ರಣದೀಪ್ ಹೂಡಾ ಬಳಿ 10 ಕೋಟಿ ಪರಿಹಾರಕ್ಕೆ ಬೇಡಿಕೆಯಿಟ್ಟ ಬರಹಗಾರ್ತಿ

ಬಾಲಿವುಡ್ ನಟ ರಣದೀಪ್ ಹೂಡಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸೂರತ್ ಮೂಲದ ಬರಹಗಾರ್ತಿ-ಗೀತೆರಚನೆಕಾರ್ತಿ ಪ್ರಿಯಾಂಕಾ ಶರ್ಮಾ, ರಣದೀಪ್ ಮತ್ತು ತಂಡ ಕಳೆದ ಹಲವು ವರ್ಷದಿಂದ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದು, 10 ಕೋಟಿ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಕಥೆ ಮತ್ತು ಹಾಡುಗಳನ್ನು ತೆಗೆದುಕೊಂಡು ಸಿನಿಮಾಗಳಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಪ್ರಿಯಾಂಕಾ ದೂರಿದ್ದು, 10 ಕೋಟಿ ಪರಿಹಾರ ನೀಡಬೇಕು ಎಂದು ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರ್ಯಾಣದ ಪೊಲೀಸ್ ಮಹಾನಿರ್ದೇಶಕ ಫರೀದಾಬಾದ್‌ನ ರೇಂಜ್ ಕಮೀಷನರ್‌ಗೆ ಇ-ಮೇಲ್ ಮೂಲಕ ದೂರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ರಣದೀಪ್ ಹೂಡ ನನ್ನನ್ನು ಸಂಪರ್ಕಿಸಿದ್ದರು, ತನ್ನ ಸ್ಕ್ರಿಪ್ಟ್ ಪಡೆದುಕೊಂಡು ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರು. ಆಮೇಲೆ ನನಗೆ ಸ್ಪಂದಿಸಲೇ ಇಲ್ಲ ಎನ್ನುವ ವಿಚಾರವನ್ನು ಪ್ರಿಯಾಂಕಾ ಶರ್ಮಾ ಬಹಿರಂಗಪಡಿಸಿದ್ದಾರೆ. ''ರಣದೀಪ್ ಹೂಡಾ ನನ್ನನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದರು. ತಾನು ಬರೆದಿದ್ದ ಬಹಳ ಕಥೆಗಳನ್ನು ಕಳುಹಿಸಿದ್ದೆ. ಶೀಘ್ರದಲ್ಲಿ ಕೆಲಸ ಪ್ರಾರಂಭಿಸೋಣ ಎಂದಿದ್ದರು. ಒಟ್ಟು 1200 ಹಾಡುಗಳು ಮತ್ತು 40 ಕಥೆಗಳನ್ನು ರಣದೀಪ್ ಹೂಡಾ, ಆಶಾ ಹೂಡಾ, ಮಂದೀಪ್ ಹೂಡಾ, ಅಜ್ಲಿ ಹೂಡಾ, ಮನೀಶ್, ರಣದೀಪ್ ಮ್ಯಾನೇಜರ್ ಪಾಂಚಾಲಿ ಚೌಧರಿ, ಮೇಕಪ್ ಆರ್ಟಿಸ್ಟ್ ರೇಣುಕಾ ಪಿಳೈ ಅವರಿಗೆ ವಾಟ್ಸಾಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದೆ'' ಎಂದು ತಿಳಿಸಿದ್ದಾರೆ.

Randeep Hooda Slapped with a Rs 10 crore Legal notice by Scriptwriter

''ವರ್ಷಗಳು ಸಾಗಿದೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹಾಡುಗಳನ್ನು ಎಲ್ಲಿಯೂ ಬಳಸಿಲ್ಲ. ಕಥೆಗಳ ಮೇಲೆ ಕೆಲಸವು ಪ್ರಾರಂಭಿಸಿಲ್ಲ'' ಎಂದು ಪ್ರಿಯಾಂಕಾ ಬೇಸರ ಹೊರಹಾಕಿದ್ದಾರೆ. ''ತನ್ನ ಕಥೆ ಮತ್ತು ಹಾಡುಗಳನ್ನು ವಾಪಸ್ ಕಳುಹಿಸಿ ಎಂದು ಅವರ ತಂಡವನ್ನು ಸಂಪರ್ಕಿಸಿ ಕೇಳಿದರೆ, ಜೀವ ಬೆದರಿಕೆ ಹಾಕ್ತಿದ್ದಾರೆ'' ಎಂದು ದೂರಿದ್ದಾರೆ.

ಕಳೆದ 10 ವರ್ಷಗಳಿಂದ ತನಗೆ ನೀಡಿರುವ ಕಿರುಕುಳಕ್ಕಾಗಿ 10 ಕೋಟಿ ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದೇವೆ ಎಂದು ಪ್ರಿಯಾಂಕಾ ಶರ್ಮಾ ವಕೀಲ ರಜತ್ ಕಲ್ಸನ್ ಮಾಹಿತಿ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಅಂದ್ಹಾಗೆ, ಪ್ರಿಯಾಂಕಾ ಶರ್ಮಾ ಪ್ರಸ್ತುತ ಸೂರತ್‌ನಲ್ಲಿ ಚಲನಚಿತ್ರಗಳಿಗೆ ಸ್ಕ್ರಿಪ್ಟ್‌ಗಳು, ಕಥೆಗಳು ಮತ್ತು ಹಾಡುಗಳನ್ನು ಬರೆಯುತ್ತಿದ್ದಾರೆ. ರಣದೀಪ್ ಹೂಡಾ ಬಗ್ಗೆ ಹೇಳುವುದಾದರೆ ಸಲ್ಮಾನ್ ಖಾನ್ ಜೊತೆ 'ರಾಧೇ' ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಪ್ರಸ್ತುತ, ನಟಿ ಇಲಿಯಾನ ಜೊತೆ ಅನ್‌ಫೇರ್ & ಲವ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ 'Rat on a highway' ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಧನ್ಯವಾದ ತಿಳಿಸಿದ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ

ನೂತನ ದಂಪತಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಬಾಲಿವುಡ್ ಇಂಡಸ್ಟ್ರಿಯ ಆತ್ಮೀಯರಿಗೆ, ಗೆಳಯರಿಗೆ ವಿಶೇಷವಾದ ಉಡುಗೊರೆ ಕಳುಹಿಸುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ''ಕೋವಿಡ್ ಕಾರಣದಿಂದ ತಮ್ಮ ವಿವಾಹವನ್ನು ಮನೆಯಲ್ಲಿಯೇ ಬಹಳ ಸರಳವಾಗಿ ಜರುಗಿಸಲಾಯಿತು. ನಿಮ್ಮೆಲ್ಲರನ್ನು ಈ ಸಂಭ್ರಮದಲ್ಲಿ ಭಾಗಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ನೀವೆಲ್ಲರೂ ನಮ್ಮ ಹೃದಯದಲ್ಲಿದ್ದೀರಾ ಮತ್ತು ನಿಮ್ಮ ಆಶೀರ್ವಾದ ನಮಗಿರಲಿ'' ಎಂದು ಮುದ್ರಿಸಿರುವ ವಿಶೇಷ ಕಾರ್ಡ್ ಮತ್ತು ಸಿಹಿ ಕಳುಹಿಸಿದ್ದಾರೆ.

ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ, ಸೋನಮ್ ಕಪೂರ್ ಸಹೋದರಿ ರಿಯಾ ಕಪೂರ್ ಮತ್ತು ಕರಣ್ ಬೂನಾಲ್ ವಿವಾಹ ಆಗಸ್ಟ್ 14 ರಂದು ಜುಹುವಿನಲ್ಲಿರುವ ನಿವಾಸದಲ್ಲಿ ನಡೆದಿತ್ತು. ಕೇವಲ ಕುಟುಂಬ ಸದಸ್ಯರ ಮಾತ್ರ ಈ ಸಂಭ್ರಮದಲ್ಲಿ ಪಾಲಗೊಂಡಿದ್ದರು.

More from Filmibeat

English summary
Bollywood Actor Randeep Hooda slapped with a Rs 10 crore legal notice by scriptwriter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X