ರಾನು ಮೊಂಡಲ್ಗೆ ಹಿಮೇಶ್ ಕಡೆಯಿಂದ ಮತ್ತೊಂದು ಮೆಗಾ ಆಫರ್

ಕೊಲ್ಕತ್ತಾ ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ಹಾಡುವ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆದ ರಾನು ಮೊಂಡಲ್ ಈಗ ಭಾರತದ ಸ್ಟಾರ್ ಸೆಲೆಬ್ರಿಟಿಗಳಲ್ಲಿ ಒಬ್ಬರು.

ಬಾಲಿವುಡ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರೇಶಮಿಯಾ 'ತೇರಿ ಮೇರಿ ಕಹಾನಿ...' ಹಾಡು ಹಾಡಿಸುವ ಮೂಲಕ ರಾನು ಮೊಂಡಲ್ ಜೀವನ ಬದಲಿಸಿದ್ದರು. ಆ ಹಾಡು ಹಾಡಿದ್ಮೇಲೆ ರಾನು ಅವರ ಸ್ಟೇಟಸ್ ಬದಲಾಗಿದೆ.

ಹಿಮೇಶ್ ರೇಶಮಿಯಾ ಅವರಂತೆ ಅನೇಕರು ರಾನು ಮೊಂಡಲ್ ಬಳಿ ಹಾಡುಗಳನ್ನ ಹಾಡಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಭಾವನೆ ಕೊಡುವುದಾಗಿ ಆಫರ್ ನೀಡುತ್ತಿದ್ದಾರೆ. ಮೊದಲ ಸಲ ಅವಕಾಶ ಕೊಟ್ಟ ಹಿಮೇಶ್ ಈಗ ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಮುಂದೆ ಓದಿ....

ಹಿಮೇಶ್ ಜೊತೆ ಮೂರನೇ ಹಾಡು

ಹಿಮೇಶ್ ಜೊತೆ ಮೂರನೇ ಹಾಡು

'ತೇರಿ ಮೇರಿ' ಎಂದು ರಾನು ಮೊಂಡಲ್ ಹಾಡಿದ್ದ ಹಾಡಿನ ತುಣುಕು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಗುಂಗಿನಲ್ಲಿದ್ದ ಜನರಿಗೆ ರಾನು ಮೊಂಡಲ್ ಅವರಿಂದ ಎರಡನೇ ಹಾಡು ಹಾಡಿಸಿ ಮತ್ತೊಂದು ಸರ್ಪ್ರೈಸ್ ನೀಡಿದ್ದರು ಹಿಮೇಶ್. ಈಗ ಎರಡನೇ ಹಾಡಿನ ತುಣುಕನ್ನ ಎಂಜಾಯ್ ಮಾಡುವಷ್ಟರಲ್ಲಿ ಇನ್ನೊಂದು ಹಾಡು ಹಾಡಿಸಿರುವುದು ಬಹಿರಂಗವಾಗಿದೆ.

ಮೂರನೇ ಹಾಡಿಗೆ ಧ್ವನಿಯಾದ ರಾನು

ಮೂರನೇ ಹಾಡಿಗೆ ಧ್ವನಿಯಾದ ರಾನು

ಮೊದಲೆರಡು ಹಾಡು ಸೂಪರ್ ಹಿಟ್ ಆಗುವ ಸೂಚನೆ ಸಿಗುತ್ತಿದ್ದಂತೆ ಹಿಮೇಶ್ ರೇಶಮಿಯಾ ಮತ್ತಷ್ಟು ವೇಗವಾಗಿ ಮೂರನೇ ಹಾಡು ಹಾಡಿಸಿದ್ದಾರೆ.' ಆಶಿಕಿ ತೇರಿ ಮೇರಿ...' ಎಂಬ ಹಾಡನ್ನ ತಮ್ಮ ಹೊಸ ಚಿತ್ರಕ್ಕಾಗಿ ಹಾಡಿಸಿದ್ದಾರೆ. ಈ ಹಾಡಿನಲ್ಲಿ ಹಿಮೇಶ್ ಕೂಡ ಧ್ವನಿಯಾಗಿದ್ದಾರೆ. ಈ ಮೂಲಕ ಸೂಪರ್ ಸ್ಟಾರ್ ಗಾಯಕನ ಆಲ್ಬಂನಲ್ಲಿ ಮೂರು ಹಾಡುಗಳನ್ನ ಹಾಡುವ ಅದೃಷ್ಟ ರಾನು ಮೊಂಡಲ್ ಗೆ ಸಿಕ್ಕಿದೆ.

ಭಾರಿ ಸಂಭಾವನೆ ನೀಡಿರುವ ಸುದ್ದಿ

ಭಾರಿ ಸಂಭಾವನೆ ನೀಡಿರುವ ಸುದ್ದಿ

ರಾನು ಮೊಂಡಲ್ ಅವರಿಗೆ ಹಿಮೇಶ್ ರೇಶಮಿಯಾ ಭಾರಿ ಸಂಭಾವನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಹಾಡು ಹಾಡಿದ್ದಕ್ಕೆ 7 ಲಕ್ಷ ಹಾಗೂ ಎರಡನೇ ಹಾಡಿಗೆ 7 ಲಕ್ಷ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ, ಮೂರನೇ ಹಾಡಿಗೆ 10 ಲಕ್ಷ ವರೆಗೂ ಸಂಭಾವನೆ ಕೊಟ್ಟಿದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಹರಿಡಿದೆ.

ರಾನು ಜೀವನವನ್ನೇ ಬದಲಿಸಿದ ಆ ಹಾಡು

ರಾನು ಜೀವನವನ್ನೇ ಬದಲಿಸಿದ ಆ ಹಾಡು

ಅದೃಷ್ಟ ಎಂಬುದು ಯಾವಾಗ, ಹೇಗೆ ಬರುತ್ತೆ ಎನ್ನುವುದನ್ನ ಹೇಳಲು ಸಾಧ್ಯವಿಲ್ಲ. ರೈಲ್ವೆ ಸ್ಟೇಷನ್ ನಲ್ಲಿ ಒಂದು ಹೊತ್ತಿನ ಊಟಕ್ಕೆ ಇಲ್ಲದೇ ಟೈಂ ಪಾಸ್ ಗೆ ಹಾಡು ಹೇಳಿಕೊಂಡು ತಿರುಗಾಡುತ್ತಿದ್ದ ರಾನು ಇಂದು ಬಾಲಿವುಡ್ ಚಿತ್ರಜಗತ್ತಿನಲ್ಲಿ ಸ್ಟಾರ್ ಗಾಯಕಿ. ಲಕ್ ಇದ್ರೆ ಅದೃಷ್ಟ ಎನ್ನುವುದು ಬಾಗಿಲು ಒದ್ದುಕೊಂಡು ಬರುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆ.

More from Filmibeat

English summary
After teri meri kahaani and aadat, himesh reshamiya comes with his old superhit song aashiqui mein teri. Ranu mandal sings third time with himesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X