Don't Miss!
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- News
ಬಿಎಂಟಿಸಿ: ನಗರದಲ್ಲಿ ಅರ್ಧದಷ್ಟು ಎಸಿ ಬಸ್ಗಳ ಸೇವೆ ಅಲಭ್ಯ
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Technology
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- Lifestyle
ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರತಿಷ್ಠಿತ ಕಟ್ಟಡದಲ್ಲಿ ದುಬಾರಿ ಫ್ಲ್ಯಾಟ್ ಖರೀದಿಸಿದ ನಟಿ ರಾಣಿ ಮುಖರ್ಜಿ
ಬಾಲಿವುಡ್ ಅಂದ್ರೆನೇ ಹಾಗೆ. ಎಲ್ಲದರಲ್ಲೂ ದುಬಾರಿ. ಹಾಕೋ ಬಟ್ಟೆ, ತಿನ್ನುವ ಊಟ, ವಾಸಿಸೋಕೆ ಮನೆ ಎಲ್ಲವೂ ಕಾಸ್ಟ್ಲಿ. ಒಬ್ಬರಿಗಿಂತ ಮತ್ತೊಬ್ಬರು ದುಬಾರಿ ಜೀವನ ಸಾಗಿಸುವುದು ಸಾಮಾನ್ಯವಾಗಿದೆ. ಸ್ವಂತ ಮನೆಗಳು ಇದ್ದರೂ ಪ್ರತಿಷ್ಠಿತ ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿ ಮಾಡುವ ನಟ-ನಟಿಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೀಗ ಈ ಸಾಲಿಗೆ 'ಮರ್ದಾನಿ' ಖ್ಯಾತಿಯ ರಾಣಿ ಮುಖರ್ಜಿ ಸೇರಿದ್ದಾರೆ.
ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ಮದುವೆ ಆದ್ಮೇಲೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ರಾಣಿ ಮುಖರ್ಜಿ ನಟಿಸುತ್ತಿದ್ದಾರೆ. ಚಿತ್ರರಂಗದಿಂದ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದುಕೊಂಡಿರುವ ನಟಿ ಈಗ ಹೊಸ ಮನೆ ಖರೀದಿ ಮಾಡಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ರಶ್ಮಿಕಾ
ಬಳಿಕ
ಮುಂಬೈನಲ್ಲಿ
ಮನೆ
ಖರೀದಿಗೆ
ಮುಂದಾದ
ಮತ್ತೋರ್ವ
ಸೌತ್
ಸ್ಟಾರ್
ನಟಿ
ವರದಿಗಳ ಪ್ರಕಾರ, 'ಕುಚ್ ಕುಚ್ ಹೋತಾ ಹೈ' ನಟಿ ರಾಣಿ ಮುಖರ್ಜಿ ಮುಂಬೈನ ಪಶ್ಚಿಮ ಖಾರ್ನ ರುಸ್ತೋಮ್ಜಿ ಪ್ಯಾರಾಮೌಂಟ್ನಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಝೂಮ್ ವೆಬ್ಸೈಟ್ ವರದಿ ಮಾಡಿರುವಂತೆ ಮಾರ್ಚ್ ತಿಂಗಳಲ್ಲಿ ಹೊಸ ಮನೆಯ ಖರೀದಿಗೆ ಒಪ್ಪಂದ ಆಗಿದ್ದು, ಜುಲೈ ತಿಂಗಳಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಮುಂದೆ ಓದಿ...
ಮುಂಬೈನಲ್ಲಿ
ಹೊಸ
ಮನೆ
ಖರೀದಿ
ಮಾಡಿದ
ಬಾಲಿವುಡ್
ನಟಿ
ಜಾಕ್ಲೀನ್

7.12 ಕೋಟಿ ವೆಚ್ಚದ ಫ್ಲ್ಯಾಟ್
ಅಪಾರ್ಟ್ಮೆಂಟ್ನ 22ನೇ ಮಹಡಿಯಲ್ಲಿ ಬಾಂಬೆ ಟಾಕೀಸ್ ನಟಿ ಫ್ಲ್ಯಾಟ್ ಹೊಂದಿದ್ದು, ಒಟ್ಟು 148.5 ಚದರ ಅಡಿ ವಿಸ್ತಾರ ಪ್ರದೇಶದಲ್ಲಿದೆ. ರಾಣಿ ಮುಖರ್ಜಿಗೆ ಎರಡು ಪಾರ್ಕಿಂಗ್ ಸ್ಥಳ ಬುಕ್ ಆಗಿದೆ. ಇನ್ನು ಈ ಫ್ಲ್ಯಾಟ್ಗೆ ರಾಣಿ ಮುಖರ್ಜಿ 7.12 ಕೋಟಿ ಹಣ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಮುಖರ್ಜಿ ಖರೀದಿ ಮಾಡಿರುವ ಫ್ಲ್ಯಾಟ್ನಿಂದ ಅರೇಬಿಯನ್ ಸಮುದ್ರದ ಸುಂದರವಾರ ನೋಟ ನೋಡಸಿಗುತ್ತದೆಯಂತೆ.
ಮುಂಬೈನಲ್ಲಿ
ದುಬಾರಿ
ಮನೆ
ಖರೀದಿ
ಮಾಡಿದ
ನಟಿ
ಸೋನಾಕ್ಷಿ
ಸಿನ್ಹಾ

ದಿಶಾ ಪಟಾನಿಯೂ ಖರೀದಿ
ಅಂದ್ಹಾಗೆ, ಈ ಕಟ್ಟಡದಲ್ಲಿ ರಾಣಿ ಮುಖರ್ಜಿ ಫ್ಲ್ಯಾಟ್ ಖರೀದಿ ಮಾಡುವುದಕ್ಕೂ ಮೊದಲು ಬಾಲಿವುಡ್ನ ಇನ್ನೊಬ್ಬ ನಟಿ ಮನೆ ಹೊಂದಿದ್ದಾರೆ. ಎಂಎಸ್ ಧೋನಿ ಖ್ಯಾತಿಯ ನಟಿ ದಿಶಾ ಪಟಾನಿ ಸಹ ಈ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೂನ್ ತಿಂಗಳಲ್ಲಿ ದಿಶಾ ಪಟಾನಿ ಫ್ಲ್ಯಾಟ್ ಕೊಂಡುಕೊಂಡಿದ್ದು, ಸುಮಾರು 5.95 ಕೋಟಿ ವೆಚ್ಚ ಭರಿಸಿದ್ದಾರಂತೆ. ಇನ್ನು ದಿಶಾ ಫ್ಲ್ಯಾಟ್ 16ನೇ ಮಹಡಿಯಲ್ಲಿದೆ ಎಂದು ವರದಿಯಾಗಿದೆ. ಈ ಮೂಲಕ ರಾಣಿ ಮುಖರ್ಜಿ ಮತ್ತು ದಿಶಾ ಪಟಾನಿ ಇಬ್ಬರು ನೆರೆಹೊರೆಯವರಾಗಲಿದ್ದಾರೆ. ಇನ್ನು ಇವರಷ್ಟೇ ಅಲ್ಲದೇ ದಿಶಾ ಪಟಾನಿ ಬಾಯ್ಫ್ರೆಂಡ್ ಟೈಗರ್ ಶ್ರಾಫ್, ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಸಹ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂದು ಝೂಮ್ ವರದಿಯಲ್ಲಿ ಉಲ್ಲೇಖಿಸಿದೆ.

ಹಲವು ನಟಿಯರು ಫ್ಲ್ಯಾಟ್ ಖರೀದಿ
ರಾಣಿ ಮುಖರ್ಜಿಗೂ ಮುಂಚೆ ಹಲವು ನಟಿಯರು ಮುಂಬೈನಲ್ಲಿ ಹೊಸ ಮನೆಗಳನ್ನು ಖರೀದಿ ಮಾಡಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಬೆಲೆ ಕೊಟ್ಟು ಮುಂಬೈನಲ್ಲಿ ಮನೆ ಖರೀದಿ ಮಾಡಿ, ಸ್ಥಳಾಂತರವಾಗಿದ್ದಾರೆ ಎಂದು ಪಿಂಕ್ ವಿಲ್ಲಾ ವೆಬ್ಸೈಟ್ ವರದಿ ಮಾಡಿತ್ತು. ಮುಂಬೈನ ಬಾಂದ್ರಾ ನಗರದ ಪ್ರಮುಖ ಅಪಾರ್ಟ್ಮೆಂಟ್ನಲ್ಲಿ ದಬಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ 4 ಬಿಎಚ್ಕೆ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣದ ಖ್ಯಾತ ನಟಿಯರಾದ ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಸಹ ಇತ್ತೀಚಿನ ದಿನದಲ್ಲಿ ಮುಂಬೈನಲ್ಲಿ ಮನೆ ಖರೀದಿ ಮಾಡಿರುವುದಾಗಿ ಸುದ್ದಿ ಬಹಿರಂಗವಾಗಿತ್ತು.

ಬಂಟಿ ಔರ್ ಬಬ್ಲಿ-2 ಸಿನಿಮಾ
2019ರಲ್ಲಿ 'ಮರ್ದಾನಿ-2' ಸಿನಿಮಾ ತೆರೆಗೆ ಬಂದಿತ್ತು. ಸದ್ಯ 'ಬಂಟಿ ಔರ್ ಬಬ್ಲಿ 2' ಚಿತ್ರಗಳಲ್ಲಿ ರಾಣಿ ಮುಖರ್ಜಿ ನಟಿಸಿದ್ದು, ಈ ಚಿತ್ರ ಬಿಡುಗಡೆಯಾಗಬೇಕಿದೆ. ಜೊತೆ 'ಮಿಸಸ್ ಚಟರ್ಜಿ ಮತ್ತು ನಾರ್ವೆ' ಸಿನಿಮಾದಲ್ಲೂ ಮುಖರ್ಜಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.