For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ತಂದೆ ರಣಧೀರ್ ಕಪೂರ್‌ಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲು

  |

  ಬಾಲಿವುಡ್ ನ ಹಿರಿಯ ನಟ ಮತ್ತು ಖ್ಯಾತ ನಟಿ ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಸಿಟಿವ್ ಬಂದ ಬಳಿಕ 74 ವರ್ಷದ ನಟ ರಣಧೀರ್ ಕಪೂರ್ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಡಾ.ಸಂತೋಷ್ ಶೆಟ್ಟಿ, ರಣಧೀರ್ ಕಪೂರ್ ಆರೋಗ್ಯ ಸ್ಥಿರವಾಗಿದೆ, ಚಿಂತಿಸಬೇಕಾಗಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಕಪೂರ್ ಖಾಂದಾನ್‌ನಲ್ಲಿ ಮತ್ತೆ ತಲೆ ಎತ್ತಿದ ಆಸ್ತಿ ವಿವಾದಕಪೂರ್ ಖಾಂದಾನ್‌ನಲ್ಲಿ ಮತ್ತೆ ತಲೆ ಎತ್ತಿದ ಆಸ್ತಿ ವಿವಾದ

  ನಟ ರಣಧೀರ್ ಕಪೂರ್ ಲೆಜೆಂಡ್ ನಟ ಮತ್ತು ನಿರ್ಮಾಪಕ ರಾಜ್ ಕಪೂರ್ ಅವರ ಹಿರಿಯ ಮಗ. ರಣಧೀರ್ ಕಪೂರ್ ತನ್ನ ಇಬ್ಬರು ಸಹೋದರರಾದ ರಿಷಿ ಕಪೂರ್ ಮತ್ತು ರಾಜೀವ್ ಕಪೂರ್ ಇಬ್ಬರನ್ನು ಒಂದು ವರ್ಷದ ಅವಧಿಯಲ್ಲಿ ಕಳೆದುಕೊಂಡಿದ್ದಾರೆ.

  ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಾ ಸರ್ಕಾರ?? | Filmibeat Kannada

  ಇತ್ತೀಚಿಗಷ್ಟೆ ಆಸ್ತಿ ವಿಚಾರವಾಗಿ ರಣಧೀರ್ ಕಪೂರ್ ಸುದ್ದಿಯಾಗಿದ್ದರು. ಇದೇ ವರ್ಷದ ಆರಂಭದಲ್ಲಿ ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ ಅಸುನೀಗಿದರು. ಫೆಬ್ರವರಿಯಲ್ಲಿ ಮರಣ ಹೊಂದಿದ ಅವರು ಯಾವುದೇ ವ್ಹಿಲ್ ಮಾಡದೇ ಸಾವನ್ನಪ್ಪಿದರು. ರಾಜೀವ್ ಅವರ ಆಸ್ತಿ ಮೇಲೆ ನಮ್ಮ ಹಕ್ಕಿದೆ ಎಂದು ರಾಜೀವ್ ಸಹೋದರ ರಣಧೀರ್ ಕಪೂರ್ ಹಾಗೂ ಸಹೋದರಿ ರೀಮಾ ಜೈನ್ ಹೈಕೋರ್ಟ್‌ಗೆ ಪಿಟಿಷನ್ ಹಾಕಿದ್ದರು.

  English summary
  Bollywood senior Actor Randhir Kapoor hospitalized after testing positive for Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X