For Quick Alerts
  ALLOW NOTIFICATIONS  
  For Daily Alerts

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ದಂಪತಿ

  |

  ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿರತ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಆತಂಕ ಸೃಷ್ಟಿಸಿದೆ. ಈಗಾಗಲೇ ಭಾರತದ ಅನೇಕ ರಾಜ್ಯಗಳಲ್ಲಿ, ಅನೇಕ ಕಡೆ 15 ದಿಗಳ ಕರ್ಫ್ಯೂ ಜಾರಿ ಮಾಡಲಾಗಿದೆ.

  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಡೀ ರಾಜ್ಯದಲ್ಲಿ 15 ದಿನಗಳ ಜನತಾ ಕರ್ಫ್ಯೂ ಘೋಷಿಸಿದ್ದಾರೆ. ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸರ್ಕಾರ ಜಾರಿ ತಂದಿದೆ. ಹಾಗಾಗಿ ಅನೇಕರು ಮುಂಬೈ ತೊರೆಯುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸಹ ವಿರಾಮ ಪಡೆಯಲು ಮುಂಬೈನಿಂದ ಬೇರೆ ಊರುಗಳಿಗೆ ಹಾರುತ್ತಿದ್ದಾರೆ.

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಹೈದರಾಬಾದ್‌ಗೆ ಹಾರಿದ ರಶ್ಮಿಕಾಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಹೈದರಾಬಾದ್‌ಗೆ ಹಾರಿದ ರಶ್ಮಿಕಾ

  ಇದೀಗ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ತಂದೆ-ತಾಯಿ ಜೊತೆ ಇರಲು ದೀಪಿಕಾ ಪತಿ ಜೊತೆ ತನ್ನ ತವರಿಗೆ ಮರಳಿದ್ದಾರೆ. ಸದ್ಯ ಶೂಟಿಂಗ್ ಇಲ್ಲದ ಕಾರಣ ದೀಪಿಕಾ ಮತ್ತ ರಣ್ವೀರ್ ಸಿಂಗ್ ದಂಪತಿ ಬೆಂಗಳೂರಿನಲ್ಲಿ ಸಮಯ ಕಳೆಯಲಿದ್ದಾರೆ.

  ಬೆಂಗಳೂರಿನಲ್ಲೂ ಸದ್ಯ ಕರ್ಫ್ಯೂ ಇದ್ದು ರಾತ್ರಿ ಮಾತ್ರ ಜಾರಿಯಲ್ಲಿದೆ. ಏಪ್ರಿಲ್ 20ರ ವರೆಗೂ ಮುಂದುವರೆಯಲಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ಮುಂಬೈ ಬಿಟ್ಟು ಹೈದರಾಬಾದ್ ಹಾರಿದ್ದಾರೆ. ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಮುಂಬೈನಲ್ಲಿ ಕರ್ಫ್ಯೂ ಜಾರಿ ಆಗುತ್ತಿದ್ದಂತೆ ಹೈದರಾಬಾದ್ ಫ್ಲೈಟ್ ಹತ್ತಿದ್ದಾರೆ.

  ಮರ ಕಡಿದು ಹೆಲಿ ಟೂರಿಸಂ ಮಾಡೋ ಸರ್ಕಾರದ ಯೋಜನೆಗೆ ದುನಿಯಾ ವಿಜಯ್ ಆಕ್ಷೇಪ | Filmibeat Kannada

  ಚಿತ್ರೀಕರಣ ಮತ್ತು ಸಿನಿಮಾ ಪ್ರದರ್ಶನ ಸೇರಿದಂತೆ ಸಿನಿಮಾ ಕೆಲಸಗಳು ಮತ್ತೆ ಸ್ಥಗಿತವಾಗಿದೆ. ಸದ್ಯ ಸಾಲು ಸಾಲು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಆದರೀಗ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆ ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದಕ್ಕೆ ಹಾಕುತ್ತಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಲಾಕ್ ಡೌನ್ ಆಗುತ್ತಾ ಎನ್ನುವ ಭಯದಲ್ಲಿದ್ದಾರೆ ಜನ.

  English summary
  Ranveer Singh and Deepika Padukone head to Bengaluru as Janata curfew takes effect in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X