ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ರಣ್ವೀರ್ ದಂಪತಿ: ದೀಪಿಕಾ ಗರ್ಭಿಣಿನಾ? ನೆಟ್ಟಿಗರ ಪ್ರಶ್ನೆ

ಬಾಲಿವುಡ್‌ನ ಸ್ಟಾರ್ ಕಪಲ್ ಗಳಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಜೋಡಿ ಕೂಡ ಒಂದು. ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಈ ಜೋಡಿ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ರಣ್ವೀರ್ ಮತ್ತು ದೀಪಿಕಾ ದಂಪತಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.

ಶನಿವಾರ ರಣ್ವೀರ್ ಮತ್ತು ದೀಪಿಕಾ ಮುಂಬೈನ ಖರ್‌ನಲ್ಲಿರುವ ಹಿಂದೂಜ ಆಸ್ಪತ್ರೆಗೆ ಭೇಟಿ ನೀಡಿದ್ದರು. ರಣ್ವೀರ್ ಬಿಳಿ ಬಣ್ಣದ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡರೆ, ದೀಪಿಕಾ ಕಪ್ಪು ಬಣ್ಣದ ಉಡುಪಿನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಇಬ್ಬರು ಆಸ್ಪತ್ರೆಯಿಂದ ಹೊರಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ದಂಪತಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಆತಂಕದ ಜೊತೆಗೆ ದಿಪೀಕಾ ಗರ್ಭಿಣಿನಾ ಎನ್ನುವ ಪ್ರಶ್ನೆ ಮೂಡಿದೆ. ಅನೇಕರು ಕಾಮೆಂಟ್ ಮಾಡಿ ದೀಪಿಕಾ ಗರ್ಭಿಣಿನಾ ಎಂದು ಕೇಳುತ್ತಿದ್ದಾರೆ. ಅಂದಹಾಗೆ ದೀಪಿಕಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂದರೆ 2019ರಲ್ಲೂ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೀಪಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು.

Ranveer Singh and Deepika Padukone spotted outside Mumbai hospital

ಆದರೆ ಕೆಲವು ತಿಂಗಳ ಬಳಿಕ ದೀಪಿಕಾ ಗರ್ಭಿಣಿ ಎನ್ನುವ ಗಾಳಿಸುದ್ದಿ ಬಗ್ಗೆ ಮೌನ ಮುರಿದಿದ್ದರು. ಸುಳ್ಳು ಸುದ್ದಿ ಸ್ಪಷ್ಟನೆ ನೀಡಿದ್ದರು. "ಸಂಭವಿಸಬೇಕಾದಾಗ ಅದು ಸಂಭವಿಸುತ್ತದೆ" ಎಂದು ಖಡಕ್ ಆಗಿ ಹೇಳಿದ್ದರು. ಯಾವಾಗ ಆಗಬೇಕೊ ಆಗ ಆಗುತ್ತೆ ಎಂದು ಉತ್ತರಿಸುವ ಮೂಲಕ ಗಾಳಿಸುದ್ದಿದೆ ಬ್ರೇಕ್ ಹಾಕಿದ್ದರು. ಇದೀಗ ಮತ್ತೆ ಗರ್ಭಿಣಿ ಆಗಿದ್ದಾರಾ ಎನ್ನುವ ಸುದ್ದಿ ವೈರಲ್ ಆಗಿದೆ.

ಇನ್ನು ಕೆಲವು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ದಂಪತಿ ದಿಢೀರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರ ಹಿಂದೆ ಅನಾರೋಗ್ಯ ಕಾಡುತ್ತಿದ್ದೆಯಾ ಎಂದು ಕೇಳುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ದೀಪಿಕಾ ದಂಪತಿ ಪ್ರತಿಕ್ರಿಯೆ ನೀಡಿಲ್ಲ.

ಅಂದಹಾಗೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಪ್ರೀತಿಸಿ ಮದುವೆಯಾದವರು. 2018ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೊದಲ ಬಾರಿಗೆ ರಣ್ವೀರ್ ಮತ್ತು ದೀಪಿಕಾ 'ಗೋಲಿಯೋನ್ ಕಿ ರಾಸ್ಲೀಲ ರಾಮ್ ಲೀಲಾ' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಬಂದರು. ಇದೇ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದರು. ಮೊದಲ ನೋಟದಲ್ಲೇ ದೀಪಿಕಾಗೆ ರಣ್ವೀರ್ ಸಿಂಗ್ ಮೇಲೆ ಲವ್ ಆಗಿತ್ತು ಎಂದು ದೀಪಿಕಾ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು.

ರಾಮ್-ಲೀಲಾ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಸಿನಿಮಾ. ತೆರೆಮೇಲಿನ ಇಬ್ಬರ ಕೆಮಿಸ್ಟ್ರಿ ರಿಯಲ್ ಲೈಫ್‌ನಲ್ಲೂ ಪ್ರೇಮಿಗಳು ಎಂದು ನಂಬುವ ಹಾಗೆ ಮಾಡಿತ್ತು. 2013ರಲ್ಲಿ ರಾಮ್-ಲೀಲಾ ಸಿನಿಮಾ ಬಿಡುಗಡೆಯಾಗಿದ್ದು, ಬಿಡುಗಡೆ ಬಳಿಕ ಇಬ್ಬರ ಪ್ರೀತಿ-ಪ್ರೇಮದ ವಿಚಾರ ಗುಟ್ಟಾಗಿ ಉಳಿಲಿಲ್ಲ.

ಮದುವೆಗೂ ನಾಲ್ಕು ವರ್ಷಗಳ ಮುಂಚೆಯೇ ದೀಪಿಕಾ ಮತ್ತು ರಣ್ವೀರ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. "ನಾವು ನಾಲ್ಕು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಡಿದ್ದೆವು. ಇದು ಯಾರಿಗೂ ತಿಳಿದಿರಲಿಲ್ಲ. ನಮ್ಮ ಪೋಷಕರು ಮತ್ತು ರಣ್ವೀರ್ ಸಿಂಗ್ ಪೋಷಕರು ಹಾಗೂ ಸಹೋದರಿಯರಿಗೆ ಮಾತ್ರ ತಿಳಿದಿದ್ದು" ಎಂದು ದೀಪಿಕಾ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು.

2018ರಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಟಲಿಯಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ಏರ್ಪಡಿಸಿದ್ದರು. ಚಿತ್ರರಂಗದ ಗಣ್ಯರು ಸೇರಿದಂತೆ ಬಹುತೇಕ ಎಲ್ಲಾ ರಂಗದ ಗಣ್ಯರು ಭಾಗಿಯಾಗಿ ದೀಪಿಕಾ ರಣ್ವೀರ್ ಜೋಡಿಗೆ ಶುಭಹಾರೈಸಿದ್ದರು.

ದೀಪಿಕಾ ಮತ್ತು ರಣ್ವೀರ್ ರಾಮ್ ಲೀಲಾ ಬಳಿಕ ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಲ್ಲಿ ಒಟ್ಟಿಗೆನಟಿಸಿದ್ದಾರೆ. ಸದ್ಯ ಈ ಜೋಡಿ ಕ್ರಿಕೆಟ್ ಆಧಾರಿತ '83' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೆ ದೀಪಿಕಾ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.

More from Filmibeat

English summary
Bollywood star couple Ranveer Singh and Deepika Padukone spotted outside Mumbai hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X