ರಾನು ಮೊಂಡಲ್ಗೆ ಮೋಸ ಆಗ್ತಿದೆ: ಆರೈಕೆ ಮಾಡಿದವರ ವಿರುದ್ಧವೇ ಆರೋಪ

ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರಂತೆ ಹಾಡು ಹೇಳುವ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಈಗ ದೊಡ್ಡ ಸೆಲೆಬ್ರಿಟಿ. ಹಿಮೇಶ್ ರೇಶಮಿಯಾ ಅವರ ಮೂರು ಹಾಡುಗಳಲ್ಲಿ ರಾನು ಮೊಂಡಲ್ ಹಾಡಿದ್ದಾರೆ.

ಅದಕ್ಕೆ ತಕ್ಕಂತೆ ದೊಡ್ಡ ಸಂಭಾವನೆ ಕೂಡ ನೀಡಲಾಗಿದೆಯಂತೆ. ಈಗ ರಾನು ಮೊಂಡಲ್ ಅವರಿಗೆ ಮ್ಯಾನೇಜರ್ ಕೂಡ ಇದ್ದಾರೆ. ರಾನು ಮೊಂಡಲ್ ಅವರಿಂದ ಯಾವುದೇ ಹಾಡು ಹಾಡಿಸಬೇಕು ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕು ಅಂದ್ರೆ ಈಗ ಮ್ಯಾನೇಜರ್ ಮೂಲಕ ಸಂಪರ್ಕಿಸಬೇಕಿದೆ.

ಯಾರು ದಿಕ್ಕು ದೆಸೆಯಿಲ್ಲದೆ ಅನಾಥರಂತಾಗಿದ್ದ ರಾನು ಮೊಂಡಲ್ ದಿಢೀರ್ ಅಂತ ಸೆಲೆಬ್ರಿಟಿ ಆದ್ಮೇಲೆ ಆಕೆಯ ಮಗಳು ಪ್ರತ್ಯಕ್ಷವಾಗಿದ್ದಳು. ತಾಯಿಯನ್ನ ಮನೆಗೆ ಕರೆದುಕೊಂಡು ಹೋಗಿ ಯೋಗಕ್ಷೇಮ ವಿಚಾರಿಸಿದ್ದಳು. ಆದ್ರೀಗ, ತಮ್ಮ ತಾಯಿಗೆ ಮೋಸ ಆಗ್ತಿದೆ ಎಂಬ ಆರೋಪ ಮಾಡಿದ್ದಾರೆ. ಏನದು? ಮುಂದೆ ಓದಿ....

ಈ ಕಡೆ ಬಂದ್ರೆ ಕಾಲು ಮುರಿಯುತ್ತೇನೆ

ಈ ಕಡೆ ಬಂದ್ರೆ ಕಾಲು ಮುರಿಯುತ್ತೇನೆ

ರಾನು ಮೊಂಡಲ್ ಅವರ ಮಗಳು ಎಲಿಜಿಬತ್ ಸತಿ ರಾಯ್, ರಾನು ಮ್ಯಾನೇಜರ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ''ನನ್ನ ತಾಯಿಯನ್ನ ನೋಡಲು ಬಿಡುತ್ತಿಲ್ಲ. ನೀನೇನಾದರೂ ಈ ಕಡೆ ಬಂದ್ರೆ ನಿನ್ನ ಕಾಲು ಮುರಿಯುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ'' ಎಂದು ಸತಿ ರಾಯ್ ದೂರಿದ್ದಾರೆ.

ಯಾರೋ ಹೇಳಿಕೊಟ್ಟಿರಬಹುದು

ಯಾರೋ ಹೇಳಿಕೊಟ್ಟಿರಬಹುದು

ಈ ಬಗ್ಗೆ ರಾನು ಮೊಂಡಲ್ ಮಾತನಾಡಿದ್ದು ''ಇದರಲ್ಲಿ ಏನೋ ಅಪಾರ್ಥ ಆಗಿದೆ ಅಥವಾ ಬೇರೆ ಯಾರೋ ಆಕೆಯನ್ನ ಪ್ರಚೋದಿಸುತ್ತಿದ್ದಾರೆ. ಅತೀಂದ್ರ (ರಾನು ಮೊಂಡಲ್ ಹಾಡಿನ ವಿಡಿಯೋ ಅಪ್ ಲೌಡ್ ಮಾಡಿದವರು) ಮತ್ತು ತಪನ್ (ದಾಸ್ ಕ್ಲಬ್ ಸದಸ್ಯ) ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅವರು ಸತಿಗೆ ಬೆದರಿಕೆ ಹಾಕಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ'' ಎಂದು ರಾನು ಸ್ಪಷ್ಟನೆ ನೀಡಿದ್ದಾರೆ.

50 ಸಾವಿರ ಪಡೆದು, 10 ಸಾವಿರ ಕೊಡ್ತಾರೆ

50 ಸಾವಿರ ಪಡೆದು, 10 ಸಾವಿರ ಕೊಡ್ತಾರೆ

''ಮಕ್ಕಳ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ನಮ್ಮ ತಾಯಿಗೆ 50 ಸಾವಿರ ಪಡೆದುಕೊಂಡಿದ್ದರು. ಆದರೆ, ಅವರ ಹಣವನ್ನ ಮ್ಯಾನೇಜರ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೇವಲ 10 ಸಾವಿರ ಹಣವನ್ನ ಅಮ್ಮನಿಗೆ ಕೊಟ್ಟಿದ್ದಾರೆ ಎಂದು ಹೇಳಿ, ಅದರಲ್ಲಿ ಒಂದು ಸೂಟ್ ಕೇಸ್ ಮತ್ತು ಒಂದು ಜೊತೆ ಬಟ್ಟೆ ಕೊಡಿಸಿದ್ದಾರೆ ಅಷ್ಟೆ. ಅವರ ಮೇಲೆ ನನಗೆ ನಂಬಿಕೆ ಇಲ್ಲ'' ಎಂದು ರಾನು ಮೊಂಡಲ್ ಮಗಳು ಸತಿ ರಾಯ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಕಲಾವಿದೆಗೆ ದುಡ್ಡು ಮುಖ್ಯವಲ್ಲ

ಕಲಾವಿದೆಗೆ ದುಡ್ಡು ಮುಖ್ಯವಲ್ಲ

''ಒಬ್ಬ ಕಲಾವಿದೆಯಾಗಿ ನನಗೆ ದುಡ್ಡು ಮುಖ್ಯವಲ್ಲ. ಹೆಚ್ಚಿನ ಅವಕಾಶಗಳು ಸಿಗುವುದು ಖುಷಿ ಕೊಡುತ್ತೆ. ಜೀವನಕ್ಕಾಗಿ ಒಳ್ಳೆಯ ಬಟ್ಟೆ, ಊಟ, ಇರಲು ಜಾಗವೂ ಬೇಕಾಗುತ್ತೆ. ದೇವರ ದಯೇ ಅದೆಲ್ಲವೂ ನನಗೆ ಸಿಕ್ಕಿದೆ. ಹೌದು, 10 ಸಾವಿರ ಕೊಟ್ಟರು. ಅದರಲ್ಲಿ ಮನೆಗೆ ಮತ್ತು ನನಗೆ ಬೇಕಾಗದ ಅಗತ್ಯ ವಸ್ತುಗಳನ್ನ ಖರೀದಿಸಿದ್ದೇವು'' ಎಂದು ರಾನು ಮೊಂಡಲ್ ತಿಳಿಸಿದ್ದಾರೆ.

ಇಷ್ಟು ದಿನ ಎಲ್ಲಿ ಇದ್ದರು

ಇಷ್ಟು ದಿನ ಎಲ್ಲಿ ಇದ್ದರು

ಇನ್ನು ರಾನು ಮೊಂಡಲ್ ಮಗಳು ಸತಿ ರಾಯ್ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಅತೀಂದ್ರ ''ರಾನು ಅವರಿಗೆ ಎರಡು ಮದುವೆ ಆಗಿದೆ. ಮೊದಲನೇ ಗಂಡ ನಿಧನರಾಗಿದ್ದಾರೆ. ಎರಡನೇ ಪತಿ ಮಕ್ಕಳ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ. ಇಷ್ಟು ವರ್ಷ ಈಕೆ ಎಲ್ಲಿದ್ದಳು, ನನಗೆ ಗೊತ್ತಿದೆ ರಾನು ಅವರಿಗೆ ಅಗತ್ಯವಿದ್ದಾಗ 200, 500 ರೂಪಾಯಿ ಕೊಟ್ಟಿದ್ದರು. ಆದರೆ, ಆ ಹಣದಿಂದ ಆಕೆ ಜೀವನ ನಡೆಸಲು ಸಾಧ್ಯವಿಲ್ಲ. ಆಕೆ ಸುಮ್ಮನೆ ನಮ್ಮನ್ನು ಕೆಣಕುತ್ತಿದ್ದಾಳೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Internet sensation singer Rano Mondal daughter Elizabeth Sathi Roy accused to her mother manager.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X