India
  For Quick Alerts
  ALLOW NOTIFICATIONS  
  For Daily Alerts

  ಶಿರಡಿ ಸಾಯಿ ಬಾಬಾ ಮುಂದೆ ಭಕ್ತ ಪರವಶರಾದ ರಾಣಿ ಮುಖರ್ಜಿ

  |

  'ಮರ್ದಾನಿ-2' ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಬಾಲಿವುಡ್ ನ ಪ್ರತಿಭಾವಂತ ನಟಿ ರಾಣಿ ಮುಖರ್ಜಿ ಶಿರಡಿಗೆ ಭೇಟಿ ನೀಡಿ ಸಾಯಿ ಬಾಬಾನ ದರ್ಶನ ಪಡೆದಿದ್ದಾರೆ. ಸಾಯಿ ಬಾಬಾನ ಭಕ್ತೆ ಆಗಿರುವ ರಾಣಿ ಮುಖರ್ಜಿ ಆಗಾಗ ಶಿರಡಿ ಸಾಯಿ ಮಂದಿರಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

  'ಮರ್ದಾನಿ-2' ಚಿತ್ರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿರುವ ರಾಣಿ ಮುಖರ್ಜಿ, ಸಾಯಿ ಬಾಬಾನ ಮೂರ್ತಿ ಮುಂದೆ ಭಾವುಕರಾದರು. ಭಕ್ತ ಪರವಶರಾಗಿದ್ದ ರಾಣಿ ಮುಖರ್ಜಿ ಕಣ್ಣಾಲಿಗಳು ಒದ್ದೆ ಆದವು.

  'ಮರ್ದಾನಿ-2' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ರಾಣಿ ಮುಖರ್ಜಿ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ ಹಿಟ್ ಆಗಿದ್ದ 'ಮರ್ದಾನಿ' ಚಿತ್ರದ ಸೀಕ್ವೆಲ್ ಇದಾಗಿದ್ದು, ಇಲ್ಲಿಯವರೆಗೂ 30ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿದೆ.

  ಮೀಟೂ ಬಗ್ಗೆ ರಾಣಿ ಮುಖರ್ಜಿ ಹೇಳಿಕೆಗೆ ನೆಟ್ಟಿಗರ ಟೀಕೆಮೀಟೂ ಬಗ್ಗೆ ರಾಣಿ ಮುಖರ್ಜಿ ಹೇಳಿಕೆಗೆ ನೆಟ್ಟಿಗರ ಟೀಕೆ

  2014 ರಲ್ಲಿ ಫಿಲ್ಮ್ ಮೇಕರ್ ಆದಿತ್ಯ ಛೋಪ್ರಾ ರನ್ನ ವರಿಸಿದ ರಾಣಿ ಮುಖರ್ಜಿ, 2015 ರಲ್ಲಿ ಹೆಣ್ಣು ಮಗುವಿಗೆ ತಾಯಿಯಾದರು. ಮಗಳು ಆದಿರಾಗಾಗಿ ಮೂರು ವರ್ಷ ಚಿತ್ರರಂಗದಿಂದ ಬ್ರೇಕ್ ಪಡೆದ ರಾಣಿ ಮುಖರ್ಜಿ ಕಳೆದ ವರ್ಷ 'ಹಿಚ್ಕಿ' ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು.

  ಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿ

  ಬಾಕ್ಸ್ ಆಫೀಸ್ ನಲ್ಲಿ 'ಹಿಚ್ಕಿ' ಸಿನಿಮಾ ಕಮಾಲ್ ಮಾಡಿತು. ಇದೀಗ 'ಮರ್ದಾನಿ-2' ಕೂಡ ಹಿಟ್ ಆಗಲಿ ಅನ್ನೋದು ರಾಣಿ ಮುಖರ್ಜಿ ಬಯಕೆ.

  English summary
  Bollywood Actress Rani Mukherjee becomes emotional at Shirdi Sai Baba temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X