ಮತ್ತೊಂದು ಶತಕ: 'ಪಠಾಣ್' ದಾಖಲೆ ಧೂಳಿಪಟ.. 3 ದಿನಕ್ಕೆ ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಬಾಚಿದ್ದೆಷ್ಟು?

ರಣ್‌ಬೀರ್ ಕಪೂರ್ 'ಅನಿಮಲ್' ಆಗಿ ಬಾಕ್ಸಾಫೀಸ್ ದಾಖಲೆಗಳ ಬೇಟೆಗಿಳಿದಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಡ್ರಾಮಾ ಸಿನಿಮಾ ಸಂಚಲನ ಸೃಷ್ಟಿಸಿದೆ. ರಣ್‌ಬೀರ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ 3 ದಿನಕ್ಕೆ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ.

ಈ ವರ್ಷ ಬಾಲಿವುಡ್‌ಗೆ ಬ್ಲಾಕ್‌ಬಸ್ಟರ್ ಎಂದೇ ಹೇಳಬಹುದು. ಶಾರುಖ್ ಖಾನ್ ನಟನೆಯ 'ಪಠಾಣ್', 'ಜವಾನ್' ಬಳಿಕ ಅನಿಮಲ್ ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಶನಿವಾರ, ಭಾನುವಾರ ಕೂಡ 'ಅನಿಮಲ್' ಆರ್ಭಟ ಜೋರಾಗಿದೆ. ಬಾಕ್ಸಾಫೀಸ್ ಪಂಡಿತರು ಕೂಡ ಸಿನಿಮಾ ಕಲೆಕ್ಷನ್‌ ನೋಡಿ ದಂಗಾಗಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ ಇದೀಗ ಭರ್ಜರಿ ಸಿನಿಮಾಗಳಿಂದ ಮತ್ತೆ ಸುದ್ದಿಯಲ್ಲಿದೆ.

Ranbir kapoors Animal Crosses 300 Cr Worldwide In 3 Days

'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಬಾರಿ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಸಿಂಪಲ್ ಕತೆಯನ್ನು ಪರಿಣಾಮಕಾರಿಯಾಗಿ ಹೇಳಿ ನಿರ್ದೇಶಕರು ಗೆದ್ದಿದ್ದಾರೆ. ಸಿಕ್ಕಾಪಟ್ಟೆ ವೈಲೆನ್ಸ್ ಎನಿಸಿದರೂ ಸಿನಿರಸಿಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕಾಲಾವಧಿ ಕೊಂಚ ಹೆಚ್ಚಾಯಿತು ಎನ್ನುತ್ತಲೇ ಒಮ್ಮೆ ನೋಡಲು ಅಡ್ಡಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

'ಅನಿಮಲ್' ಚಿತ್ರದ ಕಥೆ ತುಂಬಾ ಸಿಂಪಲ್. ಅವಿಭಕ್ತ ಕುಟುಂಬದ ವ್ಯಕ್ತಿಯೊಬ್ಬರು ಸ್ವಸ್ತಿಕ್ ಸ್ಟೀಲ್ಸ್ ಎನ್ನುವ ಕಂಪನಿ ಕಟ್ಟಿ ಬೆಳೆಸುತ್ತಾರೆ. ಅವನ ಮಗ ಬಲ್ಬೀರ್ ಸಿಂಗ್ (ಅನಿಲ್ ಕಪೂರ್) ಕಂಪನಿಯನ್ನು ದೊಡ್ಡ ಸಾಮ್ರಾಜ್ಯವಾಗಿ ವಿಸ್ತರಿಸುತ್ತಾನೆ. ಆತ ಸದಾ ವ್ಯಾಪಾರ ವಹಿವಾಟುಗಳಲ್ಲಿ ಬ್ಯುಸಿಯಾಗಿರುತ್ತಾನೆ. ಆತನಿಗೆ ಒಬ್ಬ ಮಗ ರಣ್‌ವಿಜಯ್ ಸಿಂಗ್ (ರಣಬೀರ್ ಕಪೂರ್) ಎಂಬ ಮಗ ಇರ್ತಾನೆ. ತಂದೆ ಎಂದರೆ ಅವನಿಗೆ ಪ್ರಾಣ. ತನ್ನ ಸಂಸಾರದಲ್ಲಿ ಯಾವ ಸಣ್ಣ ಸಮಸ್ಯೆ ಬಂದರೂ ಸಹಿಸಲಾರ. ಅವನು ತುಂಬಾ ವೈಲ್ಡ್ ಆಗಿ ರಿಯಾಕ್ಟ್ ಆಗುತ್ತಿರುತ್ತಾನೆ. ಹೀಗಿರುವಾಗ ತನ್ನ ತಂದೆ ಮೇಲೆ ಹತ್ಯೆ ಯತ್ನ ನಡೆದರೆ ಸುಮ್ಮನಿರುತ್ತಾನಾ? ಮೃಗದಂತೆ ತಿರುಗಿ ಬೀಳ್ತಾನೆ. ಆ ಮೃಗದ ಬೇಟೆ ಹೇಗಿರುತ್ತದೆ ಅನ್ನೋದೆ ಸಿನಿಮಾ ಕತೆ.

ಕತೆ ಇಷ್ಟೇ ಅನ್ನಿಸಿದರೂ ಅದಕ್ಕೆ ಸಂದೀಪ್ ರೆಡ್ಡಿ ಟ್ರೀಟ್‌ಮೆಂಟ್ ಬಗಳ ವೈಲೆಂಟ್ ಆಗಿದೆ. ರಣ್‌ಬೀರ್ ಕಪೂರ್ ಆರ್ಭಟವಂತೂ ಮೈಜುಮ್ ಎನಿಸುತ್ತದೆ. ಸಂದೀಪ್ ಪಾತ್ರವನ್ನು ಕಟ್ಟಿಕೊಟ್ಟಿರುವ ಪರಿ ಅದನ್ನು ರಣ್‌ಬೀರ್ ಆಹ್ವಾಯಿಸಿಕೊಂಡು ನಟಿಸಿರುವ ಪರಿ ಅದ್ಭುತವಾಗಿದೆ. ಅಷ್ಟೇನು ನಿರೀಕ್ಷೆ ಮೂಡಿಸಿರದ 'ಅನಿಮಲ್' ಬರೀ ಟ್ರೈಲರ್‌ನಿಂದ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ತಕ್ಕಂತೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಡೆದಿತ್ತು. ಪರಿಣಾಮ ಮೊದಲ ದಿನವೇ ಸಿನಿಮಾ 116 ಕೋಟಿ ರೂ. ಗಳಿಕೆ ಕಂಡು ಎಲ್ಲರ ಹುಬ್ಬೇರಿಸಿತ್ತು.

ಮೊದಲ ದಿನ ಅದ್ಭುತ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ 2ನೇ ದಿನ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಪರಿಣಾಮ 2ನೇ ದಿನ ಸಿನಿಮಾ 150 ಕೋಟಿ ರೂ. ಬಾಚಿತ್ತು. 2 ದಿನಕ್ಕೆ 'ಅನಿಮಲ್' ಸಿನಿಮಾ 236 ಕೋಟಿ ರೂ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿತ್ತು.

ಭಾನುವಾರ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 3 ದಿನಕ್ಕೆ ಸಿನಿಮಾ 360 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ ಮಾಹಿತಿ ನೀಡಿದ್ದಾರೆ. ಸಿನಿಮಾ 3 ದಿನಕ್ಕೆ 360 ಕೋಟಿ ಕೊಳ್ಳೆ ಹೊಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ 3 ದಿನಕ್ಕೆ 300 ಕೋಟಿ ರೂ. ಗಡಿ ದಾಟಿತ್ತು. ಅದಕ್ಕಿಂತಲೂ 'ಅನಿಮಲ್' ಕಲೆಕ್ಷನ್ ಜೋರಾಗಿದೆ. ಇನ್ನೆರಡು ವಾರ ಅತ್ತ ಬಾಲಿವುಡ್‌ನಲ್ಲೂ ಇತ್ತ ಸೌತ್ ಸಿನಿದುನಿಯಾದಲ್ಲೂ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಇದು 'ಅನಿಮಲ್' ಅಬ್ಬರಕ್ಕೆ ಪ್ಲಸ್ ಆಗಲಿದೆ.

More from Filmibeat

English summary
Animal grosses a whopping ₹ 360 Crs at the WW Box office;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X