ಹೀಗಾಗುತ್ತೆ ಅಂತ ಅಂದುಕೊಂಡಿರಲಿಲ್ಲ ; ಸಾವರ್ಕರ್ ಸಿನಿಮಾ, ನೊಂದುಕೊಂಡ ರಣ್ ದೀಪ್ ಹೂಡ..!
ಸಿನಿಮಾಗಾಗಿ 'ಬೆವರು' ಅಷ್ಟೇ ಅಲ್ಲ ಕೆಲವರು 'ರಕ್ತ' ಬಸಿದು ಕೆಲಸ ಮಾಡುತ್ತಾರೆ. ಆ ಪೈಕಿ 'ರಣ್‌ದೀಪ್ ಹೂಡ' ಕೂಡ ಒಬ್ಬರು. ಪಾತ್ರಕ್ಕಾಗಿ 'ತನು-ಮನ'ವನ್ನೇ ಅರ್ಪಿಸುವ ರಣ್‌ದೀಪ್ ಹೂಡ ತಮ್ಮ ನಿರ್ದೇಶನದ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರಕ್ಕೆ ತಮ್ಮ 'ಪ್ರಾಣ'ವನ್ನೇ ಪಣಕ್ಕಿಟ್ಟಿದ್ದರು. ಪಾತ್ರಕ್ಕೆ ನ್ಯಾಯ ಸಲ್ಲಿಸಲು '30 ಕೆ.ಜಿ' ತೂಕವನ್ನೂ ಇಳಿಸಿಕೊಂಡಿದ್ದರು.
ಆದರೆ ಚಿತ್ರಕ್ಕೆ ಅಂದುಕೊಂಡಂತೆ 'ಪ್ರತಿಕ್ರಿಯೆ' ಸಿಗಲಿಲ್ಲ. 'ಹಣ'ದ ಹೊಳೆಯು ಹರಿಯಲಿಲ್ಲ. ರಣ್‌ದೀಪ್ ಹೂಡಾ 'ನಿರೀಕ್ಷೆ'ಗಳೆಲ್ಲ ಏನೆಲ್ಲ ಇದ್ದವು ಗೊತ್ತಿಲ್ಲ.ಆದರೆ ಚಿತ್ರ ಇಲ್ಲಿಯವರೆಗೆ ಗಳಿಸಿದ್ದು 'ಹದಿನಾರು ಕೋಟಿ'ಯನ್ನಷ್ಟೇ. ಈ ಕಾರಣಕ್ಕೆ ತಮ್ಮ ಮನದ 'ನೋವನ್ನ' ಸಂದರ್ಶನವೊಂದರಲ್ಲಿ ಹಂಚಿಕೊಂಡಿರುವ ರಣ್‌ದೀಪ್ ಹೂಡಾ ಬಿಕ್ಕಿದ್ದಾರೆ. ನಿರೀಕ್ಷಿತ ಬೆಂಬಲ ಹಾಗೂ ಪ್ರೋತ್ಸಾಹ ನನ್ನ ಚಿತ್ರಕ್ಕೆ ಸಿಕ್ಕಿಲ್ಲ ಅಂದಿದ್ದಾರೆ.

ಅಂದ್ಹಾಗೇ 'ಸ್ವಾತಂತ್ರ್ಯ ವೀರ ಸಾವರ್ಕರ್' ಸಿನಿಮಾ ಆರಂಭವಾದಾಗ ನಿರ್ದೇಶಕರ ಸ್ಥಾನದಲ್ಲಿ ಬಾಲಿವುಡ್ ನ ಖ್ಯಾತ ನಿರ್ದೇಶಕ 'ಮಹೇಶ್ ಮಾಂಜ್ರೇಕರ್' ಇದ್ದರು. 'ಸಂದೀಪ್ ಸಿಂಗ್' ಚಿತ್ರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದರು. ಆಗ ರಣ್‌ದೀಪ್ ಕೇವಲ 'ನಾಯಕ'ನಾಗಿ ಚಿತ್ರಕ್ಕೆ ಆಯ್ಕೆಯಾಗಿದ್ದರು ಅಷ್ಟೇ. ಆದರೆ ಆ ನಂತರ ಆದ ಬದಲಾವಣೆಯಲ್ಲಿ ತಾವೇ 'ನಿರ್ದೇಶಕ'ನ ಸ್ಥಾನವನ್ನೂ ಕೂಡ ರಣ್‌ದೀಪ್ ಹೂಡ ಅಲಂಕರಿಸಿದರು. 'ಸಂದೀಪ್ ಸಿಂಗ್' ನಿರ್ಮಾಪಕರಲ್ಲಿ 'ಒಬ್ಬರಾದರು'.
ಹೀಗಾಗಿಯೇ ಚಿತ್ರ ನಿರ್ಮಾಣ ಹಂತದಲ್ಲಿಯೇ ಅನೇಕ ಅಡೆ ತಡೆಯನ್ನ ನಾನು ಎದುರಿಸಿದ್ದೇ ಅಂದಿರುವ ರಣ್‌ದೀಪ್ ಹೂಡ ಮೊದಲು ಇದ್ದವರಲ್ಲಿ ಕೇವಲ 'ರೀಲ್' ಸುತ್ತುವ ಬಯಕೆ ಇತ್ತು.ಆದರೆ ನನಗೆ 'ಇತಿಹಾಸವನ್ನ ಮರುಸೃಷ್ಟಿಸುವ' ಕಿಚ್ಚಿತ್ತು. ಈ ಕಾರಣಕ್ಕೆ ನಿರ್ಮಾಣದಲ್ಲಿ ನಾನು ಕೈ ಜೋಡಿಸಿದೆ. ನನ್ನ ತಂದೆ ಕಷ್ಟ ಪಟ್ಟು ದುಡಿದು ನನಗಾಗಿ ಕೊಟ್ಟಿದ್ದ 'ಆಸ್ತಿ'ಯನ್ನು ನಾನು ಮಾರಿದೆ ಅಂದಿದ್ದಾರೆ.

ನನ್ನೊಂದಿಗೆ ಚಿತ್ರಕ್ಕೆ ಬಂಡವಾಳ ಹೂಡಿದ ಜನರಿಂದ, ನನ್ನ ಸಿಬ್ಬಂದಿ ಮತ್ತು ಪಾತ್ರ ವರ್ಗದಿಂದ ನನಗೆ ಬೆಂಬಲ ಸಿಕ್ಕಿತು ಅಷ್ಟೇ ಎಂದಿರುವ ರಣ್‌ದೀಪ್ ಹೂಡ ನಿರೀಕ್ಷಿಸಿದ್ದ ಆ ಬೆಂಬಲ ನಮಗೆ ಏಕೆ ಸಿಗಲಿಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ನಾನು ಈ ಚಿತ್ರಕ್ಕೆ ಪಟ್ಟಿರುವ ಕಷ್ಟ ಕೇವಲ ನನಗೆ, ನನ್ನ ಪತ್ನಿಗೆ ಹಾಗೂ ನನ್ನ ಕುಟುಂಬಕ್ಕೆ ಹಾಗೂ ಆ ದೇವರಿಗಷ್ಟೇ ಗೊತ್ತು ಅಂದಿದ್ದಾರೆ.
ಚಿತ್ರಕ್ಕಾಗಿ ಊಟ ಬಿಟ್ಟೆ, ನಿದ್ದೆ ಬಿಟ್ಟೆ ಕೇವಲ ನೀರು, ಬ್ಲ್ಯಾಕ್ ಕಾಫಿ ಹಾಗೂ ಗ್ರೀನ್ ಟೀ ಅಷ್ಟೇ ಕುಡಿದು ಬದುಕಿದೆ, ಪಾತ್ರಕ್ಕೆ ಜೀವ ತುಂಬಿದೆ. ಆದರೂ ಪ್ರೇಕ್ಷಕರು ನನ್ನ ಕೈ ಹಿಡಿಯಲಿಲ್ಲ, ಚಿತ್ರವನ್ನ ಬಂದು ನೋಡಲಿಲ್ಲ ಎಂದು ತಮ್ಮ ಬೇಸರವನ್ನ ಹೊರ ಹಾಕಿದ್ದಾರೆ ರಣ್‌ದೀಪ್ ಹೂಡ.

ಒಟ್ನಲ್ಲಿ ನಟನೆಗೆ ಯಾವ ಪಾತ್ರ ಆದ್ರೇನು.. ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವುದಷ್ಟೇ ಕಲಾವಿದರ ಕರ್ತವ್ಯ ಅನ್ನುವುದನ್ನ ಕಾಲ ಕಾಲಕ್ಕೆ ಸಾಬೀತು ಮಾಡ್ತಾ ಬಂದ ರಣ್‌ದೀಪ್ ಹೂಡ, ಸದ್ಯಕ್ಕೆ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ವಿಚಲಿತಗೊಂಡಿದ್ದಾರೆ. ಇದಕ್ಕೆ ಸಂದರ್ಶನದಲ್ಲಿ ಅವರು ಆಡಿದ ಮಾತುಗಳೇ ಸಾಕ್ಷಿ


Click it and Unblock the Notifications











