twitter
    For Quick Alerts
    ALLOW NOTIFICATIONS  
    For Daily Alerts

    ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಪ್ರವೇಶ ಮಾಡಿದ ಬಡ ಗಾಯಕಿ

    |

    Recommended Video

    ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಪ್ರವೇಶ ಮಾಡಿದ ಬಡ ಗಾಯಕಿ | Filmibeat Kannada

    ಕಳೆದ ತಿಂಗಳು ಒಬ್ಬ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ನಿಂತು ಹಿಂದಿ ಹಾಡು ಹಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಲತಾ ಮಂಗೇಶ್ಕರ್ ಹಾಡು ಹಾಡಿದ ಈ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜನಪ್ರಿಯತೆ ಪಡೆದರು.

    ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್ ಎಂಬ ಮಹಿಳೆಗೆ ಈಗ ಬಾಲಿವುಡ್ ಹಾಡು ಹಾಡುವ ಅವಕಾಶ ಸಿಕ್ಕಿದೆ. ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಆಗಿರುವ ಹಿಮೇಶ್ ರೇಶ್ಮಿಯಾ ಈ ಮಹಿಳೆಗೆ ಒಂದು ಒಳ್ಳೆಯ ಅವಕಾಶ ನೀಡಿದ್ದಾರೆ.

    ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್ ಕುಮಾರ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್ ಕುಮಾರ್

    ಹಿಮೇಶ್ ರೇಶ್ಮಿಯಾ ಒಂದು ಹಾಡನ್ನು ರಾನು ಮೊಂಡಲ್ ರಿಂದ ಹಾಡಿಸಿದ್ದಾರೆ. ತಮ್ಮ ಸ್ಟೂಡಿಯೊಗೆ ಕರೆದುಕೊಂಡು ಹೋಗಿ ಹಾಡಿನ ರೆಕಾರ್ಡಿಂಗ್ ಮಾಡಿಸಿದ್ದಾರೆ. ರಾನು ಗಾಯನ ಮೆಚ್ಚಿ ಧೈರ್ಯ ತುಂಬಿ, ಆಕೆಯಿಂದ ಈ ಹಾಡನ್ನು ಹಾಡಿಸಿದ್ದಾರೆ. 'ತೇರಿ ಮೇರಿ ಕಹಾನಿ..' ಎಂಬ ಹಾಡು ಇದಾಗಿದೆ.

    Ranu Mondal Sings Bollywood Song

    ರಾನು ಮೊಂಡಲ್ ಹಾಡನ್ನು ತಮ್ಮ ಇನ್ಸ್ಟಾಗ್ರಾಮ್ ಹಿಮೇಶ್ ರೇಶ್ಮಿಯಾ ಹಂಚಿಕೊಂಡಿದ್ದಾರೆ. ಹಿಮೇಶ್ ಮಾಡಿರುವ ಒಳ್ಳೆಯ ಕೆಲಸಕ್ಕೆ ದೊಡ್ಡ ಮೆಚ್ಚುಗೆ ಸಿಗುತ್ತದೆ. ರಾನು ಮೊಂಡಲ್ ಹಾಡಿನ ಝಲಕ್ ತುಂಬ ಚೆನ್ನಾಗಿದೆ. ಪೂರ್ಣ ಹಾಡು ಕೇಳುವ ಆಸೆಯನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಶರ್ಮಾ ಬಾಯಲ್ಲಿ ಕನ್ನಡ ಪದ: ನಿಜಕ್ಕೂ ಕನ್ನಡ ಬಳಸಿದ್ರಾ ಕೊಹ್ಲಿ ಪತ್ನಿ? ಅನುಷ್ಕಾ ಶರ್ಮಾ ಬಾಯಲ್ಲಿ ಕನ್ನಡ ಪದ: ನಿಜಕ್ಕೂ ಕನ್ನಡ ಬಳಸಿದ್ರಾ ಕೊಹ್ಲಿ ಪತ್ನಿ?

    ಜುಲೈ ತಿಂಗಳಿನಲ್ಲಿ ಪಶ್ವಿಮ ಬಂಗಾಳದ ರಣಫಾಟ್ ನಲ್ಲಿ ರಾನು ಮೊಂಡಲ್ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿತ್ತು. ನಂತರ ಒಂದು ರಿಯಾಲಿಟಿ ಶೋದಲ್ಲಿ ಹಾಡುವ ಅವಕಾಶವೂ ಅವರಿಗೆ ಬಂದಿತ್ತು.

    Read more about: himesh reshamiya
    English summary
    Ranu Mondal from Ranaghat sings bollywood song under Himesh Reshammiya music.
    Saturday, August 24, 2019, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X