»   » ರಾಜಮೌಳಿ ಮುಂದಿನ ಚಿತ್ರದಲ್ಲಿ ಪ್ರಭಾಸ್, ರಣವೀರ್ ಸಿಂಗ್ ನಾಯಕರು?

ರಾಜಮೌಳಿ ಮುಂದಿನ ಚಿತ್ರದಲ್ಲಿ ಪ್ರಭಾಸ್, ರಣವೀರ್ ಸಿಂಗ್ ನಾಯಕರು?

Posted By:
Subscribe to Filmibeat Kannada

'ಬಾಹುಬಲಿ' ಸಿನಿಮಾ ನೋಡಿದ ಮೇಲೆ ಒಂದು ರೀತಿಯಲ್ಲಿ ಇಡೀ ಭಾರತೀಯ ಸಿನಿಮಾ ರಸಿಕರೆಲ್ಲರೂ ನಿರ್ದೇಶಕ ಎಸ್.ಎಸ್.ರಾಜಮೌಳಿ ಚಿತ್ರಕ್ಕಾಗಿಯೇ ಸದಾ ನಿರೀಕ್ಷಿಸುವ ವಾತಾವರಣ ಸೃಷ್ಟಿಯಾಗಿದೆ. ಹಾಗಿದ್ರೆ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುವುದಕ್ಕೆ ರಾಜಮೌಳಿಯವರೇ "ಬಾಲಿವುಡ್ ನಟ ಅಮೀರ್ ಖಾನ್ ಸ್ಟಾರ್ ಕಾಸ್ಟ್ ನಲ್ಲಿ 'ಮಹಾಭಾರತ' ಸಿನಿಮಾ ಮಾಡುತ್ತೇನೆ. ಆದರೆ ತಕ್ಷಣ ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ" ಎಂದು ಬಾಲಿವುಡ್ ಲೈಫ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ]

ಆದರೀಗ 'ಮಹಾಭಾರತ'ಕ್ಕೂ ಮೊದಲು ರಾಜಮೌಳಿ ಅವರು ಬೇರೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಅಲ್ಲದೇ ಆ ಚಿತ್ರಕ್ಕೆ ಟಾಲಿವುಡ್ ನ ರೆಬೆಲ್ ಸ್ಟಾರ್ ಪ್ರಭಾಸ್ ಅಥವಾ ಬಾಲಿವುಡ್ ನಟ ರಣವೀರ್ ಸಿಂಗ್ ರನ್ನು ನಟನಾಗಿ ಆಯ್ಕೆಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಜಮೌಳಿ ಆಕ್ಷನ್ ಕಟ್ ಹೇಳಲಿರುವ ಆ ಸಿನಿಮಾ ಯಾವುದು? ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..

ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರಲಿದೆ ಫ್ಯಾಂಟಸಿ ಸಿನಿಮಾ

ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಎಸ್.ಎಸ್.ರಾಜಮೌಳಿ 'ಮಹಾಭಾರತ' ಸಿನಿಮಾಗೂ ಮೊದಲು ಫ್ಯಾಂಟಸಿ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಸುದ್ದಿ ಹರಿದಾಡುತ್ತಿದೆ.

ಮೂರು ಭಾಷೆಗಳಲ್ಲಿ ಸಿನಿಮಾ

ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ಮಿಸಬೇಕೆಂದಿರುವ ಫ್ಯಾಂಟಸಿ ಸಿನಿಮಾವನ್ನು ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಆಕ್ಷನ್ ಕಟ್ ಹೇಳುವ ಮಹಾದಾಸೆಯನ್ನು ಹೊಂದಿದ್ದಾರಂತೆ.

ನಟರ ಆಯ್ಕೆಯಲ್ಲಿ ಗೊಂದಲ

ಆದರೆ ರಾಜಮೌಳಿ ತಮ್ಮ ಫ್ಯಾಂಟಸಿ ಸಿನಿಮಾಗೆ 'ಬಾಹುಬಲಿ' ಚಿತ್ರದ ಹೀರೋ ಪ್ರಭಾಸ್ ಅಥವಾ ಬಾಲಿವುಡ್ ನಟ ರಣವೀರ್ ಸಿಂಗ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ. ಕಾರಣ..

ರಣವೀರ್ ಇಂಪ್ರೆಸ್ ಆಗಿದ್ದಾರೆ

'ಬಾಹುಬಲಿ' ನಾಯಕ ನಟ ಪ್ರಭಾಸ್ ತಮ್ಮ ಚಿತ್ರದಲ್ಲಿ ಆಕ್ಟ್ ಮಾಡಿದರೆ ಬಾಕ್ಸ್ ಆಫೀಸ್ ಊಡೀಸ್ ಮಾಡುವುದು ಪಕ್ಕಾ ಎಂಬ ನಂಬಿಕೆ ರಾಜಮೌಳಿಯವರಿಗೆ ಇದೆ. ಆದರೆ ಸದ್ಯದಲ್ಲಿ ಪ್ರಭಾಸ್ 'ಸಾಹೋ' ಸಿನಿಮಾದಲ್ಲಿ ಬಿಜಿ ಆಗಿದ್ದಾರೆ. ಆದ್ದರಿಂದ ಈಗಾಗಲೇ ರಣವೀರ್ ಸಿಂಗ್ ಪಾಪ್ಯುಲಾರಿಟಿ, ನಡತೆ ಮತ್ತು ಬೆಳವಣಿಗೆಯಿಂದ ಇಂಪ್ರೆಸ್ ಆಗಿರುವ ರಾಜಮೌಳಿ ತಮ್ಮ ಫ್ಯಾಂಟಸಿ ಸಿನಿಮಾಗೆ ಅವರನ್ನು ನಾಯಕ ನಟನಾಗಿ ಆಯ್ಕೆ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿಯು ಹರಿದಾಡುತ್ತಿದೆ.

ಪ್ರಭಾಸ್ ಮತ್ತು ರಣವೀರ್ ಇಬ್ಬರೂ ನಟಿಸಬಹುದು

ಅಂದಹಾಗೆ ರಾಜಮೌಳಿ ಬಿಗ್ ಬಜೆಟ್ ನಲ್ಲಿ ಫ್ಯಾಂಟಸಿ ಸಿನಿಮಾ ಮಾಡಲಿದ್ದು, ತಮ್ಮ ಚಿತ್ರಕ್ಕೆ ಪ್ರಭಾಸ್ ಮತ್ತು ರಣವೀರ್ ಸಿಂಗ್ ಇಬ್ಬರನ್ನೂ ಒಳಗೊಂಡ ಮಲ್ಟಿಸ್ಟಾರರ್ ಸಿನಿಮಾ ಮಾಡಲು ಮುಂದಾಗಿ ರೂಮರ್ಸ್ ಗಳಿಗೆಲ್ಲಾ ಬ್ರೇಕ್ ಸಹ ಹಾಕಬಹುದಾದ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

English summary
Rumours are doing the rounds that S.S Rajamouli is keen to cast either Ranveer Singh or Prabhas in his upcoming fantasy film which would be released in Telugu, Tamil and Hindi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada