ಮಾಡಿಕೊಂಡಿದ್ದ ರಣ್ಬೀರ್.!

By Harshitha

ರಣ್ಬೀರ್ ಕಪೂರ್ ಒಳ್ಳೆಯ ನಟ ಅನ್ನೋದರಲ್ಲಿ ದೂಸ್ರಾ ಮಾತೇ ಇಲ್ಲ. ಇಲ್ಲಿಯವರೆಗೂ ಭಿನ್ನ-ವಿಭಿನ್ನ ಪಾತ್ರಗಳಿಗೆ ನಟ ರಣ್ಬೀರ್ ಕಪೂರ್ ಜೀವ ತುಂಬಿದ್ದಾರೆ. ನಟನಾಗಿ ಮಾತ್ರ ಅಲ್ಲ, ನಿರ್ಮಾಪಕನಾಗಿಯೂ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಮಾಜಿ ಗೆಳತಿ ಕತ್ರಿನಾ ಕೈಫ್ ಜೊತೆಗೆ 'ಜಗ್ಗಾ ಜಾಸೂಸ್' ಎಂಬ ಚಿತ್ರದಲ್ಲಿ ರಣ್ಬೀರ್ ಕಪೂರ್ ಅಭಿನಯಿಸಿದ್ದರು. ಸಾಲದಕ್ಕೆ, ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದರು. ದುರಾದೃಷ್ಟಕ್ಕೆ, 'ಜಗ್ಗಾ ಜಾಸೂಸ್' ಯಶಸ್ವಿ ಆಗಲಿಲ್ಲ.

'ಜಗ್ಗಾ ಜಾಸೂಸ್' ನಿರ್ಮಾಣ ಮಾಡಲು ಹೋಗಿ ರಣ್ಬೀರ್ ಕಪೂರ್ ಅಕ್ಷರಶಃ ಕೈಸುಟ್ಟುಕೊಂಡರು. ರಣ್ಬೀರ್ ಕಪೂರ್ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಯ್ತು. ಜೇಬು ಖಾಲಿ ಮಾಡಿಕೊಂಡ ರಣ್ಬೀರ್ ಕಪೂರ್ ಹೃದಯ ಅಂದು ಛಿದ್ರ ಛಿದ್ರಗೊಂಡಿತು. ಮುಂದೆ ಓದಿರಿ...

ಮಕಾಡೆ ಮಲಗಿದ 'ಜಗ್ಗಾ ಜಾಸೂಸ್'

ಮಕಾಡೆ ಮಲಗಿದ 'ಜಗ್ಗಾ ಜಾಸೂಸ್'

''ಜಗ್ಗಾ ಜಾಸೂಸ್' ಚಿತ್ರದಿಂದ ನನ್ನ ಹೃದಯ ಚೂರಾಯಿತು. ನನ್ನ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಯ್ತು'' ಎಂದು ನಟ ರಣ್ಬೀರ್ ಕಪೂರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಡಿಟೆಕ್ಟಿವ್ ಸಿನಿಮಾ

ಡಿಟೆಕ್ಟಿವ್ ಸಿನಿಮಾ

''ಜಗ್ಗಾ ಜಾಸೂಸ್' ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಸಿಂಪಲ್ ಆಗಿತ್ತು. ಅದೊಂದು ಡಿಟೆಕ್ಟಿವ್ ಸಿನಿಮಾ. ಅಪ್ಪನನ್ನು ಹುಡುಕುವುದರ ಜೊತೆಗೆ ಒಂದು ಲವ್ ಸ್ಟೋರಿ ಕೂಡ ಇತ್ತು. ಆದ್ರೆ, ಅದ್ಯಾಕೋ ಚಿತ್ರ ಯಶಸ್ವಿ ಆಗಲಿಲ್ಲ'' - ರಣ್ಬೀರ್ ಕಪೂರ್.

ಬರ್ತಿದ್ದಾನೆ 'ಸಂಜು'

ಬರ್ತಿದ್ದಾನೆ 'ಸಂಜು'

ಸದ್ಯ ಇಡೀ ಬಾಲಿವುಡ್ ಕಣ್ಣು 'ಸಂಜು' ಮೇಲಿದೆ. ಜೂನ್ 29 ರಂದು 'ಸಂಜು' ಬಿಡುಗಡೆ ಆಗಲಿದೆ. ಸಂಜಯ್ ದತ್ ಜೀವನಾಧಾರಿತ ಚಿತ್ರ ಇದಾಗಿದ್ದು, ಸಂಜಯ್ ದತ್ ಆಗಿ ತೆರೆಮೇಲೆ ರಣ್ಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.

ಟರ್ನಿಂಗ್ ಪಾಯಿಂಟ್ ಸಿಗುತ್ತಾ.?

ಟರ್ನಿಂಗ್ ಪಾಯಿಂಟ್ ಸಿಗುತ್ತಾ.?

ಇಲ್ಲಿಯವರೆಗೂ ತಮ್ಮ ವೃತ್ತಿ ಜೀವನದಲ್ಲಿ ರಣ್ಬೀರ್ ಕಪೂರ್ ಹಲವಾರು ಏಳು-ಬೀಳು ಕಂಡಿದ್ದಾರೆ. 'ಸಂಜು' ಚಿತ್ರದ ಮೂಲಕ ರಣ್ಬೀರ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಸಿಗುತ್ತಾ.? ನೋಡೋಣ.

More from Filmibeat

English summary
Bollywood Actor Ranbir Kapoor revealed that he went bankrupt after 'Jagga Jasoos' failure
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X