ಭಿಕ್ಷುಕನಂತಿರುವ ಈ ಒಣಕಲು ದೇಹಿ ಬಾಲಿವುಡ್ ಸ್ಟಾರ್ ನಟ: ಗುರುತಿಸಬಲ್ಲಿರಾ?

ಸಿನಿಮಾ ಉದ್ಯಮದಲ್ಲಿ ಎರಡು ಬಗೆಯ ನಟರು. ಒಂದು ಸ್ವಲ್ಪವೂ ವೃತ್ತಿಪರತೆ ಇಲ್ಲದೆ ಕೇವಲ ಹೆಸರಿನ ಬಲದಲ್ಲಿ ಗೆಲ್ಲುವವರು. ಮತ್ತೊಬ್ಬರು ಪಾತ್ರಕ್ಕಾಗಿ ತಮ್ಮ ಸಂಪೂರ್ಣವನ್ನೂ ಧಾರೆಯೆರೆಯುವವರು.

Recommended Video

ರಶ್ಮಿಕಾ ಮಂದಣ್ಣ ಸಂಜಯ್ ಲೀಲಾ ಬನ್ಸಾಲಿ ಆಫರ್ ಬೇಡ ಅಂದಿದ್ಯಾಕೆ? | FILMIBEAT KANNADA

ಪಾತ್ರಕ್ಕಾಗಿ ಎಂಥಹಾ ತ್ಯಾಗವನ್ನೂ ಮಾಡುವ, ಪಾತ್ರಕ್ಕಾಗಿ ದೇಹವನ್ನು ದಂಡಿಸುವ, ಪಾತ್ರದ ಪರಿಪೂರ್ಣತೆಗಾಗಿ ತಮ್ಮ ದೇಹದ ಮೇಲೆಯೇ ಪ್ರಯೋಗಗಳನ್ನು ಮಾಡುವ ಪರಿಪೂರ್ಣತೆಗೆ ಹಾತೊರೆಯುವ ನಟರು ಬಹುತೇಕ ಎಲ್ಲಾ ಸಿನಿ ಉದ್ಯಮದಲ್ಲಿಯೂ ಕಾಣುತ್ತಾರೆ.

ಸ್ಪರ್ಧಾತ್ಮಕತೆ ತುಸು ಹೆಚ್ಚಿಗೆ ಇರುವ ಬಾಲಿವುಡ್‌ನಲ್ಲಿಯಂತೂ ಹೀಗೆ ಪಾತ್ರಕ್ಕಾಗಿ ತ್ಯಾಗಗಳನ್ನು ಮಾಡುವ ನಟರು ತುಸು ಹೆಚ್ಚಿಗೆ ಇದ್ದಾರೆ. ಈ ಲೇಖನದಲ್ಲಿ ನೀವು ಕಾಣುತ್ತಿರುವ ಚಿತ್ರ ಸಹ ಅಂಥಹಾ ಒಬ್ಬ ನಟನದ್ದೇ. ಯಾರೋ ಭಿಕ್ಷುಕನ ಚಿತ್ರ ಎಂದುಕೊಳ್ಳದಿರಿ.

ಇದು ನಟ ರಣದೀಪ್ ಹೂಡಾ ಚಿತ್ರ

ಇದು ನಟ ರಣದೀಪ್ ಹೂಡಾ ಚಿತ್ರ

ಇದು ಖ್ಯಾತ ನಟ ರಣದೀಪ್ ಹೂಡಾನದ್ದು. ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸರಬ್ಜಿತ್ ಸಿನಿಮಾಕ್ಕಾಗಿ ರಣದೀಪ್ ಹೂಡಾ ಈ ಅವತಾರ ತಾಳಿದ್ದರು. ಅದ್ಭುತ ಮೈಕಟ್ಟಿನ ರಣದೀಪ್, ಎಲುಬಿನ ಹಂದರದಂತೆ ಕಾಣುತ್ತಿದ್ದರು.

ಸರಬ್ಜಿತ್ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷ

ಸರಬ್ಜಿತ್ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷ

ಸರಬ್ಜಿತ್ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷವಾದ ಕಾರಣ ರಣದೀಪ್ ಹೂಡಾ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಕೆಳಗೆ, 'ಬಹುತೇಕ ನನ್ನ ಜೀವವನ್ನೇ ಕಸಿದುಕೊಂಡು ಬಿಟ್ಟಿತ್ತು' ಎಂದು ಬರೆದುಕೊಂಡಿದ್ದಾರೆ.

50 ಕೆ.ಜಿ ತೂಕ ಇಳಿಸಿಕೊಂಡಿದ್ದ ರಣದೀಪ್

50 ಕೆ.ಜಿ ತೂಕ ಇಳಿಸಿಕೊಂಡಿದ್ದ ರಣದೀಪ್

ಸಿನಿಮಾದ ಚಿತ್ರೀಕರಣ ಆರಂಭವಾದಾಗ ರಣದೀಪ್ ಹೂಡಾ ದೇಹ ತೂಕ 90 ಕೆ.ಜಿ ಇತ್ತಂತೆ. ಪಾತ್ರಕ್ಕಾಗಿ ಅವರು ಸುಮಾರು 50 ಕೆ.ಜಿ. ತೂಕ ಇಳಿಸಿಕೊಂಡರಂತೆ. ಈ ದೇಹತೂಕ ಇಳಿಸಿಕೊಳ್ಳುವ ಸಾಹಸದಿಂದ ನನ್ನ ಪ್ರಾಣವೇ ಹೋಗುವಂತಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಸರಬ್ಜಿತ್ ಸಿಂಗ್ ಜೀವನಾಧರಿತ ಚಿತ್ರ

ಸರಬ್ಜಿತ್ ಸಿಂಗ್ ಜೀವನಾಧರಿತ ಚಿತ್ರ

ಸರಬ್ಜಿತ್ ಚಿತ್ರವು ಸರಬ್ಜಿತ್ ಸಿಂಗ್ ಜೀವನ ಕುರಿತಾದ ಸಿನಿಮಾ ಆಗಿದೆ. 1990 ರಲ್ಲಿ ಸರಬ್ಜಿತ್ ಸಿಂಗ್ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶ ಮಾಡಿಬಿಡುತ್ತಾನೆ. ಆತನನ್ನು ಅಲ್ಲಿನ ಪೊಲೀಸರು ಬಂಧಿಸಿ ಆತನ ಮೇಲೆ ಗೂಡಚರ್ಯೆ ಹಾಗೂ ಲಾಹೋರ್ ಬಾಂಬ್ ಸ್ಫೋಟದ ಆರೋಪ ಹೊರಿಸುತ್ತಾರೆ. ಕೊನೆಗೆ ಆತ ಜೈಲಿನಲ್ಲಿಯೇ ಸಾಯುತ್ತಾನೆ. ಇದೇ ಕತೆ ಆಧರಿಸಿ ಸಿನಿಮಾ ನಿರ್ಮಿಸಲಾಗಿತ್ತು.

ಮೆಚ್ಚುಗೆ ಗಳಿಸಿದ್ದ ರಣದೀಪ್ ಹೂಡಾ ನಟನೆ

ಮೆಚ್ಚುಗೆ ಗಳಿಸಿದ್ದ ರಣದೀಪ್ ಹೂಡಾ ನಟನೆ

ಸರಬ್ಜಿತ್ ಚಿತ್ರದಲ್ಲಿ ರಣದೀಪ್ ಹೂಡಾ ಸರಬ್ಜಿತ್ ಪಾತ್ರ ನಿರ್ವಹಿಸಿದ್ದ. ಆತನ ಸಹೋದರಿಯ ಪಾತ್ರವನ್ನು ಐಶ್ವರ್ಯಾ ರೈ ನಿರ್ವಹಿಸಿದ್ದರು. ಚಿತ್ರ ಹಿಟ್ ಆಗಿತ್ತು, ಹಲವು ಪ್ರಶಸ್ತಿಗಳನ್ನು ಗಳಿಸಿತು. ರಣದೀಪ್ ಹೂಡಾ ಮತ್ತು ಐಶ್ವರ್ಯಾ ನಟನೆಗೆ ಹಲವು ಪ್ರಶಸ್ತಿಗಳು ದೊರಕಿದವು.

More from Filmibeat

English summary
Actor Randeep Hooda posted photo of himself looking like skeleton. This body transformation made for Sarabjit movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X