For Quick Alerts
  ALLOW NOTIFICATIONS  
  For Daily Alerts

  ಕಪೂರ್ ಪೂರ್ವಜರ ಆಸ್ತಿ ಮಾರಾಟಕ್ಕಿಟ್ಟ ರಣಧೀರ್ ಕಪೂರ್

  |

  ಕಪೂರ್ ಖಾಂದಾನ್‌ನಲ್ಲಿ ಆಗಾಗ್ಗೆ ಆಸ್ತಿ ವಿವಾದಗಳು, ಪರಭಾರೆಗಳು ಸಾಮಾನ್ಯ. ಬಾಲಿವುಡ್‌ ಅನ್ನು ಅಕ್ಷರಷಃ ಆಳಿದ ಕಪೂರ್ ಖಾಂದಾನ್‌ ಮುಂಬೈನಲ್ಲಿ ಸಾಕಷ್ಟು ಆಸ್ತಿಗಳನ್ನು ಹೊಂದಿದೆ. ಕೆಲವಂತೂ ಹಲವಾರು ವರ್ಷ ಹಳೆಯ ಆಸ್ತಿಗಳು.

  ಅಂಥಹಾ ಆಸ್ತಿಗಳಲ್ಲಿ ಒಂದು ಮುಂಬೈನ ಚೇಂಬೂರ್‌ನಲ್ಲಿರುವ 'ಆರ್‌ಕೆ ಹೌಸ್' ಸಹ ಒಂದು. ಈ ಮನೆಯಲ್ಲಿ ಕರೀನಾ, ಕರಿಶ್ಮಾ ಕಪೂರ್ ಅವರ ತಂದೆ ರಣಧೀರ್ ಕಪೂರ್ ವಾಸವಿದ್ದಾರೆ. ಆದರೆ ಈ ಮನೆಯನ್ನು ಮಾರಿಬಿಡುವ ಆಲೋಚನೆಯಲ್ಲಿದ್ದಾರೆ ರಣಧೀರ್ ಕಪೂರ್.

  ರಣಧೀರ್ ಅವರು ಚೇಂಬೂರ್‌ನಿಂದ ಬ್ಯಾಂಡ್ರಾಗೆ ಶಿಫ್ಟ್ ಆಗಲು ಯೋಚಿಸಿದ್ದು, ಬ್ಯಾಂಡ್ರಾದ ಮೌಂಟ್ ಮೇರೀಸ್ ಚರ್ಚ್‌ ಬಳಿ ಹೊಸ ಮನೆ ಖರೀದಿಸಿದ್ದಾರೆ. ಇನ್ನೇನು ಹೊಸ ಮನೆಗೆ ಶಿಫ್ಟ್ ಆಗಬೇಕು ಎಂದುಕೊಂಡಿರುವಾಗಲೇ ರಣಧೀರ್‌ಗೆ ಕೊರೊನಾ ಪಾಸಿಟಿವ್ ಆಗಿದೆ.

  ಮುಖ್ಯ ಮುಂಬೈಗೆ ಚೇಂಬೂರ್‌ ದೂರವಾಗುತ್ತದೆ. ತಾನು ಮಕ್ಕಳು ಹಾಗೂ ಪತ್ನಿ ಬಬಿತಾ ಅವರ ಮನೆಗಳಿಗೆ ಹತ್ತಿರದಲ್ಲಿರಬೇಕು ಎಂಬ ಕಾರಣಕ್ಕೆ ಚೇಂಬೂರ್‌ನಿಂದ ಬ್ಯಾಂಡ್ರಾಗೆ ಶಿಫ್ಟ್ ಆಗುತ್ತಿದ್ದಾರೆ ರಣಧೀರ್ ಕಪೂರ್.

  2019 ರಲ್ಲಿ ಕಪೂರ್ ಕುಟುಂಬಕ್ಕೆ ಸೇರಿದ ಬಾಲಿವುಡ್‌ನ ಮೊದಲ ಸ್ಟುಡಿಯೋ ಆರ್‌ಕೆ ಸ್ಟುಡಿಯೋ ಅನ್ನು ಗೋದ್ರೇಜ್ ಸಂಸ್ಥೆಗೆ ಕಪೂರ್ ಕುಟುಂಬ ಮಾರಿತು.

  ಇದೇ ವರ್ಷಾರಂಭದಲ್ಲಿ ನಿಧನ ಹೊಂದಿದ ಕಪೂರ್ ಕುಟುಂಬದ ರಾಜೀವ್ ಕಪೂರ್ ಅವರ ಆಸ್ತಿ ತಮಗೆ ಸೇರಬೇಕು ಎಂದು ರಣಧೀರ್ ಕಪೂರ್ ಹಾಗೂ ರೀಮಾ ಜೈನ್ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದೆ.

  ರಾಜೀವ್ ಕಪೂರ್ ಅವರು ಆರತಿ ಸಬರ್ವಾಲ್ ಎಂಬುವರಿಟ್ಟಿಗೆ 2001 ರಲ್ಲಿ ವಿವಾಹವಾಗಿ ಎರಡೇ ವರ್ಷಕ್ಕೆ ವಿಚ್ಛೇಧನ ಪಡೆದರು ಹಾಗಾಗಿ ಅವರ ಆಸ್ತಿಯ ಹಕ್ಕು ನಮಗೆ ಬರಬೇಕು ಎಂದು ರಣಧೀರ್ ಹಾಗೂ ರೀಮಾ ನ್ಯಾಯಾಲಯಕ್ಕೆ ಹೇಳಿದ್ದಾರೆ.

  English summary
  Randhir Kapoor selling his ancestors property RK house which is in Mumbai's Chembur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X