ಆಮೀರ್ ಖಾನ್ ನಟನೆಯ 'ಪಿಕೆ' ಸಿನಿಮಾದ ಸೀಕ್ವಲ್ ಗೆ ತಯಾರಿ: ನಾಯಕ ಯಾರು?

ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ಪಿಕೆ ಸಿನಿಮಾದ ಸೀಕ್ವೆಲ್ ಗೆ ತಯಾರಿ ನಡೆಯುತ್ತಿದೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಾರಥ್ಯದಲ್ಲಿ ಮೂಡಿಬಂದ ಪಿಕೆ ಭರ್ಜರಿ ಯಶಸ್ಸು ಕಂಡು, ದಾಖಲೆಯ ಕಲೆಕ್ಷನ್ ಮಾಡಿತ್ತು.

ಇದೀಗ ಪಿಕೆ ಸಿನಿಮಾ ಮುಂದುವರೆದ ಭಾಗವನ್ನು ಅಭಿಮಾನಿಗಳ ಮುಂದೆ ತರಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ಬಾರಿ ಪಿಕೆಯಲ್ಲಿ ಆಮೀರ್ ಖಾನ್ ಬದಲಿಗೆ ರಣ್ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪಿಕೆಯಲ್ಲಿ ರಣ್ಬೀರ್ ಕಪೂರ್ ಚಿಕ್ಕ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಆ ಪಾತ್ರದ ಮುಂದುವರೆದ ಭಾಗ ಮಾಡಲು ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Ranbir Kapoor will take story of Amir Khans pk to sequel

ಸರಿಯಾದ ಸಮಯದಲ್ಲಿ ಪಿಕೆ ಸೀಕ್ವೆಲ್ ಮಾಡುವುದಾಗಿ ಹೇಳಿದ್ದಾರೆ. ಚಿತ್ರದ ಕೊನೆಯಲ್ಲಿ ರಣ್ಬೀರ್ ಕಪೂರ್ ಎಂಟ್ರಿ ತೋರಿಸಲಾಗಿತ್ತು. ಈಗ ರಣ್ಬೀರ್ ಕಪೂರ್ ಕತೆಯನ್ನು ಮುಂದೆ ತೆಗೆದುಕೊಂಡು ಹೋಗಲಿದ್ದಾರೆ. ಅಭಿಜಿತ್ ಜೋಶಿ ಇನ್ನು ಕತೆ ಬರೆದಿಲ್ಲ ಎಂದಿದ್ದಾರೆ.

ಪ್ರಾಂಚೈಸಿಗಳು ಲಾಭ ತಂದು ಕೊಡುತ್ತೆ ಎಂದು ಗೊತ್ತಿದ್ದರು ಕತೆ ಮುಖ್ಯವಾಗುತ್ತೆ. ಹಣ ಸಂಪಾದನೆ ಮಾಡುವುದೇ ಗುರಿಯಾಗಿದ್ದರೆ ಮುನ್ನಾ ಭಾಯ್ ಸಿನಿಮಾವನ್ನು ಏಳೆಂಟು ಭಾಗ ಮಾಡಬಹುದಿತ್ತು. ಪಿಕೆ ಚಿತ್ರದ ಸೀಕ್ವೆಲ್ ಅನ್ನು ಈಗಾಗಲೇ ಮಾಡುತ್ತಿದ್ದೆವು' ಎಂದು ಹೇಳಿದ್ದಾರೆ.

ಪಿಕೆ ಸಿನಿಮಾ 2014ರಲ್ಲಿ ತೆರೆಗೆ ಬಂದಿದೆ. ಇದೀಗ 7 ವರ್ಷಗಳ ಬಳಿಕ ಸೀಕ್ವೆಲ್ ಬಗ್ಗೆ ಪ್ಲಾನ್ ಮಾಡಲಾಗಿದೆ. ಪಿಕೆ ಸಿನಿಮಾದಲ್ಲಿ ಆಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅನುಷ್ಕಾ ಶರ್ಮಾ ಮಿಂಚಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸೀಕ್ವೆಲ್ ಮೂಲಕ ಮತ್ತೆ ಪಿಕೆ ಸದ್ದು ಮಾಡುತ್ತಾ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಪಿಕೆ ಬಳಿಕ ರಣ್ವೀರ್ ಕಪೂರ್ ಮತ್ತು ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಂಜು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಂಜು ಬಳಿಕ ರಾಜ್ ಕುಮಾರ್ ಹಿರಾನಿ ಯಾವುದೇ ಸಿನಿಮಾಗೆ ಆಕ್ಷನ್ ಕಟ್ ಹೇಳಿಲ್ಲ. ಪಿಕೆ ಸೀಕ್ವಲ್ ಮೂಲಕ ಮತ್ತೆ ಡೈರೆಕ್ಷನ್ ಕ್ಯಾಪ್ ಧರಿಸುವ ಸಾಧ್ಯತೆ ಇದೆ.

More from Filmibeat

English summary
Bollywood Actor Ranbir Kapoor will take story of Amir Khan starrer pk to sequel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X