ಕರೀನಾ ಕಪೂರ್ 2ನೇ ಮಗ ಹೇಗಿದ್ದಾನೆ? ಫೋಟೋ ಶೇರ್ ಮಾಡಿ ಡಿಲೀಟ್ ಮಾಡಿದ್ದೇಕೆ?

ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೋಡಿ ಎರಡನೇ ಮಗುವನ್ನು ಸ್ವಾಗತಿಸಿ ತಿಂಗಳುಗಳಾಗಿದೆ. ಆದರೆ ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಕರೀನಾ ಕಪೂರ್ ಎರಡನೇ ಮಗ ಹೇಗಿದ್ದಾನೆ, ಹೆಸರೇನು ಇಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಆದರೆ ಸೈಫ್ ದಂಪತಿ ಎರಡನೇ ಮಗುವಿನ ಯಾವುದೇ ಫೋಟೋವನ್ನು ಎಲ್ಲೂ ಶೇರ್ ಮಾಡಿಲ್ಲ. ಆದರೆ ಇವತ್ತು ಕರೀನಾ ಕಪೂರ್ ಎರಡನೇ ಮಗುವಿನ ಫೋಟೋ ಲೀಕ್ ಆಗಿದೆ. ಕರೀನಾ ಕಪೂರ್ ತಂದೆ ಮತ್ತು ಹಿರಿಯ ನಟ ರಣಧೀರ್ ಕಪೂರ್ ಆಕಸ್ಮಿಕವಾಗಿ ಮೊಮ್ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡುತ್ತಿದ್ದಂತೆ ತಕ್ಷಣ ಡಿಲೀಟ್ ಮಾಡಿದ್ದಾರೆ.

ಮೊದಲ ಮೊಮ್ಮಗ ತೈಮೂರ್ ಅಲಿ ಖಾನ್ ಮತ್ತು ಎರಡನೇ ಮೊಮ್ಮಗನ ಫೋಟೋವನ್ನು ಕೊಲಾಜ್ ಮಾಡಿ ಶೇರ್ ಮಾಡಿದ್ದರು. ಆದರೆ ತಕ್ಷಣ ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲೇ ಸ್ಕ್ರೀನ್ ಶಾಟ್‌ಗಳು ವೈರಲ್ ಆಗುತ್ತಿದೆ. ಈ ಮೊದಲು ಕರೀನಾ ಮಗನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ಮುಖ ತೋರಿಸಿರಲಿಲ್ಲ.

Randhir Kapoor mistakenly shares Kareena Kapoor second baby photo

ಇದೀಗ ಮುದ್ದಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೆಬ್ರವರಿಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿರುವ ಕರೀನಾ ಆಗಲೇ ಕೆಲಸಕ್ಕೆ ಮರಳಿದ್ದಾರೆ. ಇತ್ತೀಚಿಗಷ್ಟೆ ಶೂಟಿಂಗ್ ಮರಳಿದ್ದ ಕರೀನಾ ಫೋಟೋ ವೈರಲ್ ಆಗಿತ್ತು. ಇಬ್ಬರು ಮಕ್ಕಳ ಆರೈಕೆ ಜೊತೆಗೆ ಕರೀನಾ ಸಿನಿಮಾ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ.

Randhir Kapoor mistakenly shares Kareena Kapoor second baby photo

2012ರಲ್ಲಿ ಸೈಫ್ ಅಲಿ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರೀನಾ 2016ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಎರಡನೇ ಮಗನ ಹೆಸರು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Recommended Video

ಯುವರತ್ನ ನೋಡಿ ರಕ್ಷಿತ್ ಶೆಟ್ಟಿ ಹೇಳಿದ್ದು ಒಂದೇ ಮಾತು | Filmibeat Kannada

More from Filmibeat

English summary
Randhir Kapoor mistakenly shares Kareena Kapoor second baby photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X