twitter
    For Quick Alerts
    ALLOW NOTIFICATIONS  
    For Daily Alerts

    ಅನುಷ್ಕಾ-ವಿರಾಟ್ ಜೋಡಿಗೆ ಉಡುಗೊರೆ ಕಳುಹಿಸಿದ ಲವ್ ಬರ್ಡ್ಸ್

    By Bharath Kumar
    |

    ನೂತನ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸದ್ಯ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಇವರಿಬ್ಬರಿಗೆ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿಶೇಷವಾದ ಉಡುಗೊರೆ ಕಳುಹಿಸಿ ಶುಭಕೋರಿದ್ದಾರೆ.

    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸ್ನೇಹಿತೆ ಅನುಷ್ಕಾಗೆ ಮದುವೆ ವಿಶ್ ಮಾಡಿಲ್ಲ ಎನ್ನಲಾಗಿತ್ತು. ಆದ್ರೀಗ, ಸ್ಪೆಷಲ್ ಗಿಫ್ಟ್ ನೀಡುವುದರ ಮೂಲಕ ವಿರುಷ್ಕಾ ಜೋಡಿಗೆ ಹಾರೈಸಿದ್ದಾರೆ. ಹೂವಿನ ಗುಚ್ಛದ ಜೊತೆಗೆ ಒಂದು ಪತ್ರವನ್ನ ನವಜೋಡಿಗೆ ಕಳುಹಿಸಿ ವಿಶೇಷವಾಗಿ ಶುಭಕೋರಿದ್ದಾರೆ ಬಾಲಿವುಡ್ ಲವ್ ಬರ್ಡ್ಸ್.

    ಅನುಷ್ಕಾಗೆ ವಿರಾಟ್ ತೊಡಿಸಿರುವ ಉಂಗುರದ ಬೆಲೆ ಎಷ್ಟು? ಅನುಷ್ಕಾಗೆ ವಿರಾಟ್ ತೊಡಿಸಿರುವ ಉಂಗುರದ ಬೆಲೆ ಎಷ್ಟು?

    Ranveer and Deepika sent wedding gift to Virat and Anushka


    ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅನುಷ್ಕಾ ಮತ್ತು ವಿರಾಟ್ ಸದ್ಯ ರೋಮ್ ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದಾರೆ. ಈ ಹಿಂದೆ ರಣ್ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು. ಮತ್ತೊಂದೆಡೆ ದೀಪಿಕಾ ಮತ್ತು ರಣ್ವೀರ್ ಈಗ ಲವ್ ನಲ್ಲಿದ್ದಾರೆ. ಮದುವೆ ಕೂಡ ಆಗಲಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಒಟ್ಟಿಗೆ ಬೇರೆ ವಿಶ್ ಮಾಡಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

    ಇನ್ನು ಡಿಸೆಂಬರ್ 21 ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ನೂತನ ದಂಪತಿಯ ಆರತಕ್ಷತೆ ಅಯೋಜಿಸಲಾಗಿದೆ.

    English summary
    Ranveer Singh and Deepika Padukone have sent Virat Kohli and Anushka Sharma a bouquet of flowers along with a handwritten note. ಅನುಷ್ಕಾ ಮತ್ತು ವಿರಾಟ್ ಜೋಡಿಗೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಬ್ಬರು ವಿಶೇಷ ಉಡುಗೊರೆ ಕಳುಹಿಸಿದ್ದಾರೆ.
    Saturday, December 16, 2017, 19:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X