ದೀಪಾವಳಿ ಸಂಭ್ರಮದಲ್ಲಿ ಮಗಳ ಹೆಸರು, ಅದರ ಅರ್ಥ ಹೇಳಿದ ದೀಪಿಕಾ ಪಡುಕೋಣೆ

ಬಹುಭಾಷಾ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಮುದ್ದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಸಿನಿಮಾಗಳಿಂದ ವಿರಾಮ ಪಡೆದು ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ರಣ್ವೀರ್ ಹಾಗೂ ದೀಪಿಕಾ ನಟನೆಯ 'ಸಿಂಗಂ ಅಗೇನ್' ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದೆ.

ಮದುವೆ ಆಗಿ 6 ವರ್ಷಗಳ ಬಳಿಕ ದೀಪಿಕಾ ಪಡುಕೋಣೆ ತಾವು ಗರ್ಭಿಣಿ ಆಗಿರುವ ವಿಚಾರ ಹಂಚಿಕೊಂಡಿದ್ದರು. ಬಳಿಕ ತೆಲುಗಿನ 'ಕಲ್ಕಿ 2898 AD' ಸಿನಿಮಾ ಪ್ರಚಾರದಲ್ಲಿ ಕೂಡ ಭಾಗಿ ಆಗಿದ್ದರು. ಕೆಲ ಅದ್ಧೂರಿ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು. ಅಂಬಾನಿ ಮನೆ ಮದುವೆ ಸಂಭ್ರಮದಲ್ಲಿ ಕೂಡ ಹಾಜರಾಗಿ ಖುಷಿಪಟ್ಟಿದ್ದರು. ಡಿಪ್ಪಿ ಬೇಬಿ ಬಂಪ್ ಫೋಟೊಶೂಟ್ ಸಹ ವೈರಲ್ ಆಗಿತ್ತು.

Ranveer singh and Deepika Padukone names their baby girl

ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಗಣೇಶ ಹಬ್ಬದ ಸಂಭ್ರಮದಲ್ಲಿ ಹೆರಿಗೆ ಆಗಿದ್ದಕ್ಕೆ ಕುಟುಂಬ ಸದಸ್ಯರು ಖುಷಿಯಾಗಿದ್ದರು. ದೀಪಿಕಾ ಗರ್ಭಿಣಿ ಎನ್ನುವುದೆಲ್ಲಾ ಸುಳ್ಳು ಎಂದು ಕೆಲವರು ಕೊಂಕು ಆಡಿದ್ದರು. ಬೇಬಿ ಬಂಪ್ ಫೋಟೋಶೂಟ್ ವೈರಲ್ ಆಗಿತ್ತು. ಸದ್ಯ ಡಿಪ್ಪಿ ಮಡಿಲಲ್ಲಿ ಜ್ಯೂನಿಯಲ್ ಡಿಪ್ಪಿ ನಗು, ಅಳು ಕೇಳಿಸುತ್ತಿದೆ.

ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಣ್ವೀರ್- ದೀಪಿಕಾ ದಂಪತಿ ಮಗಳಿಗೆ ನಾಮಕರಣ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ. ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದಾರೆ. ಹೆಸರಿನ ಅರ್ಥವನ್ನು ದೀಪಿಕಾ ಬಹಿರಂಗಪಡಿಸಿದ್ದಾರೆ. "ದುವಾ ಎಂದರೆ ಪ್ರಾರ್ಥನೆ ಎನ್ನುವ ಅರ್ಥವಿದೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ" ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲೊ ಪೋಸ್ಟ್ ಮಾಡಿದ್ದಾರೆ.

ನಟ ರಣ್‌ವೀರ್ ಸಿಂಗ್ ಭವ್ನಾನಿ ಮುಂಬೈನಲ್ಲಿ ನೆಲೆಸಿರುವ ಸಿಂಧಿ ಹಾಗೂ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ರಣ್‌ವೀರ್ ಅಜ್ಜಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಖ್ಯಾತ ಬ್ಯಾಡ್ಮಿಟನ್ ಆಟಗಾರ ಪ್ರಕಾಶ್ ಪಡುಕೋಣೆ ಪುತ್ರಿ ದೀಪಿಕಾ ಪಡುಕೋಣೆ. ಹಾಗಾಗಿ ಎರಡೂ ಕುಟುಂಬಗಳ ಹೆಸರನ್ನು ಸೇರಿಸಿ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ದೀಪಿಕಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಮಗಳಿಗಾಗಿ ಕೆಲ ತಿಂಗಳು ವಿರಾಮ ಪಡೆಯುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ಅಗೇನ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಣ್‌ವೀರ್ ಸಿಂಗ್ ಅಬ್ಬರಿಸಿದ್ದಾರೆ. ಚುಲ್‌ಬುಲ್ ಪಾಂಡೆಯಾಗಿ ಸಲ್ಮಾನ್ ಖಾನ್ ಗೆಸ್ಟ್ ಅಪಿಯರೆನ್ಸ್ ಕೂಡ ಇದೆ. ಚಿತ್ರದಲ್ಲಿ ಡಿಸಿಪಿ ಶಕ್ತಿ ಶೆಟ್ಟಿ ಎನ್ನುವ ಪಾತ್ರದಲ್ಲಿ ಡಿಪ್ಪಿ ಖಾಕಿ ಖದರ್ ತೋರಿಸಿದ್ದಾರೆ. ಕರೀನಾ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ.

ಇದೇ ವರ್ಷ ಪ್ರಭಾಸ್ ನಟನೆಯ 'ಕಲ್ಕಿ 2898 AD' ಚಿತ್ರದಲ್ಲಿ ಸುಮತಿ ಎಂಬ ಪಾತ್ರದಲ್ಲಿ ದೀಪಿಕಾ ನಟಿಸಿದ್ದರು. ಚಿತ್ರದಲ್ಲಿ ಕೂಡ ಗರ್ಭಿಣಿಯಾಗಿಯೇ ಕಾಣಿಸಿಕೊಂಡಿದ್ದು ವಿಶೇಷ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಸೀಕ್ವೆಲ್ ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ದೀಪಿಕಾ ಪಡುಕೋಣೆ ಮೊದಲಿಗೆ ಕನ್ನಡದ 'ಐಶ್ವರ್ಯ' ಚಿತ್ರದಲ್ಲಿ ನಟಿಸಿದ್ದರು. ಬಳಿಕ 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಮುಂದೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಬಾಲಿವುಡ್ ಟಾಪ್ ಹೀರೋಯಿನ್ ಪಟ್ಟಕ್ಕೆ ಏರಿದರು.

More from Filmibeat

English summary
Ranveer singh and Deepika Padukone's baby girl name and meaning revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X