ಜಾನಿ ಸಿನ್ಸ್ ದಾಂಪತ್ಯ ಸಮಸ್ಯೆಗೆ ರಣ್‌ವೀರ್ ಸಿಂಗ್ ಪರಿಹಾರ; ವಿಡಿಯೋ ವೈರಲ್

ರೀಲ್‌ನಲ್ಲೂ ರಿಯಲ್‌ ಲೈಫ್‌ನಲ್ಲೂ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಬೋಲ್ಡ್. ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ರಣ್‌ವೀರ್ ಎಲ್ಲರ ಹುಬ್ಬೇರಿಸಿದ್ದರು. ಇತ್ತೀಚೆಗೆ ಬೆತ್ತಲೆ ಫೋಟೊಶೂಟ್ ಮೂಲಕ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದರು.

ಕಳೆದ ವರ್ಷ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಮಾಡಿ ಗೆದ್ದ ರಣ್‌ವೀರ್‌ ಈಗ 'ಸಿಂಗಂ ಅಗೇನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟನೆ ಜೊತೆ ಜೊತೆಗೆ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ವಿವಿಧ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗುವ ಮೂಲಕ ಕೋಟಿ ಕೋಟಿ ಗಳಿಸುತ್ತಿದ್ದಾರೆ.

Ranveer Singh and Johnny Sins bold Care ad Goes viral

ನೀಲಿ ಚಿತ್ರಗಳ ನಟ ಜಾನಿ ಸಿನ್ಸ್ ಜೊತೆ ಇದೀಗ ಜಾಹೀರಾತಿನಲ್ಲಿ ಕಾಣಿಸಿಕೊಂಡು ರಣ್‌ವೀರ್‌ ಸಿಂಗ್ ಸುದ್ದಿಯಲ್ಲಿದ್ದಾರೆ. ಲೈಂಗಿಕ ಆರೋಗ್ಯ, ಸಂರಕ್ಷಣೆ ಬಗ್ಗೆ ಮಾಹಿತಿ ನೀಡುವ 'ಬೋಲ್ಡ್‌ ಕೇರ್' ಎನ್ನುವ ಸಂಸ್ಥೆ ಜೊತೆ ಗುಂಡೇ ಸಿನಿಮಾ ನಟ ಕೈ ಜೋಡಿಸಿದ್ದಾರೆ. ಪಾಲುದಾರರು ಆಗಿದ್ದಾರೆ. ಇದೀಗ ಆ ಸಂಸ್ಥೆಯ ಜಾಹೀರಾತಿಗಾಗಿ ನೀಲಿ ಚಿತ್ರಗಳ ನಟ ಜಾನಿ ಸಿನ್ಸ್ ಜೊತೆ ನಟಿಸಿದ್ದಾರೆ.

ಜಾನಿ ಸಿನ್ಸ್ ನೀಲಿ ಚಿತ್ರ ಪ್ರಪಂಚದಲ್ಲಿ ಚಿರಪರಿಚಿತ ಹೆಸರು. ಈತನಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್ನು ಸದ್ಯ ರಿಲೀಸ್ ಆಗಿರುವ 'ಬೋಲ್ಡ್‌ ಕೇರ್' ಜಾಹೀರಾತು ಹಿಂದಿ ಕಿರುತೆರೆ ಧಾರಾವಾಹಿಯನ್ನು ನೆನಪಿಸುವಂತಿದೆ. ಜಾನಿ ಸಿನ್ಸ್ ಅಂದಾಕ್ಷಣ ವಿಚಿತ್ರ ಅಭಿಪ್ರಾಯ ಬರುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಈ ಜಾಹೀರಾತು ಚಿತ್ರೀಕರಿಸಲಾಗಿದೆ.

ಜಾಹೀರಾತಿನಲ್ಲಿ ಜಾನಿ ಸಿನ್ಸ್‌ ಜೊತೆ ಹೆಂಡತಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಲು ಮುಂದಾಗುತ್ತಾಳೆ. ಆತ ಲೈಂಗಿಕವಾಗಿ ಸಮರ್ಥನಲ್ಲ ಎಂದು ಗಲಾಟೆ ಮಾಡುತ್ತಿರುತ್ತಾಳೆ. ಈ ವೇಳೆ ಅತ್ತೆ ಕೆನ್ನೆಗೆ ಬಾರಿಸಿದಾಗ ಆಯತಪ್ಪಿ ಮಹಡಿಯಿಂದ ಆಕೆ ಕೆಳಗೆ ಬೀಳುತ್ತಾಳೆ. ಕೂಡಲೇ ರಣ್‌ವೀರ್ ಸಿಂಗ್ ಕೊಡುವ ಬೋಲ್ಡ್ ಕೇರ್ ಮಾತ್ರೆ ಸೇವಿಸಿ ಜಾನಿ ಸಿನ್ಸ್ ಮೇಲಿನಿಂದ ಜಿಗಿಯುತ್ತಾನೆ. ಹೆಂಡತಿ ಕೆಳಗೆ ಬೀಳುವ ಮುನ್ನ ಆಕೆಯನ್ನು ಖುಷಿಪಡಿಸುತ್ತಾನೆ. ಹೀಗೆ ತಮಾಷೆಯಾಗಿ ಸಾಗುವ ಜಾಹೀರಾತು ಈಗ ವೈರಲ್ ಆಗುತ್ತಿದೆ.

ನೀಲಿ ಚಿತ್ರಗಳ ನಟ ಜಾನಿ ಸಿನ್ಸ್‌ನ ಬಳಸಿಕೊಂಡು ತಮ್ಮ 'ಬೋಲ್ಡ್‌ಕೇರ್' ಕಂಪೆನಿ ಬಗ್ಗೆ ಗಮನ ಸೆಳೆಯಬೇಕು ಎನ್ನುವ ರಣ್‌ವೀರ್ ಪ್ರಯತ್ನ ಯಶಸ್ವಿ ಆಗಿರುವಂತೆ ಕಾಣುತ್ತಿದೆ. ವಿಭಿನ್ನ ಶೈಲಿಯಲ್ಲಿ ಯಾವುದೇ ಅಶ್ಲೀಲತೆ ಇಲ್ಲದೇ ಜಾಹೀರಾತು ಡಿಸೈನ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಕಳೆದ ವರ್ಷವಷ್ಟೇ ರಣ್‌ವೀರ್ ಸಿಂಗ್ ಬೆಂಗಳೂರು ಮೂಲದ 'ಬೋಲ್ಡ್‌ಕೇರ್' ಕಂಪೆನಿ ಜೊತೆ ಕೈ ಜೋಡಿಸಿದ್ದರು. ಹಣ ಹೂಡಿಕೆ ಮಾಡಿದ್ದರು. "ಬೋಲ್ಡ್ ಕೇರ್‌ನ ಮುಖವಾಣಿ ಮತ್ತು ಸಹ-ಮಾಲೀಕನಾಗಿ ಕಂಪೆನಿ ಸೇರಲು ನನಗೆ ಸಂತೋಷವಾಗಿದೆ. ಲೈಂಗಿಕ ಆರೋಗ್ಯ, ಸಮಸ್ಯೆ, ಪರಿಷ್ಕಾರ ನೀಡುವ ಮೂಲಕ ಜನರಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಮುಖ್ಯವಾಗಿ ಪುರುಷರು ಲೈಂಗಿನ ಸಮಸ್ಯೆ, ಸಂರಕ್ಷಣೆ ಕುರಿತು ಹಂಚಿಕೊಳ್ಳಲು ನಾಚಿಕೆ ಪಡುತ್ತಾರೆ. ಈ ಕಂಪೆನಿ ಅಂತಹವರಿಗೆ ಸಹಾಯ ಮಾಡುತ್ತದೆ"

ಲೈಂಗಿಕ ಸಮಸ್ಯೆ ಇರುವ ಪುರುಷರು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸುತ್ತಾರೆ. ಅವರಿಗೆ ಧೈರ್ಯ ತುಂಬುವುದರ ಜೊತೆಗೆ ಸಮಸ್ಯೆ ಬಗೆಹರಿಸಬೇಕು. ಸಮಾಜ ಇಂತಹವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದೇ ಆಲೋಚನೆಯಿಂದ ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲೇ ಕಾಂಡೋಮ್ ಬ್ರ್ಯಾಂಡ್ ಪ್ರಮೋಟ್ ಮಾಡಿದ್ದೆ. ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಲ್ಲಿ ತಿಳುವಳಿಕೆ ಮೂಡಿಸುವ ಕರ್ತವ್ಯ ಎಲ್ಲರದ್ದು" ಎಂದು ರಣ್‌ವೀರ್ ಹೇಳಿದ್ದರು.

More from Filmibeat

English summary
Ranveer Singh collaborates with Johnny Sins for new ad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X