ಅನುಷ್ಕಾ-ವಿರಾಟ್ ಜೋಡಿಗೆ ಉಡುಗೊರೆ ಕಳುಹಿಸಿದ ಲವ್ ಬರ್ಡ್ಸ್
ನೂತನ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸದ್ಯ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಇವರಿಬ್ಬರಿಗೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿಶೇಷವಾದ ಉಡುಗೊರೆ ಕಳುಹಿಸಿ ಶುಭಕೋರಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸ್ನೇಹಿತೆ ಅನುಷ್ಕಾಗೆ ಮದುವೆ ವಿಶ್ ಮಾಡಿಲ್ಲ ಎನ್ನಲಾಗಿತ್ತು. ಆದ್ರೀಗ, ಸ್ಪೆಷಲ್ ಗಿಫ್ಟ್ ನೀಡುವುದರ ಮೂಲಕ ವಿರುಷ್ಕಾ ಜೋಡಿಗೆ ಹಾರೈಸಿದ್ದಾರೆ. ಹೂವಿನ ಗುಚ್ಛದ ಜೊತೆಗೆ ಒಂದು ಪತ್ರವನ್ನ ನವಜೋಡಿಗೆ ಕಳುಹಿಸಿ ವಿಶೇಷವಾಗಿ ಶುಭಕೋರಿದ್ದಾರೆ ಬಾಲಿವುಡ್ ಲವ್ ಬರ್ಡ್ಸ್.

ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅನುಷ್ಕಾ ಮತ್ತು ವಿರಾಟ್ ಸದ್ಯ ರೋಮ್ ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದಾರೆ. ಈ ಹಿಂದೆ ರಣ್ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು. ಮತ್ತೊಂದೆಡೆ ದೀಪಿಕಾ ಮತ್ತು ರಣ್ವೀರ್ ಈಗ ಲವ್ ನಲ್ಲಿದ್ದಾರೆ. ಮದುವೆ ಕೂಡ ಆಗಲಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಒಟ್ಟಿಗೆ ಬೇರೆ ವಿಶ್ ಮಾಡಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಇನ್ನು ಡಿಸೆಂಬರ್ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ನೂತನ ದಂಪತಿಯ ಆರತಕ್ಷತೆ ಅಯೋಜಿಸಲಾಗಿದೆ.


Click it and Unblock the Notifications











