For Quick Alerts
  ALLOW NOTIFICATIONS  
  For Daily Alerts

  ರಣ್ವೀರ್-ದೀಪಿಕಾ ದಂಪತಿ ಜೊತೆ ರಣಬೀರ್ ಮತ್ತು ಅಲಿಯಾ ಜೋಡಿಯ ಸಫಾರಿ ಫೋಟೋ ವೈರಲ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟ ರಣ್ವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ದಂಪತಿ ರಾಜಸ್ಥಾನದಲ್ಲಿ ಬೀಡುಬಿಟ್ಟಿದ್ದಾರೆ. ವಿಶೇಷ ಎಂದರೆ ದೀಪಿಕಾ ದಂಪತಿ ಜೊತೆ ಬಾಲಿವುಡ್ ನ ಜೋಡಿ ಹಕ್ಕಿಗಳಾದ ರಣಬೀರ್ ಮತ್ತು ಅಲಿಯಾ ಭಟ್ ಸಹ ರಾಜಸ್ಥಾನದಲ್ಲಿದ್ದಾರೆ.

  ಜೈಪುರದ ರಣತಂಬೂರ್ ನಲ್ಲಿ ತಂಗಿರುವ ರಣ್ವೀರ್ ದಂಪತಿ ಮತ್ತು ಅಲಿಯಾ ಹಾಗೂ ರಣಬೀರ್ ಜೋಡಿ ಹೊಸ ವರ್ಷವನ್ನು ಒಟ್ಟಿಗೆ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಇವರ ಜೈಪುರ ಪ್ರವಾಸದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿ ಸಿನಿಮಾ ಮಂದಿ ಮಾಲ್ಡೀವ್ಸ್ ಕಡೆ ಪ್ರವಾಸ ಬೆಳೆಸಿದ್ರೆ, ರಣ್ವೀರ್ ದಂಪತಿ ಮತ್ತು ಅಲಿಯಾ ಜೋಡಿ ಜೈಪುರ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

  ಟ್ವಿಟ್ಟರ್-ಇನ್ಸ್ಟಾಗ್ರಾಮ್ ನ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿ ಆಡಿಯೋ ಸಂದೇಶ ರವಾನಿಸಿದ ದೀಪಿಕಾಟ್ವಿಟ್ಟರ್-ಇನ್ಸ್ಟಾಗ್ರಾಮ್ ನ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿ ಆಡಿಯೋ ಸಂದೇಶ ರವಾನಿಸಿದ ದೀಪಿಕಾ

  ಈ ನಾಲ್ಕು ಜನ ಸಫಾರಿ ಹೋಗಿರುವ ಫೋಟೋಗಳು ಮತ್ತು ವಿಡಿಯೋಗಳು ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಈ ನಾಲ್ಕು ಮಂದಿ ಮಾತ್ರವಲ್ಲದೆ ನಾಲ್ಕು ಮಂದಿಯ ಕುಟುಂಬದವರು ಸಹ ರಾಜಸ್ಥಾನದಲ್ಲಿದ್ದಾರೆ. ಎಲ್ಲರೂ ಒಟ್ಟಿಗೆ ಸಫಾರಿ ಹೋಗಿರುವ ವಿಡಿಯೋ ವೈರಲ್ ಆಗಿದೆ.

  ಸುಮಾರು ಒಂದು ವಾರಗಳಿಂದ ಜೈಪುರದಲ್ಲಿ ಬೀಡಿಬಿಟ್ಟಿರುವ ಇವರು ಇಂದು ಮುಂಬೈಗೆ ವಾಪಸ್ ಆಗುವ ಸಾಧ್ಯತೆ ಇದೆ. ಕುಟುಂಬ ಸಮೇತರಾಗಿ ಎಲ್ಲರೂ ಜೈಪುರಕ್ಕೆ ತೆರಳುತ್ತಿದ್ದಂತೆ, ಅಲಿಯಾ ಮತ್ತು ರಣಬೀರ್ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ರಣಬೀರ್ ಕಪೂರ್ ಕುಟುಂಬದವರು ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು.

  ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್ | Filmibaet Kannada

  ಇನ್ನು ನಟಿ ದೀಪಿಕಾ ಡಿಸೆಂಬರ್ 31ರ ರಾತ್ರಿ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಬಳಿಕ ಆಡಿಯೋ ಸಂದೇಶ ಕಳುಹಿಸುವ ಮೂಲಕ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಈ ಮೂಲಕ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ.

  English summary
  Bollywood Actor Ranveer Singh, Deepika Padukone, Ranbir Kapoor and Ranveer Singh enjoy a safari at Ranthamboore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X