ರಣ್ವೀರ್ ಸಿಂಗ್ ಧರಿಸಿದ್ದ ಈ ಸ್ವೆಟ್ ಶರ್ಟ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ?
ಬಾಲಿವುಡ್ ನಟ ರಣ್ವೀರ್ ಸಿಂಗ್ ಚಿತ್ರವಿಚಿತ್ರ ಬಟ್ಟೆ ಧರಿಸುವ ಮೂಲಕ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸಾರ್ವಜನಿಕ ಸ್ಥಳ, ಪಾರ್ಟಿ, ಸಮಾರಂಭಗಳಲ್ಲಿ ರಣ್ವೀರ್ ತೊಡುವ ಉಡುಪು ಪ್ರಮುಖ ಆಕರ್ಷಣೆಯಾಗಿರುತ್ತದೆ. ಈಗಾಗಲೇ ಹಲವು ಬಾರಿ ವಿಭಿನ್ನ, ವಿಚಿತ್ರ, ವರ್ಣರಂಜಿತ ಬಟ್ಟೆಗಳನ್ನು ತೊಟ್ಟು ಬೆರಗುಗೊಳಿಸಿರುವ ರಣ್ವೀರ್ ಇತ್ತೀಚಿಗೆ ಮತ್ತೊಮ್ಮೆ ವಿಚಿತ್ರ ಡ್ರೆಸ್ ತೊಟ್ಟು ಚರ್ಚೆಗಿದ್ದರು.
ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಮಾದರಿಯ ಉಡುಪು ತೊಟ್ಟಿದ್ದ ರಣ್ವೀರ್ ಸಿಂಗ್ ಕತ್ತಿನಲ್ಲಿ ಹಾರ ಧರಿಸಿದ್ದರು. ಚಿನ್ನದ ಬಣ್ಣದ ದೊಡ್ಡ ಹಾರ ಧರಿಸಿದ್ದು, ಕೈಯಲ್ಲಿ ಕಪ್ಪು ಬಣ್ಣದ ಲೆದರ್ ಬ್ಯಾಗ್ ಹಿಡಿದಿದ್ದರು. ಕಣ್ಣಿಗೆ ಕನ್ನಡ ಹಾಗೂ ತಲೆಗೆ ಟೋಪಿ ಹಾಕಿ ಬಹಳ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಆಕರ್ಷಕ ಬಟ್ಟೆ ಕೆಂಪು ಬಣ್ಣದ ಸ್ವೆಟ್ ಶರ್ಟ್ ಮತ್ತು ಬೆಲ್ ಬಾಟಂ ಪ್ಯಾಂಟ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮುಂದೆ ಓದಿ...

ದುಬಾರಿ ಬೆಲೆಯ ಸ್ವೆಟ್ ಶರ್ಟ್ ಧರಿಸಿರುವ ರಣ್ವೀರ್
ರಣ್ವೀರ್ ಸಿಂಗ್ ಕೆಂಪು ಬಣ್ಣದ ಸ್ವೆಟ್ ಶರ್ಟ್ ಮತ್ತು ಬೆಲ್ ಬಾಟಂ ಪ್ಯಾಂಟ್ ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮತ್ತೆ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ರಣ್ವೀರ್ ಧರಿಸಿದ್ದ ಈ ಉಡುಪು ಕೂಡ ಅಭಿಮಾನಿಗಳ ಗಮನಸೆಳೆಯುತ್ತಿದೆ. ನೋಡಲು ವಿಭಿನ್ನವಾಗಿರುವುದ್ದಲ್ಲದೇ ಬಟ್ಟೆಯ ಬೆಲೆ ಕೂಡ ಅಷ್ಟೇ ದುಬಾರಿಯಾಗಿದೆ.

ಕೆಂಪು ಬಣ್ಣದ ಶೈನಿ ಸ್ವೆಟ್ ಶರ್ಟ್ ಬೆಲೆ ಎಷ್ಟು?
ರಣ್ವೀರ್ ಧರಿಸಿದ ಕೆಂಪು ಬಣ್ಣದ ಶೈನಿ ಸ್ವೆಟ್ ಶರ್ಟ್ ಬೆಲೆ ಬರೋಬ್ಬರಿ 1.15 ಲಕ್ಷ ರೂ. ಎಂದು ಆಂಗ್ರ ಮಾಧ್ಯಮಗಳು ವರದಿ ಮಾಡಿವೆ. ಸೂಪರ್ ದುಬಾರಿ ಸ್ವೆಟ್ ಶರ್ಟ್ ಜೊತೆಗೆ ಕಂದು ಬಣ್ಣದ ವೆಲ್ವೆಟ್ ಬೆಲ್ ಬಾಟಂ ಪ್ಯಾಂಟ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಬೆಲೆ 4 ಲಕ್ಷ ರೂ.
ಇತ್ತೀಚಿಗೆ ರಣ್ವೀರ್ ಧರಿಸಿದ್ದ ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಮಾದರಿಯ ಉಡುಪಿನ ಬೆಲೆ ಸ್ಟೈಲಿಶ್ ಉಡುಪಿನ ಬೆಲೆ ಒಟ್ಟು 4 ಲಕ್ಷ ರೂಪಾಯಿ. ನೋಡೋಕೆ ವಿಚಿತ್ರ ಎನಿಸಿದರೂ ರಣ್ವೀರ್ ಧರಿಸುವ ಬಟ್ಟೆಯ ಬೆಲೆ ಅತ್ಯಂತ ದುಬಾರಿಯಾಗಿರುತ್ತೆ.
Recommended Video

ರಣ್ವೀರ್ ಸಿಂಗ್ ಸಿನಿಮಾಗಳು
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಣ್ವೀರ್ ಸದ್ಯ 83 ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ದೀಪಿಕಾ ಪಡುಕೋಣೆ ಸಹ ಕಾಣಿಸಿಕೊಂಡಿದ್ದಾರೆ. ಸೂರ್ಯವಂಶ್, ಜಯೇಶ್ ಭಾಯ್ ಜೋರ್ದಾರ್, ಸರ್ಕಸ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ತಮಿಳಿನ ಸೂಪರ್ ಹಿಟ್ ಅನ್ನಿಯನ್ ರಿಮೇಕ್ ಸಿನಿಮಾಗಳು ರಣ್ವೀರ್ ಕೈಯಲ್ಲಿವೆ.


Click it and Unblock the Notifications











