ಮತ್ತೆ ಹೃತಿಕ್ ಅನ್ನು ಕೆಣಕಿದ ಕಂಗನಾ ಸಹೋದರಿ: ನಟ್ಟಿಗರು ಹೇಳಿದ್ದೇನು?
ಬಾಲಿವುಡ್ ನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಟಿ ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ವಾರ್ ತಾರಕ್ಕಕ್ಕೇರಿತ್ತು. ಇಬ್ಬರ ನಡುವಿನ ಪ್ರೀತಿ, ಬ್ರೇಕ್ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಕ್ರಿಷ್-3 ಸಿನಿಮಾದಿಂದ ಪ್ರಾರಂಭವಾದಿ ಇಬ್ಬರ ಸ್ನೇಹ ನಂತರ ಬಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.
Recommended Video
ನಟಿ ಕಂಗನಾ ರಣಾವತ್ ಹೃತಿಕ್ ರೋಷನ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೆಲ್ಲ ಮೂರು ನಾಲ್ಕು ವರ್ಷದ ಹಿಂದಿನ ವಿಚಾರ. ಆದರೀಗ ಮತ್ತೆ ನಟಿ ಕಂಗನಾ ರಣಾವತ್ ಸಹೋದರಿಯರು ಹೃತಿಕ್ ರೋಷನ್ ಅನ್ನು ಕೆಣಕುತ್ತಿದ್ದಾರೆ . ಇತ್ತೀಚಿಗೆ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೇಲ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿ ಹಳೆಯದನ್ನೆಲ್ಲ ನೆನಪಿಸಿದ್ದಾರೆ.

ಮತ್ತೆ ಹೃತಿಕ್ ಕಾಲೆಳೆದ ರಂಗೋಲಿ
ನಟಿ ಕಂಗನಾ ಮತ್ತು ಹೃತಿಕ್ ಇಬ್ಬರು ಒಟ್ಟಿಗೆ ಇರುವ ಫೋಟೋವನ್ನು ರಂಗೋಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಹೃತಿಕ್ ಮತ್ತು ಕಂಗನಾ ಇಬ್ಬರು ಸಂತೋಷವಾಗಿದ್ದಾರೆ. ಈ ಹಳೆಯ ಫೋಟೋವನ್ನು ಹಾಕಿ ರಂಗೋಲಿ ಮತ್ತೆ ಹೃತಿಕ್ ಮತ್ತು ಅವರ ಅಭಿಮಾನಿಗಳನ್ನು ಕಿಚಾಯಿಸಿದ್ದಾರೆ.

ಕಂಗನಾ ಸಹೋದರಿ ಹೇಳಿದ್ದೇನು?
"ಪಪ್ಪು ಅವರೆ ಇಲ್ಲಿ ನೋಡಿ. ಆಗ ನನ್ನ ಸಹೋದರಿಯನ್ನು ದಿನ ಪೂರ್ತಿ ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದೀರಿ. ಇವತ್ತು ಏನು ಸಂಬಂದ ಇಲ್ಲ ಅನ್ನೋತರ ಹೇಳುತ್ತಿದ್ದೀರಿ" ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಬುದ್ದಿವಾದ
ರಂಗೋಲಿಯ ಈ ಟ್ವೀಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರಂಗೋಲಿ ಮತ್ತು ಕಂಗನಾ ಸಹೋದರಿಯರಿಗೆ ದ್ವೇಷದಿಂದ ಹೊರಬಂದು ಮುಂದಕ್ಕೆ ಹೋಗುವಂತೆ ಬುದ್ದಿವಾದ ಹೇಳುತ್ತಿದ್ದಾರೆ.

ಕಂಗನಾ ಈಗಾಗಲೆ ಎತ್ತರಕ್ಕೆ ಬೆಳೆದಿದ್ದಾರೆ
"ಕಂಗನಾ ತುಂಬ ಒಳ್ಳೆಯ ನಟಿ. ಪ್ರತಿಭಾವಂತ ಹುಡುಗಿ. ಈ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈಗಾಗಲೆ ಬಾಲಿವುಡ್ ನಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಈ ಕೆಟ್ಟ ವಿಚಾರಗಳು ಕಂಗನಾ ಇಮೇಜ್ ಗೆ ಸಹಾಯ ಮಾಡುವುದಿಲ್ಲ" ಎಂದು ಹೇಳುತ್ತಿದ್ದಾರೆ.

ಮತ್ತೆ ಯಾಕೆ ಇದನ್ನೆಲ್ಲ ನೆನೆಪಿಸುತ್ತಿದ್ದೀರಿ?
"ಇದೆಲ್ಲ ಮುಗಿದ ಕಥೆ ಮತ್ತೆ ಇದನ್ನು ಮುಂದುವರೆಸ ಬೇಡಿ. ಕಂಗನಾ ಒಳ್ಳೆಯದನ್ನು ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಜೀವನದಲ್ಲಿ ಮುಂದುವರೆಯಬೇಕು. ಮತ್ತೆ ಯಾಕೆ ಇದನ್ನೆಲ್ಲ ನೆನೆಪಿಸುತ್ತಿದ್ದೀರಿ? ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಕಂಗನಾ ಸಹೋದರಿ ರಂಗೋಲಿ ಹೀಗೆ ಆಗಾಗ ಹೃತಿಕ್ ವಿಚಾರವನ್ನು ಕೆದಕುತ್ತಿರುವುದು ನೋಡಿದರೆ ಕಂಗನಾ ಮತ್ತು ಹೃತಿಕ್ ನಡುವಿನ ವಿವಾದಕ್ಕೆ ತೆರೆಬೀಳುವ ಹಾಗೆ ಕಾಣುತ್ತಿಲ್ಲ.


Click it and Unblock the Notifications










