ಮೂರು ದಿನದಿಂದ ನಂ-1 ಸ್ಥಾನದಲ್ಲಿರುವ 'ಸಂಜು'
ಸಂಜಯ್ ದತ್ ಜೀವನವನ್ನಾಧರಿಸಿದ 'ಸಂಜು' ಸಿನಿಮಾದ ಟೀಸರ್ ಹವಾ ಇನ್ನು ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ಸಂಜು ಟೀಸರ್ ಸದ್ದು ಮಾಡುತ್ತಲೆ ಇದೆ. 23 ರಂದು ರಿಲೀಸ್ ಆಗಿದ್ದ 'ಸಂಜು' ಟೀಸರ್ ಮೂರು ದಿನಗಳಲ್ಲಿ 30 ಮಿಲಿಯನ್ ವೀಕ್ಷಕರನ್ನ ಹೊಂದುವ ಮೂಲಕ ವಿಶೇಷ ದಾಖಲೆ ಮಾಡಿದೆ.
ಸದ್ಯದ ದಾಖಲೆಗಳ ಪ್ರಕಾರ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಾಲ' ಚಿತ್ರದ ಟೀಸರ್ ದಾಖಲೆಯನ್ನ ಬ್ರೇಕ್ ಮಾಡಿದೆ. ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಸಂಜು, ನೇಪಾಳ, ಪಾಕಿಸ್ತಾನದಲ್ಲಿ ಎರಡನೇ ಸ್ಥಾನ, ಆಸ್ಟ್ರೆಲೀಯಾ, ಕೆನೆಡಾದಲ್ಲಿ ಮೂರನೇ ಸ್ಥಾನ ಹಾಗೂ ಯುಎಸ್ ನಲ್ಲಿ ಏಂಟನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ.

ಸಂಜಯ ದತ್ ಜೀವನದ ವಿವಿಧ ಮುಖಗಳನ್ನ ಟೀಸರ್ ನಲ್ಲಿ ತೋರಿಸಲಾಗಿದೆ. 80, 90ರ ದಶಕದ ದತ್ ಆಗಿ ಕಾಣಿಸಿಕೊಳ್ಳುವಲ್ಲಿ ರಣ್ಬೀರ್ ನೂರರಷ್ಟು ಪ್ರಯತ್ನ ಪಟ್ಟಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ. ಈ ಟೀಸರ್ ನೋಡಿದಾಗ, ಕಾಡುವ ಒಂದು ಕೊರಗು ಏನಪ್ಪಾ ಅಂದ್ರೆ, ವಾಯ್ಸ್ ಮ್ಯಾಚ್ ಮಾಡುವಲ್ಲಿ ಕಷ್ಟವಾಗಿದೆ. ಅದನ್ನ ಹೊರತು ಪಡಿಸಿದ್ರೆ ಎಲ್ಲವೂ ಅದ್ಭುತ ಎನ್ನಬಹುದು.
ಸಂಜಯ್ ದತ್ ದೇಹ, ಹೇರ್ ಸ್ಟೈಲ್, ಸ್ಟೈಲ್, ಮ್ಯಾನಸರಿಂ, ಹೀಗೆ ಎಲ್ಲದರಲ್ಲೂ ಫಿಟ್ ಅಂಡ್ ಫರ್ಫೆಕ್ಟ್ ಎನ್ನುವ ರೀತಿಯಲ್ಲಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಂದ್ರೆ ತಪ್ಪಾಗಲಾರದು. ಅಂದ್ಹಾಗೆ, ಸಂಜಯ್ ದತ್ ಪಾತ್ರದಲ್ಲಿ ರಣ್ಬೀರ್ ಕಪೂರ್ ಕಾಣಿಸಿಕೊಂಡಿದ್ರೆ, ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಂಜಯ್ ದತ್ ಜೀನದಲ್ಲಿ ಎದುರಿಸಿದ ಹಗರಣ, ನೋವು, ಜೈಲು, ಟೀಕೆ,...ಹೀಗೆ ಕಾಣದ ಮುಖಗಳನ್ನ ಇಲ್ಲಿ ಪರಿಚಯ ಮಾಡಲಿದ್ದಾರೆ. ಸದ್ಯ, ಟೀಸರ್ ನೋಡಿ ಖುಷಿ ಪಟ್ಟಿರುವ ಚಿತ್ರಪ್ರೇಮಿಗಳಿಗೆ ಏಪ್ರಿಲ್. 27ರಂದು ಟ್ರೈಲರ್ ನೋಡುವ ಅವಕಾಶ ಸಿಗಲಿದೆ.
ಇನ್ನುಳಿದಂತೆ ಅನುಷ್ಕಾ ಶರ್ಮಾ, ಸೋನಮ್ ಕಪೂರ್, ಪರೇಶ್ ರಾವಲ್, ಬೊಮನ್ ಇರಾನಿ, ಮನಿಷಾ ಕೊಯಿರಾಲಾ ಸೇರಿ ಹಲವು ಪ್ರಮುಖ ಕಲಾವಿದರ ತಾರಬಳದಲ್ಲಿದ್ದಾರೆ. ಈ ಮೊದಲೇ ನಿಗದಿಯಾಗಿರುವಂತೆ ಜೂನ್ 29ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











