»   » ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು

ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು

Posted By:
Subscribe to Filmibeat Kannada

ಬಿಟೌನ್ ನಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ ಪ್ರಣಯ ಹಕ್ಕಿಗಳು ಎಂದರೆ ಅದು 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಜೋಡಿ ರಣವೀರ್ ಸಿಂಗ್ ಮತ್ತು ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ.

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ನೂತನ ಜೀವನಕ್ಕೆ ನಾಂದಿ ಹಾಡುತ್ತಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ಡಿಪ್ಪಿ ಮತ್ತು ರಣವೀರ್ ಸಿಂಗ್ ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾರೆ.[ರಣವೀರ್-ದೀಪಿಕಾ ನಡುವೆ ಏನಿಲ್ಲ, ಏನೇನಿಲ್ಲ!]

Ranveer Singh and Deepika Padukone to tie the knot soon

ಹೌದು ಇದೀಗ ಈ ಪ್ರಣಯ ಹಕ್ಕಿಗಳು ತಮ್ಮ ಜೋಡಿಗೆ ಹಾಗೂ ಸಂಬಂಧಕ್ಕೆ ನಿಜವಾದ ಅರ್ಥ ಕೋಡೋಕೆ ಮುಂದಾಗಿದ್ದಾರೆ. ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಈ ವಿಷಯವನ್ನು ಅಧಿಕೃತವಾಗಿ ಮತ್ತು ಸಾರ್ವಜನಿಕವಾಗಿ ಘೋಷಿಸಲು ತಿರ್ಮಾನಿಸಿದ್ದಾರೆ.

2016 ಫೆಬ್ರವರಿಯಲ್ಲಿ ರಣವೀರ್ ಮತ್ತು ದೀಪಿಕಾ ಅವರ ನಿಶ್ವಿತಾರ್ಥ ಕಾರ್ಯಕ್ರಮ ಎರಡು ಕುಟುಂಬಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಬಾಲಿವುಡ್ ಮೂಲಗಳು ಮಾಹಿತಿ ನೀಡಿವೆ.[ಮಸ್ತಾನಿ ಕಲೆಕ್ಷನ್: ಅಬ್ಬಬ್ಬಾ ಇದೇನೋ ಹಣಾನೋ, ಹುಣಸೇ ಬೀಜಾನೋ]

Ranveer Singh and Deepika Padukone to tie the knot soon

ಇನ್ನು ಡಿಂಪಲ್ ಕ್ವೀನ್ ದೀಪಿಕಾ ಅವರನ್ನು ತಮ್ಮ ಮನೆಯ ಸೊಸೆಯನ್ನಾಗಿ ತಂದುಕೊಳ್ಳಲು ರಣವೀರ್ ಸಿಂಗ್ ಅವರ ಮನೆಯಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ಡಿಪ್ಪಿ ಮನೆಯ ಪೋಷಕರು ಈ ಮೊದಲು ವಿವಾಹಕ್ಕೆ ಸ್ವಲ್ಪ ಹಿಂದೇಟು ಹಾಕುತ್ತಿದ್ದರು.[ನಾನು ಹಾಕಿಕೊಂಡಿರುವ ಟ್ಯಾಟೂ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಬೇಕೆ?]

ಆದರೆ ಇದೀಗ ದೀಪಿಕಾ ಮನೆಯವರು ಕೂಡ ಈ ಮದುವೆಗೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ಪೂರ್ಣ ಸಮ್ಮತ ನೀಡಿದ್ದಾರೆ. ಆದ್ದರಿಂದ ಅತೀ ಶೀಘ್ರದಲ್ಲೇ ಎರಡು ಕುಟುಂಬಗಳು ಪ್ರಣಯ ಹಕ್ಕಿಗಳ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

English summary
We all know about the alleged romance between Ranveer Singh and Deepika Padukone. The lates buzz Bollywood's golden girl Deepika Padukone and lover boy Ranveer Singh are all set to make their relationship official by getting engaged in February 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada