ಬಾಲಿವುಡ್ ನಟ ರಣದೀಪ್ ಹೂಡಗೆ ಸಂಕಷ್ಟ: ಯುವತಿಯಿಂದ ಗಂಭೀರ ಆರೋಪ
ಬಾಲಿವುಡ್ ಖ್ಯಾತ ನಟ ರಣದೀಪ್ ಹೂಡ ವಿರುದ್ಧ ಬೆದರಿಕೆ ಮತ್ತು ಕಿರುಕುಳ ಆರೋಪ ಕೇಳಿಬಂದಿದೆ. ಚಿತ್ರಕಥೆಗಾರ್ತಿ ಮತ್ತು ಸಾಹಿತಿ ಪ್ರಿಯಾ ಶರ್ಮಾ ಎನ್ನುವ ಯುವತಿ ರಾಣದೀಪ್ ಹೂಡ ವಿರುದ್ಧ ಆರೋಪ ಮಾಡಿ, 10 ಕೋಟಿ ರೂ. ದಾವೆ ಹೂಡಿದ್ದಾರೆ. ಪ್ರಿಯಾ ಶರ್ಮಾ ತನ್ನ ಪರ ವಕೀಲರಿಂದ ಹೂಡ ಮತ್ತು ಅವರ ಸ್ನೇಹಿತರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ತನ್ನ ಹೇಳಿಕೆಯಲ್ಲಿ ಪ್ರಿಯಾ ಶರ್ಮಾ, ನಟಿ ರಣದೀಪ್ ಹೂಡ ಮತ್ತು ಆತನ ಸಹೋದ್ಯೋಗಿಗಳು ನನ್ನ ಬಳಿ ಕೆಲಸ ಮಾಡುವ ಭರವಸೆ ನೀಡಿದ್ದರು. ಒಳ್ಳೆಯ ನಂಬಿಕೆಯಿಂದ 15 ವರ್ಷಗಳಿಂದ ನನ್ನ ಬಳಿ ಕಥೆ ಮತ್ತು ಹಾಡುಗಳನ್ನು ಬರೆಸಿಕೊಂಡಿದ್ದಾರೆ. ಈ ಬಗ್ಗೆ ಮೀಟಿಂಗ್ ಮಾಡೋಣ ಎಂದರೆ ಅವರು ಮುಂದೂಡುತ್ತಲೇ ಬಂದಿದ್ದಾರೆ. ಬಳಿಕ ನಾನು ಬರೆದ ಕಥೆಗಳು ಮತ್ತು ಹಾಡುಗಳನ್ನು ಹಿಂದಿರುಗಿಸುವಂತೆ ಕೇಳಿಕೊಂಡೆ. ಆದರೆ ಅವರು ಬೆದರಿಕೆ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.
ಹಾಗಾಗಿ ರಣದೀಪ್ ಹೂಡ ಮತ್ತು ಆತನ ಸಹೋದ್ಯೋಗಿಗಳ ವಿರುದ್ಧ 10 ಕೋಟಿ ರೂ. ಪರಿಹಾರ ಕೇಳಿ ತನ್ನ ವಕೀಲರ ಮೂಲಕ ನೋಟೀಸ್ ಕಳುಹಿಸಿದ್ದಾರೆ. ಇಷ್ಟೆಯಲ್ಲದೆ ಹರಿಯಾಣದ ಫರಿದಾಬಾದ್ ನ ಪೊಲೀಸ್ ಮಹಾ ನಿರ್ದೇಶಕರಿಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆ.

ಪ್ರಿಯಾ ಶರ್ಮಾ 1,200 ಹಾಡುಗಳನ್ನು ಮತ್ತು 40 ಕಥೆಗಳನ್ನು ಬರೆದು ನಟ ರಣದೀಪ್ ಹೂಡ,ಆಶಾ ಹೂಡ, ಪಾಂಚಾಲಿ ಚೌಧರಿ, ರೇಣುಕಾ ಪಿಳ್ಳೈ ಅವರಿಗೆ ಇಮೇಲ್ ಮತ್ತು ವಾಟ್ಸಪ್ ಮೂಲಕ ಕಳುಹಿಸಿದ್ದರಂತೆ. ಪ್ರಿಯಾ ಪರ ವಕೀಲರು, ಪ್ರಿಯಾ ಕಳೆದ 8 ತಿಂಗಳಿಂದ ಎದುರಿಸಿದ ಕಿರುಕುಳಕ್ಕೆ 10 ಕೋಟಿ ರೂ. ಪರಿಹಾರ ಕೇಳಿದ್ದಾರೆ.
ಈ ಬಗ್ಗೆ ರಣದೀಪ್ ಹೂಡ ಆಗಲಿ ಅಥವಾ ಅವರ ಪರ ಕಾನೂನು ತಂಡ ಯಾರು ಕೂಡ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ರಣದೀಪ್ ಕಡೆಯಿಂದ ಯಾವ ಪ್ರತಿಕ್ರಿಯೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ನಟ ರಣದೀಪ್ ಹೂಡ ಸಿನಿಮಾ ವಿಚಾರಕ್ಕೆ ಬರುವುದಾದರೆ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಕಿಕ್, ಸರ್ಬ್ಜಿತ್, ಸುಲ್ತಾನ್, ಬಾಘಿ-2, ಲವ್ ಆಜ್ ಕಲ್, ರಾಧೆ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ರಣದೀಪ್ ಹೂಡ ಬಳಿ ಅನ್ ಫೈರ್ ಅಂಡ ಲವ್ಲಿ ಅಂಡ್ ರ್ಯಾಟ್ ಅನ್ ಹೈವೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











